Lunar Eclipse 2022 Timing: 2022 ರಲ್ಲಿ ಒಟ್ಟು ಎರಡು ಚಂದ್ರಗ್ರಹಣಗಳು ಸಂಭವಿಸಲಿವೆ. ಹಿಂದೂ ಪಂಚಾಂಗದ ಪ್ರಕಾರ, 2022 ರಲ್ಲಿ, ಏಪ್ರಿಲ್ 30 ರಂದು ಸೂರ್ಯಗ್ರಹಣ ಇರಲಿದೆ ಮತ್ತು ಇದೀಗ 2022 ರ ಮೊದಲ ಚಂದ್ರಗ್ರಹಣವು ಮೇ 16 ರಂದು ಸೂರ್ಯಗ್ರಹಣದ 15 ದಿನಗಳ ನಂತರ ಸಂಭವಿಸಲಿದೆ. ಈ ದಿನ ವೈಶಾಖ ಹುಣ್ಣಿಮೆ ಇರಲಿದೆ. ಇದು ಖಗ್ರಾಸ್ ಚಂದ್ರಗ್ರಹಣವಾಗಲಿದೆ. ಈ ವರ್ಷ ಒಟ್ಟು ಎರಡೂ ಚಂದ್ರಗ್ರಹಣಗಳು ಸಂಭವಿಸಲಿವೆ. ಯಾವುದೇ ಗ್ರಹಣ ಶುಭ ಮತ್ತು ಅಶುಭ ಎರಡೂ ಪರಿಣಾಮಗಳನ್ನು ಬೀರುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಹೀಗಾಗಿ ಗ್ರಹಣಗಳ ಪ್ರಭಾವ ವ್ಯಕ್ತಿಗಳ ಜೀವನದ ಮೇಲೂ ಕೂಡ ಇರಲಿದೆ. ಈ ಚಂದ್ರಗ್ರಹಣವು ವಿಶ್ವದ ಹಲವು ಭಾಗಗಳಲ್ಲಿ ಗೋಚರಿಸಲಿದೆ. ಇದೇ ವೇಳೆ, ಅದರ ಪ್ರಭಾವವು ಭಾರತದಲ್ಲಿ ಕಡಿಮೆ ಇರಲಿದೆ.
2022 ರ ಮೊದಲ ಚಂದ್ರಗ್ರಹಣ ಯಾವಾಗ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2022 ರ ಮೊದಲ ಚಂದ್ರಗ್ರಹಣವು ಮೇ 16 ರಂದು ಸಂಭವಿಸಲಿದೆ. ಇನ್ನೊಂದೆಡೆ ಎರಡನೇ ಚಂದ್ರಗ್ರಹಣವು 8 ನವೆಂಬರ್ 2022 ರಂದು ಸಂಭವಿಸಲಿದೆ. ಚಂದ್ರನ ಮೇಲೆ ಭೂಮಿಯ ನೆರಳು ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅಷ್ಟೇ ಅಲ್ಲ ಚಂದ್ರಗ್ರಹಣ ಯಾವಾಗಲೂ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ಹಲವು ರೀತಿಯ ಕೆಲಸಗಳನ್ನು ನಿಷಿದ್ಧ ಎನ್ನಲಾಗಿದೆ.
ಚಂದ್ರಗ್ರಹಣ 2022 ರ ಸಮಯ
ಹಿಂದೂ ಪಂಚಾಂಗದ ಪ್ರಕಾರ, ಭಾರತದಲ್ಲಿ 2022 ರ ಮೊದಲ ಚಂದ್ರಗ್ರಹಣವು ಸೋಮವಾರ, 16 ಮೇ 2022 ರಂದು ಬೆಳಗ್ಗೆ 08:59 ರಿಂದ 10:23 ರವರೆಗೆ ಇರಲಿದೆ. ಜ್ಯೋತಿಷ್ಯದ ಪ್ರಕಾರ, ಬೆಳಗಿನ ಅವಧಿಯಾದ ಕಾರಣ ಈ ಗ್ರಹಣ ಗೋಚರಿಸುವುದಿಲ್ಲ ಎನ್ನಲಾಗಿದೆ, ಆದ್ದರಿಂದ ಅದರ ಸೂತಕ ಅವಧಿ ಭಾರತದಲ್ಲಿ ಮಾನ್ಯವಾಗಿರುವುದಿಲ್ಲ.
ವರ್ಷದ ಮೊದಲ ಚಂದ್ರಗ್ರಹಣ 2022 ಎಲ್ಲೆಲ್ಲಿ ಗೋಚರಿಸಲಿದೆ
ಮೇ 16 ರಂದು ಸಂಭವಿಸಲಿರುವ ಚಂದ್ರಗ್ರಹಣವು ನೈಋತ್ಯ ಯುರೋಪ್, ನೈಋತ್ಯ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕದ ಬಹುತೇಕ ಭಾಗಗಳು, ದಕ್ಷಿಣ ಅಮೆರಿಕಾ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಮತ್ತು ಅಂಟಾರ್ಟಿಕಾ ಮುಂತಾದ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಗೋಚರಿಸಲಿದೆ. ಭಾರತದಲ್ಲಿ ಚಂದ್ರಗ್ರಹಣದ ಅನುಪಸ್ಥಿತಿಯ ಕಾರಣ, ಅದರ ಸೂತಕ ಅವಧಿಯು ಪರಿಣಾಮಕಾರಿಯಾಗಿರುವುದಿಲ್ಲ ಎಂಬುದು ಜೋತಿಷ್ಯ ಪಂಡಿತರ ಅಭಿಪ್ರಾಯ.
ಇದನ್ನೂ ಓದಿ-Shani Amavasya 2022: ಶನಿಯ ಕೃಪೆಗೆ ಪಾತ್ರರಾಗಲು ತುಂಬಾ ವಿಶೇಷವಾಗಿದೆ ಶನಿ ಅಮಾವಾಸ್ಯೆ, ಈ ರೀತಿ ಲಾಭ ಪಡೆಯಿರಿ
ಭಾರತದಲ್ಲಿ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?
ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುತ್ತಿಲ್ಲವಾದ್ದರಿಂದ ಅದರ ಸೂತಕ ಕಾಲಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ. ಇದಲ್ಲದೆ ಈ ಚಂದ್ರಗ್ರಹಣದ ಯಾವುದೇ ಶುಭ ಅಥವಾ ಅಶುಭ ಪರಿಣಾಮ ಭಾರತದಲ್ಲಿ ಇರುವುದಿಲ್ಲ.
ಇದನ್ನೂ ಓದಿ-Chanakya Niti: ಈ ಮೂರು ಸಂಗತಿಗಳಿಂದ ಆದಷ್ಟು ದೂರವಿರಿ, ಜೀವನವೇ ಹಾಳು ಮಾಡುತ್ತವೆ
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.