Lucky People: ಈ 4 ರಾಶಿಯವರಿಗೆ ಕಷ್ಟಪಡದೆಯೇ ಇಷ್ಟವಾಗಿದ್ದು ಸಿಗುತ್ತೆ.. ಅದೃಷ್ಟ ಅಂದ್ರೆ ಹೀಗಿರ್ಬೇಕು!

Lucky Zodiac Signs: ಮೇಷ ರಾಶಿಯ ಜನರಿಗೆ ತಮ್ಮ ಗುರಿ ತಲುಪಲು ಯಾವುದೇ ಅಡ್ಡಿ ಬರುವುದಿಲ್ಲ. ಕರ್ಕಾಟಕ ರಾಶಿಯವರು ಯಾವಾಗಲೂ ತನ್ನ ಸುತ್ತಮುತ್ತಲಿನವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಕನ್ಯಾ ರಾಶಿಯ ಜನರ ಜೀವನದಲ್ಲಿ ಕಠಿಣ ಪರಿಶ್ರಮಗಳಿರುತ್ತವೆ. ಇದರ ಪ್ರತಿಫಲದಿಂದ ಎಂತಹ ಸಮಸ್ಯೆಗಳು ಬಂದರೂ ಅದನ್ನು ಎದುರಿಸಿ ಮುನ್ನಡೆಯುವ ಸಾಮಾರ್ಥ್ಯ ಇವರಲ್ಲಿದೆ.

Written by - Bhavishya Shetty | Last Updated : Mar 24, 2023, 05:18 PM IST
    • ಕೆಲವು ರಾಶಿಯ ಜನರಿಗೆ ಕೆಲವೊಂದು ತಿಂಗಳುಗಳ ಬಹಳ ಅದೃಷ್ಟವನ್ನು ತರುತ್ತವೆ.
    • ಅದರಲ್ಲೂ ಹಬ್ಬಗಳು ಬಂತೆಂದರೆ ಆ ರಾಶಿಯ ಜಾತಕಫಲವು ಉತ್ತುಂಗಕ್ಕೆ ಏರಿ ಜನರಿಗೆ ಶುಭವನ್ನುಂಟು ಮಾಡುತ್ತದೆ.
    • ಇಂದು ನಾವು ಅದಕ್ಕೂ ಮೀರಿದ ನಾಲ್ಕು ರಾಶಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
Lucky People: ಈ 4 ರಾಶಿಯವರಿಗೆ ಕಷ್ಟಪಡದೆಯೇ ಇಷ್ಟವಾಗಿದ್ದು ಸಿಗುತ್ತೆ.. ಅದೃಷ್ಟ ಅಂದ್ರೆ ಹೀಗಿರ್ಬೇಕು!
Lucky Zodiac Signs

Lucky Zodiac Signs: ಕೆಲವು ರಾಶಿಯ ಜನರಿಗೆ ಕೆಲವೊಂದು ತಿಂಗಳುಗಳ ಬಹಳ ಅದೃಷ್ಟವನ್ನು ತರುತ್ತವೆ. ಅದರಲ್ಲೂ ಹಬ್ಬಗಳು ಬಂತೆಂದರೆ ಆ ರಾಶಿಯ ಜಾತಕಫಲವು ಉತ್ತುಂಗಕ್ಕೆ ಏರಿ ಜನರಿಗೆ ಶುಭವನ್ನುಂಟು ಮಾಡುತ್ತದೆ. ಇಂದು ನಾವು ಅದಕ್ಕೂ ಮೀರಿದ ನಾಲ್ಕು ರಾಶಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ರಾಶಿಯ ಜನರಿಗೆ ಕಷ್ಟಪಡದೆಯೇ ಇಷ್ಟವಾಗಿದ್ದು ಸಿಗುತ್ತದೆ ಎಂದು ಹೇಳುತ್ತೆ ಜೋತಿಷ್ಯ ಶಾಸ್ತ್ರ.

ಇದನ್ನೂ ಓದಿ: ಸೊಳ್ಳೆಗಳ ಕಾಟವೇ? ಈ 4 ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ, ಮಂಗಮಾಯವಾಗುತ್ತವೆ

ಮೇಷ ರಾಶಿ – ಈ ರಾಶಿಯ ಜನರಿಗೆ ತಮ್ಮ ಗುರಿ ತಲುಪಲು ಯಾವುದೇ ಅಡ್ಡಿ ಬರುವುದಿಲ್ಲ. ಆದರೆ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಅಪಾಯಗಳು ಎದುರಾದರೂ ಸಹ ಇವರ ಅದೃಷ್ಟ ಬಾನೆತ್ತರದಲ್ಲಿರುತ್ತದೆ. ಇಷ್ಟಪಟ್ಟಿದ್ದೆಲ್ಲಾ ಸುಲಭವಾಗಿ ಈ ರಾಶಿಯವರಿಗೆ ಸಿಗುತ್ತೆ.

ಕರ್ಕಾಟಕ – ಈ ರಾಶಿಯವರು ಯಾವಾಗಲೂ ತನ್ನ ಸುತ್ತಮುತ್ತಲಿನವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಈ ಮಹಾಕಾರ್ಯವೇ ಅವರನ್ನು ಅದೃಷ್ಟವಂತರನ್ನಾಗಿಸುತ್ತದೆ. ಉತ್ತಮ ಗುಣಗಳು ಎಂದಿಗೂ ವ್ಯಕ್ತಿಯನ್ನು ಇತರರಿಗಿಂತ ಶ್ರೇಷ್ಠರನ್ನಾಗಿ ಮಾಡುತ್ತದೆ.  

ಕನ್ಯಾ - ಕನ್ಯಾ ರಾಶಿಯ ಜನರ ಜೀವನದಲ್ಲಿ ಕಠಿಣ ಪರಿಶ್ರಮಗಳಿರುತ್ತವೆ. ಇದರ ಪ್ರತಿಫಲದಿಂದ ಎಂತಹ ಸಮಸ್ಯೆಗಳು ಬಂದರೂ ಅದನ್ನು ಎದುರಿಸಿ ಮುನ್ನಡೆಯುವ ಸಾಮಾರ್ಥ್ಯ ಇವರಲ್ಲಿದೆ. ಈ ರಾಶಿಯವರು ತಮಗೆ ಬೇಕಾದನ್ನು ಪಡೆಯಲು ಏನು ಬೇಕಾದರೂ ಮಾಡುತ್ತಾರೆ. ಇವರೂ ಕೂಡ ಜಾತಕದ ಪ್ರಕಾರ ಅದೃಷ್ಟವಂತರು.

ಸಿಂಹ – ಈ ರಾಶಿಯವರು ಎಂತಹ ಜನರ ಜೊತೆಯೂ ಬೆರೆಯುತ್ತಾರೆ. ಈ ಮೂಲಕ ಇವರಿಗೆ ಉತ್ತಮ ಅವಕಾಶಗಳು ಬರುತ್ತವೆ. ಇದರಿಂದಲೇ ಇವರಿಗೆ ಬಯಸಿದ ಎಲ್ಲವೂ ಜೀವನದಲ್ಲಿ ಸಿಗುತ್ತದೆ.

ಇದನ್ನೂ ಓದಿ: Snake in Dream : ಕನಸಿನಲ್ಲಿ ಹಾವು ಕಂಡರೆ ಶುಭ ಅಥವಾ ಅಶುಭನಾ? ಇಲ್ಲಿ ತಿಳಿಯಿರಿ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News