Pitra Paksha 2022: ಪಿತೃಪಕ್ಷದಲ್ಲಿ ಮರೆತೂ ಕೂಡ ಈ ನಿಯಮಗಳನ್ನು ಉಲ್ಲಂಘಿಸಬೇಡಿ

Pitra Paksha 2022 Rules: ಭಾದ್ರಪದ ಮಾಸದ ಹುಣ್ಣಿಮೆಯ ತಿಥಿಯಿಂದ ಪಿತೃಪಕ್ಷ ಅಥವಾ ಶ್ರಾದ್ಧ ಆರಂಭಗೊಳ್ಳುತ್ತದೆ. ಮುಂದಿನ 15 ದಿನಗಳು ಪೂರ್ವಜರಿಗೆ ಸಮರ್ಪಿತವಾಗಿವೆ. ಈ ದಿನಗಳಲ್ಲಿ ತರ್ಪಣ, ದಾನ, ಧರ್ಮ-ಕರ್ಮ ಇತ್ಯಾದಿಗಳ ವಿಶೇಷ ಮಹತ್ವವಿರುತ್ತದೆ. ಆದರೆ, ಈ ಅವಧಿಯಲ್ಲಿ ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ. 

Written by - Nitin Tabib | Last Updated : Aug 22, 2022, 06:25 PM IST
  • ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಶ್ರಾದ್ಧ ಅಥವಾ ಪಿತೃಪಕ್ಷಕ್ಕೆ ವಿಶೇಷ ಮಹತ್ವವಿದೆ.
  • ಈ 15 ದಿನಗಳಲ್ಲಿ ಪೂರ್ವಜರನ್ನು ನೆನಪಿಸಿಕೊಂಡು ಪೂಜೆ, ತರ್ಪಣ, ಧರ್ಮಕರ್ಮ, ಇತ್ಯಾದಿಗಳನ್ನು ನಡೆಸಲಾಗುತ್ತದೆ.
  • ಧಾರ್ಮಿಕ ನಂಬಿಕೆಗಳ ಪ್ರಕಾರ ಈ 15 ದಿನಗಳಲ್ಲಿ ಪಿತೃರು ಭೂಮಿಗೆ ಆಗಮಿಸುತ್ತಾರೆ ಎನ್ನಲಾಗುತ್ತದೆ.
Pitra Paksha 2022: ಪಿತೃಪಕ್ಷದಲ್ಲಿ ಮರೆತೂ ಕೂಡ ಈ ನಿಯಮಗಳನ್ನು ಉಲ್ಲಂಘಿಸಬೇಡಿ title=
Pitru Paksha 2022

Shradh 2022 Date: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಶ್ರಾದ್ಧ ಅಥವಾ ಪಿತೃಪಕ್ಷಕ್ಕೆ ವಿಶೇಷ ಮಹತ್ವವಿದೆ. ಈ 15 ದಿನಗಳಲ್ಲಿ ಪೂರ್ವಜರನ್ನು ನೆನಪಿಸಿಕೊಂಡು ಪೂಜೆ, ತರ್ಪಣ, ಧರ್ಮಕರ್ಮ, ಇತ್ಯಾದಿಗಳನ್ನು ನಡೆಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ 15 ದಿನಗಳಲ್ಲಿ ಪಿತೃರು ಭೂಮಿಗೆ ಆಗಮಿಸುತ್ತಾರೆ ಎನ್ನಲಾಗುತ್ತದೆ. ಅಶ್ವಿನಿ ಮಾಸದ ಪ್ರತಿಪದೆಯಿಂದ ಅಮಾವಾಸ್ಯೆಯವರೆಗೆ ಯಮರಾಜ ಪಿತೃರಿಗೆ ಮುಕ್ತಿ ನೀಡುತ್ತಾನೆ. ಇದರಿಂದ ಪಿತೃರು ಭೂಮಿಗೆ ಬಂದು ತನ್ನ ಕುಟುಂಬ ಸದಸ್ಯರ ಮಧ್ಯೆ ಅನ್ನ-ಜಲ ಸೇವಿಸಿ ತೃಪ್ತರಾಗುತ್ತಾರೆ. ತರ್ಪಣ, ಪಿಂಡದಾನ ಹಾಗೂ ಧರ್ಮ-ಕರ್ಮ ಇತ್ಯಾದಿಗಳಿಂದ ಪಿತೃರನ್ನು ಸ್ಮರಿಸಿಕೊಳ್ಳಲಾಗುತ್ತದೆ ಹಾಗೂ ತಿಥಿಗೆ ಅನುಗುಣವಾಗಿ ಬ್ರಾಹ್ಮಣರಿಗೆ ಭೋಜನ ನೀಡಲಾಗುತ್ತದೆ.

