Mangal Gochar 2022: ಮೇ 17ರವರೆಗೆ ಈ 5 ರಾಶಿಯ ಜನರು ಬಹಳ ಎಚ್ಚರದಿಂದಿರಬೇಕು! ಕಾರಣ ಇಲ್ಲಿದೆ

Mangal Gochar 2022: ಮಂಗಳನ ರಾಶಿ ಪರಿವರ್ತನೆ ಕೆಲವರಿಗೆ ಶುಭವಲ್ಲ. ಮೇ 17 ರವರೆಗೆ ಕುಂಭ ರಾಶಿಯಲ್ಲಿ ಮಂಗಳ (Mangal Transit In Kumbh) ವಿರಾಜಮಾನನಾಗಲಿದ್ದು, ಅಲ್ಲಿಯವರೆಗೂ ಈ 5 ರಾಶಿಯ (Zodiac Signs) ಜನರು ಬಹಳ ಎಚ್ಚರಿಕೆಯಿಂದ ಇರಬೇಕು.

Written by - Nitin Tabib | Last Updated : Apr 11, 2022, 08:06 PM IST
  • ಮಂಗಳ ಅಮಂಗಳ ಮಾಡುವ ಸಾಧ್ಯತೆ
  • ಎಚ್ಚರದಿಂದಿರಬೇಕು ಈ 5 ರಾಶಿಯ ಜನರು
  • ಮೇ 17ರವರೆಗಿನ ಸಮಯ ಕಠಿಣ ಸಮಯ
Mangal Gochar 2022: ಮೇ 17ರವರೆಗೆ ಈ 5 ರಾಶಿಯ ಜನರು ಬಹಳ ಎಚ್ಚರದಿಂದಿರಬೇಕು! ಕಾರಣ ಇಲ್ಲಿದೆ title=
Mangal Gochar 2022

Mangal Gochar 2022: ಧೈರ್ಯ, ಬಲ, ಭೂಮಿಯ ಕಾರಕ ಗ್ರಹ ಮಂಗಳ (Mangal In Kumbh Rashi) ಅಶುಭವಾಗಿದ್ದರೆ, ವ್ಯಕ್ತಿಯು ಅಹಂಕಾರ ಮತ್ತು ತೀವ್ರತರವಾದ ಕೋಪಕ್ಕೆ ಬಲಿಯಾಗುತ್ತಾನೆ. ಜಾತಕದಲ್ಲಿ (Astrology) ದುರ್ಬಲ ಮಂಗಳ ವ್ಯಕ್ತಿಯನ್ನು ಜವಾಬ್ದಾರಿಯಿಂದ ಓಡಿಹೋಗುವಂತೆ ಮಾಡುತ್ತದೆ. ಎಪ್ರಿಲ್ 7 ರಂದು ಮಂಗಳ ಗ್ರಹ (Mangal Gochar Horoscope) ತನ್ನ ರಾಶಿಯನ್ನು ಬದಲಿಸಿ ಕುಂಭ ರಾಶಿಯನ್ನು ಪ್ರವೇಶಿಸಿದ್ದು, ಮುಂಬರುವ ಮೇ 17 ರವರೆಗೆ ಅದೇ ರಾಶಿಯಲ್ಲಿ ಮುಂದುವರೆಯಲಿದೆ. ಈ ಸಮಯವು 5 ರಾಶಿಗಳ ಜನರಿಗೆ ನಕಾರಾತ್ಮಕವೆಂದು ಸಾಬೀತಾಗುವ ಸಾಧ್ಯತೆ ಇದೆ. ಹೀಗಾಗಿ ಈ ರಾಶಿಗಳ (Mangal Gochar Rashifal) ಜನರು ಈ ಅವಧಿಯಲ್ಲಿ ಸಾಕಷ್ಟು ಜಾಗರೂಕತೆ ವಹಿಸುವ ಅವಶ್ಯಕತೆ ಇದೆ.

ಮೇಷ ರಾಶಿ - ಮೇಷ ರಾಶಿಯ ಜನರ ಪ್ರೇಮ ಜೀವನಕ್ಕೆ ಇದು ಉತ್ತಮ ಸಮಯವಲ್ಲ. ಆತ್ಮೀಯರೊಂದಿಗಿನ ಸಂಬಂಧವೂ ಹದಗೆಡಬಹುದು. ಇದಲ್ಲದೇ ವೃತ್ತಿ-ವ್ಯವಹಾರದಲ್ಲಿ ಸಮಸ್ಯೆಗಳಿರಬಹುದು. ನ್ಯಾಯಾಲಯದ ವಿಷಯಗಳು ನಿಮಗೆ ತೊಂದರೆ ನೀಡಲಿವೆ.

