ಈ ಐದು ಆಹಾರಗಳನ್ನು ಮಿಸ್ ಆಗಿ ಕೂಡ ಫ್ರಿಡ್ಜ್‌ನಲ್ಲಿ ಇಡಬೇಡಿ

ನಾವು ದಿನ ನಿತ್ಯ ಬಳಸುವ ಆಹಾರ ಪದಾರ್ಥಗಳು ಫ್ರೇಶ್ ಆಗಿರಲೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹಾಗಾಗಿಯೇ, ಇವುಗಳ ತಾಜಾತನವನ್ನು ಕಾಪಾಡಿಕೊಳ್ಳಲು ಅವುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಕೆಲವು ಆಹಾರ ಪದಾರ್ಥಗಳು ಫ್ರಿಡ್ಜ್‌ನಲ್ಲಿಟ್ಟರೆ ಹಾಳಾಗುತ್ತವೆ ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Sep 22, 2023, 12:40 PM IST
  • ಈ ಆಹಾರಗಳನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದು
  • ಈ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವು ತ್ವರಿತವಾಗಿ ಹಾಳಾಗುತ್ತವೆ.
  • ಮಾತ್ರವಲ್ಲ, ಇದು ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ.
ಈ ಐದು ಆಹಾರಗಳನ್ನು ಮಿಸ್ ಆಗಿ ಕೂಡ ಫ್ರಿಡ್ಜ್‌ನಲ್ಲಿ ಇಡಬೇಡಿ  title=

Things Never Keep In Fridge: ಸಾಧ್ಯವಾದಷ್ಟು ಕಾಲ ಹಣ್ಣುಗಳು, ತರಕಾರಿಗಳನ್ನು ತಾಜಾವಾಗಿಡಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಕೆಲವು ಹಣ್ಣು-ತರಕಾರಿಗಳು ಫ್ರಿಡ್ಜ್‌ನ ತಂಪಾದ ತಾಪಮಾನ ಮತ್ತು ತೇವಾಂಶಕ್ಕೆ ಹಾಳಾಗುತ್ತವೆ. ಹಾಗಾಗಿ, ಆ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಬಾರದು ಎಂದು ಹೇಳಲಾಗುತ್ತದೆ. 

ಫ್ರಿಡ್ಜ್‌ನಲ್ಲಿಟ್ಟರೆ ಹಾಳಾಗುವಂತಹ ಕೆಲವು ಹಣ್ಣು, ತರಕಾರಿಗಳು ಯಾವುದು ಎಂದು ನೋಡುವುದಾದರೆ... 
ಟೊಮ್ಯಾಟೋ: 

ಟೊಮ್ಯಾಟೋವನ್ನು ಫ್ರಿಡ್ಜ್‌ನ ಒಳಗೆ ಇಡುವುದರಿಂದ  ತ್ವರಿತವಾಗಿ ಹಾಳಾಗುತ್ತವೆ. ಟೊಮ್ಯಾಟೋವನ್ನು ಶೈತ್ಯೀಕರಣಗೊಳಿಸುವುದರ್ಫಿಂದ ಅವು ಪರಿಮಳ ಕಳೆದುಕೊಳ್ಳಬಹುದು. ಫ್ರಿಡ್ಜ್‌ನ ಒಳಗಿನ ತಂಪಾದ, ಆರ್ದ್ರ ವಾತಾವರಣವು ಟೊಮಾಟೊಗಳ ರುಚಿಯನ್ನು ಕೆಡಿಸುವುದರ ಜೊತೆಗೆ ಇದು ಆರೋಗ್ಯಕ್ಕೂ ಹಾನಿಕಾರಕವಾಗಿದೆ. 

ಇದನ್ನೂ ಓದಿ- ದೇಹ ಪೂರ್ತಿ ಸಣ್ಣಗಾಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ ? ಇಂದೇ ಈ ಪಾನೀಯ ಟ್ರೈ ಮಾಡಿ

ಈರುಳ್ಳಿ: 
ಈರುಳ್ಳಿಯನ್ನು ಯಾವಾಗಲೂ ಕೋಣೆಯ ಉಷ್ಣಾಂಶದಲ್ಲಿ ಶೇಖರಿಸಿಡಿದಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಏಕೆಂದರೆ, ಈರುಳ್ಳಿ ಹೆಚ್ಚಿನ ತೇವಾಂಶವನ್ನು ಹೊಂದಿರುತ್ತದೆ. ಇವುಗಳನ್ನು ಫ್ರಿಡ್ಜ್‌ನಲ್ಲಿ ಅಥವಾ ಗಾಳಿಯಾಡದ ಕಂಟೇನರ್‌ನಲ್ಲಿ ಸಂಗ್ರಹಿಸುವುದರಿಂದ ಇವು ಬೇಗನೆ ಕೊಳೆಯುತ್ತವೆ. 

ಆಲೂಗಡ್ಡೆ: 
ಆಲೂಗಡ್ಡೆಯನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದರಿಂದ ಇದು ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ. ಇದರಿಂದಾಗಿ ಆಲೂಗಡ್ಡೆ ರುಚಿ, ವಿನ್ಯಾಸ ಎರಡರ ಮೇಲೂ ಪರಿಣಾಮ ಬೀರಬಹುದು. 

ಇದನ್ನೂ ಓದಿ-  ಈ ಕಾಳನ್ನು ಅರೆದು ಹಚ್ಚಿದರೆ ಬಿಳಿ ಕೂದಲು ನಿಮಿಷಗಳಲ್ಲಿ ಕಪ್ಪಾಗುವುದು!

ಬೆಳ್ಳುಳ್ಳಿ: 
ಈರುಳ್ಳಿಯಂತೆ ಬೆಳ್ಳುಳ್ಳಿಯೂ ಸಹ ಶುಷ್ಕ ಮತ್ತು ತಂಪಾದ ವಾತಾವರಣಕ್ಕೆ ಆದ್ಯತೆ ನೀಡುತ್ತದೆ. ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸುವುದರಿಂದ ಅದು ಬೇಗೆ ಮೊಳಕೆಯೊಡಿಯುತ್ತದೆ. 

ಬ್ರೆಡ್: 
ರೆಫ್ರಿಜರೇಟರ್ ಬ್ರೆಡ್ ಅನ್ನು ಅಚ್ಚೊತ್ತದಂತೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಫ್ರಿಡ್ಜ್‌ನ ಆರ್ದ್ರತೆಯು ಬ್ರೆಡ್‌ನಿಂದ ತೇವಾಂಶವನ್ನು ಹೊರತೆಗೆಯುತ್ತದೆ. ಮಾತ್ರವಲ್ಲದೆ, ಇದು ಮೃದುತ್ವವನ್ನು ಕೂಡ ಕಳೆದುಕೊಳ್ಳುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News