ಬಂಧುಗಳು ಮಾಡುವ ಈ ಕಾರ್ಯಗಳಿಂದ ಪೂರ್ವಜರ ಆತ್ಮಗಳು ಸಂತೃಪ್ತಿ ಹೊಂದಿ ತಮ್ಮ ವಂಶಜರನ್ನು ಸಂತಸದಿಂದ ಆಶೀರ್ವದಿಸುತ್ತಾರೆ. ಈ ಬಾರಿಯ ಪಿತೃ ಪಕ್ಷವು ಶನಿವಾರ, ಸೆಪ್ಟೆಂಬರ್ 10, 2022 ರಿಂದ ಪ್ರಾರಂಭವಾಗುತ್ತದೆ. ಮತ್ತು ಸೆಪ್ಟೆಂಬರ್ 25 ರವರೆಗೆ ಇರುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ದಾನ ಮಾಡುವುದರಿಂದ ನಮ್ಮ ಜಾತಕದಲ್ಲಿ ಪಿತೃದೋಷದ ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ. ಈ ದಿನಗಳಲ್ಲಿ ಕೆಲ ಕೆಲಸಗಳನ್ನು ಮಾಡುವುದನ್ನು ನಿಷಿದ್ಧ ಎಂದು ಹೇಳಲಾಗಿದೆ. ಯಾವ ನಿಯಮಗಳನ್ನು ಅನುಸರಿಸುವುದು ಅನಿವಾರ್ಯ ತಿಳಿದುಕೊಳ್ಳೋಣ ಬನ್ನಿ.

ತಟ್ಟೆಯಲ್ಲಿ ಆಹಾರ
ಧಾರ್ಮಿಕ ಗ್ರಂಥಗಳ ಪ್ರಕಾರ, ಪಿತೃ ಪಕ್ಷದ ದಿನದಂದು ಬ್ರಾಹ್ಮಣರಿಗೆ ಊಟ ನೀಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಬಾಳೆಯ ಎಲೆಯ ಮೇಲೆಯೇ ಆಹಾರ ಸೇವಿಸಬೇಕು. ಅಲ್ಲದೆ, ಈ ದಿನಗಳಲ್ಲಿ ಲೋಹದ ಪಾತ್ರೆಯನ್ನು ಮರೆತೂ ಕೂಡ ಬಳಸಬೇಡಿ. 

ಯಾರನ್ನೂ ಅಗೌರವಿಸಬೇಡಿ
ಈ ದಿನಗಳಲ್ಲಿ ಯಾವುದೇ ಭಿಕ್ಷುಕ ಅಥವಾ ಅತಿಥಿ ನಿಮ್ಮ ಮನೆ ಬಾಗಿಲಿಗೆ ಬಂದರೆ, ನೀರು ಮತ್ತು ಆಹಾರವಿಲ್ಲದೆ ಅವರನ್ನು ಹೋಗಲು ಬಿಡಬೇಡಿ. ಪಿತೃ ಪಕ್ಷದಲ್ಲಿ, ಪೂರ್ವಜರು ಯಾವುದೇ ರೂಪದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಬಹುದು ಎಂದು ನಂಬಲಾಗಿದೆ. ಆದ್ದರಿಂದ ಅವರನ್ನು ಎಂದಿಗೂ ಅಗೌರವ ಮಾಡಬೇಡಿ. ಬದಲಿಗೆ ಅವರಿಗೆ ಒಳ್ಳೆಯ ಆಹಾರ ಮತ್ತು ನೀರನ್ನು ನೀಡುವ ಮೂಲಕ ಅವರನ್ನು ಗೌರವಿಸಿ.

