Mercury Transit 2021: ನವೆಂಬರ್ 2 ರಿಂದ ಈ ಜಾತಕದವರ ಭಾಗ್ಯ ಸೂರ್ಯನ ಹಾಗೆ ಬೆಳಗಲಿದೆ, ನಿಮ್ಮ ರಾಶಿ ಇದೆಯಾ ಪರಿಶೀಲಿಸಿ

Mercury Transit 2021 - ಬುಧ (Mercury) ಕನ್ಯಾರಾಶಿಯನ್ನು (Virgo) ತೊರೆದು ತುಲಾ (Libra) ರಾಶಿಯನ್ನು ಪ್ರವೇಶಿಸಲಿದ್ದಾನೆ. ಬುಧನ ಈ ಸ್ಥಾನ ಪಲ್ಲಟದಿಂದ ನಾಲ್ಕು ರಾಶಿಗಳ ಜನರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ. 

Written by - Nitin Tabib | Last Updated : Oct 27, 2021, 12:14 PM IST
  • ಬುಧ ಕನ್ಯಾರಾಶಿಯನ್ನು ತೊರೆದು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಬುಧನ ಈ ಸ್ಥಾನ ಪಲ್ಲಟದಿಂದ ನಾಲ್ಕು ರಾಶಿಗಳ ಜನರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ.
  • ನವೆಂಬರ್ 21 ರವರೆಗೆ ಬುಧ ತುಲಾ ರಾಶಿಯಲ್ಲಿ ಉಳಿಯಲಿದ್ದಾನೆ.
Mercury Transit 2021: ನವೆಂಬರ್ 2 ರಿಂದ ಈ ಜಾತಕದವರ ಭಾಗ್ಯ ಸೂರ್ಯನ ಹಾಗೆ ಬೆಳಗಲಿದೆ, ನಿಮ್ಮ ರಾಶಿ ಇದೆಯಾ ಪರಿಶೀಲಿಸಿ

ನವದೆಹಲಿ: Budh Transit In November 2021 - ಗ್ರಹಗಳ ರಾಶಿ ಪರಿವರ್ತನೆ (Grah Rashi Parivartan) ಪ್ರತಿಯೊಬ್ಬರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ, ಆದ್ದರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ಗ್ರಹದ ರಾಶಿ ಬದಲಾವಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಬದಲಾವಣೆಗಳ ಆಧಾರದ ಮೇಲೆ, ಜ್ಯೋತಿಷ್ಯ (Astrology)ಲೆಕ್ಕಾಚಾರಗಳನ್ನು ಮಾಡುವ ಮೂಲಕ ಭವಿಷ್ಯವನ್ನು ಹೇಳುತ್ತಾರೆ. ಗತಿಸುತ್ತಿರುವ ವರ್ಷ 2021 ರ ನವೆಂಬರ್ ತಿಂಗಳ ಕುರಿತು ಹೇಳುವುದಾದರೆ, ಈ ತಿಂಗಳಲ್ಲೂ ಪ್ರಮುಖ ಬದಲಾವಣೆಗಳು ನಡೆಯಲಿವೆ. ನವೆಂಬರ್ 2, 2021 ರಂದು, ಬುದ್ಧಿವಂತಿಕೆ, ಉದ್ಯೋಗ-ವ್ಯವಹಾರ ಮತ್ತು ಹಣದ ಕಾರಕನಾಗಿರುವ ಬುಧ   (Mercury)  ತುಲಾ ರಾಶಿಗೆ  (Libra) ಪ್ರವೇಶಿಸುತ್ತಿದ್ದಾನೆ. ನವೆಂಬರ್ 21 ರವರೆಗೆ ಬುಧ ತುಲಾ ರಾಶಿಯಲ್ಲಿ ಉಳಿಯಲಿದ್ದಾನೆ. 4 ರಾಶಿಚಕ್ರದ (Zodiac Signs) ಜನರಿಗೆ ಮಂಗಳಕರವನ್ನು ದಯಪಾಲಿಸಲಿದ್ದಾನೆ.