ಕರ್ಕ ರಾಶಿ - ಈ ಸಮಯವು ಕರ್ಕ ರಾಶಿಯವರಿಗೆ ಆರ್ಥಿಕ ತೊಂದರೆಗಳನ್ನು ತರಬಹುದು. ಇದು ನಿಮ್ಮಲ್ಲಿ ಉದ್ವೇಗವನ್ನು ಹೆಚ್ಚಿಸುತ್ತದೆ ಮತ್ತು ಸಾಲ ಅಥವಾ ಸಾಲವನ್ನು ತೆಗೆದುಕೊಳ್ಳುವ ಪರಿಸ್ಥಿತಿಗೆ ಕಾರಣವಾಗಲಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ವಿವಾಹಿತರು ತಮ್ಮ ಸಂಗಾತಿಯ ಬಗ್ಗೆ ತಪ್ಪು ತಿಳುವಳಿಕೆಗೆ ಬಲಿಯಾಗಬಹುದು. ಹೀಗಾಗಿ ಅಂತಹ ಪರಿಸ್ಥಿತಿಯನ್ನು ತಪ್ಪಿಸಿ.

ಕನ್ಯಾ ರಾಶಿ - ಕನ್ಯಾ ರಾಶಿಯ ಜನರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅತ್ಯಲ್ಪ ಲಾಭದ ಸಾಧ್ಯತೆ ಇರುವುದರಿಂದ ಹೂಡಿಕೆ ಮಾಡದೇ ಇದ್ದರೆ ಉತ್ತಮ. ಸಾಲದ ವಹಿವಾಟುಗಳನ್ನು ತಪ್ಪಿಸಿ. ಒಟ್ಟಿನಲ್ಲಿ ಈ ಸಮಯವನ್ನು ತಾಳ್ಮೆಯಿಂದ ಕಳೆಯಿರಿ. ಒಳ್ಳೆಯ ಸಮಯ ಖಂಡಿತವಾಗಿಯೂ ಬಂದೆ ಬರುತ್ತದೆ.

ವೃಶ್ಚಿಕ ರಾಶಿ - ವೃಶ್ಚಿಕ ರಾಶಿಯ ಜನರು ತಮ್ಮ ಕೋಪವನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ದೊಡ್ಡ ನಷ್ಟವನ್ನೇ ಅನುಭವಿಸಬೇಕಾಗಬಹುದು. ಮನೆಯಲ್ಲಿ ಕಲಹ ಉಂಟಾಗಬಹುದು. ಕೆಲವು ವಿವಾಹಿತರ ಸಂಬಂಧ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಶ್ರಮದ ಪೂರ್ಣ ಫಲ ಪ್ರಾಪ್ತಿಯಾಗುವುದಿಲ್ಲ.

ಇದನ್ನೂ ಓದಿ-Rahu-Ketu Gochar: ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲು ಬರುತ್ತಿದ್ದಾರೆ ರಾಹು ಕೇತು, ನಿಮ್ಮ ಜೀವನದಲ್ಲಗಳಿವೆ ಈ ಬದಲಾವಣೆ

ಕುಂಭ ರಾಶಿ - ಕುಂಭ ರಾಶಿಯವರಿಗೆ ಈ ಅವಧಿಯಲ್ಲಿ ಹಲವು ವಿಷಯಗಳಲ್ಲಿ ಕಷ್ಟ ಎದುರಾಗಬಹುದು. ಕೋಪದ ಕಾರಣ ಅನಗತ್ಯ ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು ಕೂಡ ಅದರಲ್ಲಿ ಒಂದು. ಇದು ಅನಿಯಂತ್ರಿತ ವೆಚ್ಚಗಳು ಅಥವಾ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಅವಧಿಯಲ್ಲಿ ನೀವು ಶತ್ರುಗಳಿಂದ ದೂರವಿರಬೇಕು.

ಇದನ್ನೂ ಓದಿ-Vastu Tips: ಸಂಜೆ ಹೊತ್ತು ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ, ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ಆರಂಭವಾಗುತ್ತದೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News