ತಾಳ್ಮೆಯಿಂದಿರಬೇಕು
ಪಿತೃ ಪಕ್ಷದ ಸಮಯದಲ್ಲಿ, ಪತಿ ಮತ್ತು ಪತ್ನಿ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಬ್ರಹ್ಮಚರ್ಯ ವ್ರತವನ್ನು ಆಚರಿಸಬೇಕು. ಈ ದಿನಗಳಲ್ಲಿ ಪೂರ್ವಜರು ಮನೆಯಲ್ಲಿ ಸೂಕ್ಷ್ಮ ರೂಪದಲ್ಲಿ ಇರುತ್ತಾರೆ ಎಂದು ನಂಬಲಾಗಿದೆ. ಈ ದಿನಗಳು ಪೂರ್ವಜರನ್ನು ಸ್ಮರಿಸುವುದಕ್ಕಾಗಿ ಮತ್ತು ಅವರ ಆಶೀರ್ವಾದ ಪಡೆಯುವುದಕ್ಕಾಗಿ ತುಂಬಾ ಮುಖ್ಯವಾಗಿವೆ.

ಕ್ಷೌರ ಮಾಡಿಕೊಳ್ಳಬೇಡಿ
ಈ ದಿನಗಳಲ್ಲಿ ಪುರುಷರು ಗಡ್ಡ ಮತ್ತು ಮೀಸೆಯನ್ನು ಕತ್ತರಿಸಬಾರದು ಎಂಬ ನಂಬಿಕೆ ಇದೆ. ಇದರೊಂದಿಗೆ ಶ್ರಾದ್ಧದ ಪಿಂಡಗಳನ್ನು ಹಸು ಅಥವಾ ಬ್ರಾಹ್ಮಣನಿಗೆ ನೀಡಬೇಕು.

ವಿವಾದಗಳಿಂದ ದೂರವಿರಿ
ಪಿತೃ ಪಕ್ಷದ ಸಮಯದಲ್ಲಿ ಮನೆಯಲ್ಲಿ ಶಾಂತಿಯ ವಾತಾವರಣವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಈ ದಿನಗಳಲ್ಲಿ ನೀವು ವಿವಾದಗಳಿಂದ ದೂರವಿರಬೇಕು. ಮನೆಯಲ್ಲಿ ಅಶಾಂತಿಯ ವಾತಾವರಣವು ಪೂರ್ವಜರ ಪ್ರಕೋಪಕ್ಕೆ ಕಾರಣವಾಗುತ್ತದೆ ಮತ್ತು ಅವರು ವಂಶಜರಿಗೆ ಆಶಿರ್ವದಿಸುವುದಿಲ್ಲ ಎನ್ನಲಾಗುತ್ತದೆ. ಪೂರ್ವಜರ ಹೆಸರಿನಲ್ಲಿ ಏನಾದರೂ ದಾನ ಮಾಡುವುದರಿಂದ ಜೀವನದಲ್ಲಿ ಯಾವುದಕ್ಕೂ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಇದೆ.

ಇದನ್ನೂ ಓದಿ-ಉದ್ಯೋಗದಲ್ಲಿ ಸಿಗುವುದು ಪದೋನ್ನತಿ, ಮುಂದಿನ ಎರಡು ತಿಂಗಳು ಈ ರಾಶಿಯವರಿಗೆ ಹಣದ ಸುರಿ ಮಳೆ

ಮಧ್ಯಾಹ್ನ ಬ್ರಾಹ್ಮಣ ಭೋಜನ ಆಯೋಜಿಸುವುದು ಉತ್ತಮ
ಪಿತೃ ಪಕ್ಷದ ದಿನದಂದು ಬ್ರಾಹ್ಮಣರು ಮಧ್ಯಾಹ್ನದ ಊಟವನ್ನು ಮಾಡಬೇಕು ಎಂದು ನಂಬಲಾಗಿದೆ. ಅಲ್ಲದೆ ಕಪ್ಪು ಎಳ್ಳಿನ ವಿಶೇಷ ಮಹತ್ವವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಶ್ರಾದ್ಧ ಅಥವಾ ತರ್ಪಣ ಮಾಡುವಾಗ ಅವುಗಳನ್ನು ಬಳಸುವುದು ಸೂಕ್ತ.

ಇದನ್ನೂ ಓದಿ-Vastu Tips: ತುಳಸಿ ನೀಡುತ್ತೆ ಮನೆಯ ಒಳಿತು, ಕೆಡುಕಿನ ಮುನ್ಸೂಚನೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News