ಈ ರಾಶಿಚಕ್ರದ ಜನರ ಭಾಗ್ಯ ಬೆಳಗಲಿದೆ
ಮೇಷ ರಾಶಿ -
ಬುಧನ ರಾಶಿ ಪರಿವರ್ತನೆ ಈ ಜಾತಕದ ಜನರಿಗೆ ಹಲವು ಸಮಸ್ಯೆಗಳಿಂದ ಮುಕ್ತಿ ನೀಡಲಿದೆ. ನೌಕರಿ ಮತ್ತು ವ್ಯಾಪಾರದಲ್ಲಿ ಬರತಿರತಕ್ಕಂತಹ ಅಡಚಣೆಗಳು ನಿವಾರಣೆಯಾಗಲಿವೆ ಹಾಗೂ ಅಪಾರ ಯಶಸ್ಸು ಸಿಗಲಿದೆ, ಧನ, ಮಾನ, ಸನ್ಮಾನ ಪ್ರಾಪ್ತಿಯಾಗಲಿದೆ. ಕೌಟುಂಬಿಕ ಜೀವನ ಕೂಡ ಉತ್ತಮವಾಗಿರಲಿದೆ.

ಕರ್ಕ ರಾಶಿ - ಈ ರಾಶಿಯ ಜಾತಕದ ಜನರ ಮೇಲೂ ಕೂಡ ಬುಧನ ಕೃಪಾವೃಷ್ಟಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯಾಗಲಿದೆ. ವ್ಯಾಪಾರ ಹೆಚ್ಚಾಗಲಿದೆ. ಧನಲಾಭ ಉಂಟಾಗಲಿದೆ. ನಿಂತುಹೋಗಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಒಟ್ಟಾರೆ ಹೇಳುವುದಾದರೆ ಈ ಸಮಯ ನಿಮಗೆ ಸುಖದ ಅನುಭವ ನೀಡಲಿದೆ.

ಕನ್ಯಾ ರಾಶಿ - ತುಲಾ ರಾಶಿಗೆ ಬುಧನ ಪ್ರವೇಶ ಕನ್ಯಾ ರಾಶಿಯ ಜಾತಕದವರಿಗೆ ಹಲವು ಸಮಸ್ಯೆಗಳಿಂದ ಮುಕ್ತಿ ನೀಡಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕರಿಯರ್ ಉತ್ತಮವಾಗಿರಲಿದೆ. ಕೆಲಸ ಕಾರ್ಯಗಳಲ್ಲಿ ಲಾಭ ಸಿಗಲಿದೆ.

ಇದನ್ನೂ ಓದಿ-Diwali 2021: ದೀಪಾವಳಿಯಂದು ಲಕ್ಷ್ಮಿಯೊಂದಿಗೆ ಈ ದೇವರನ್ನು ಪೂಜಿಸಬೇಡಿ

ಮಕರ ರಾಶಿ -  ಬುಧ ತುಲಾ ರಾಶಿಗೆ ಪ್ರವೇಶಿಸುತ್ತಿದ್ದಂತೆ, ಮಕರ ರಾಶಿಯವರ ದೀರ್ಘಕಾಲದ ಸಿಲುಕಿ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ನೀವು ನಿರೀಕ್ಷಿಸಿದ ಯಶ ನಿಮಗೆ ಸಿಗಲಿದೆ. ವೃತ್ತಿಜೀವನದಲ್ಲಿ ನಿಮ್ಮ ಮನಸ್ಸಿಗೆ ಹಿಡಿಸುವ ಅವಕಾಶ ಸಿಗಲಿದೆ. ನೌಕರಿಯಲ್ಲಿ ಬದಲಾವಣೆ ಸಾಧ್ಯತೆ.

ಇದನ್ನೂ ಓದಿ- Astrology: ಪತಿಯನ್ನು ಕಣ್ಸನ್ನೆಯಲ್ಲಿಯೇ ಕುಣಿಸುತ್ತಾರಂತೆ ಈ 4 ರಾಶಿಯ ಹುಡುಗಿಯರು

(ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನೂ ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ)

ಇದನ್ನೂ ಓದಿ-Atrology : 60 ವರ್ಷಗಳ ನಂತರ ಬಂದಿದೆ ಈ ದಿನ : ದೀಪಾವಳಿಗಾಗಿ ಶಾಪಿಂಗ್ ಮಾಡಲು ಮಂಗಳಕರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News