ಮೌತ್ ಅಲ್ಸರ್ ಗೆ ತಕ್ಷಣದ ಪರಿಹಾರ ಈ ಮೂರು ಮನೆಮದ್ದುಗಳು

ಬಾಯಿ ಹುಣ್ಣು ನೋಡುವುದಕ್ಕೆ ಬಹಳ ಸಣ್ಣದಾಗಿದ್ದರೂ ಅತಿಯಾದ ನೋವನ್ನು ತರುತ್ತದೆ. ಬಾಯಿಯಲ್ಲಿ ಹುಣ್ಣು ಗಳಾದರೆ ಮಾತನಾಡುವುದು ಕಷ್ಟವಾಗುತ್ತದೆ. ಏನನ್ನು ತಿಂದರೂ ಕುಡಿದರೂ ಅತಿಯಾದ ನೀವು ಕಾಡುತ್ತದೆ. 

Written by - Ranjitha R K | Last Updated : Dec 19, 2022, 05:03 PM IST
  • ಅತಿಯಾದ ನೋವು ತರುತ್ತದೆ ಬಾಯಿ ಹುಣ್ಣು
  • ಬಾಯಿ ಹುಣ್ಣಿಗೆ ಸೋಂಕು ಕಾರಣ
  • ಬಾಯಿ ಹುಣ್ಣಿಗೆ ಇಲ್ಲಿದೆ ಮನೆ ಮದ್ದು
ಮೌತ್ ಅಲ್ಸರ್ ಗೆ ತಕ್ಷಣದ ಪರಿಹಾರ ಈ ಮೂರು  ಮನೆಮದ್ದುಗಳು  title=
Remedies for mouth ulser

ಬೆಂಗಳೂರು : ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿರದಿದ್ದರೆ ಆಗಾಗ  ಬಾಯಿಯಲ್ಲಿ ಹುಣ್ಣುಗಳಾಗುತ್ತವೆ.  ಇವು ನೋಡುವುದಕ್ಕೆ ಬಹಳ ಸಣ್ಣದಾಗಿದ್ದರೂ ಅತಿಯಾದ ನೋವನ್ನು ತರುತ್ತದೆ. ಬಾಯಿಯಲ್ಲಿ ಹುಣ್ಣು ಗಳಾದರೆ ಮಾತನಾಡುವುದು ಕಷ್ಟವಾಗುತ್ತದೆ. ಏನನ್ನು ತಿಂದರೂ ಕುಡಿದರೂ ಅತಿಯಾದ ನೀವು ಕಾಡುತ್ತದೆ.   ಆದರೆ ಮನೆಯಲ್ಲಿಯೇ ಸಿಗುವ ಮೂರೂ ವಸ್ತುಗಳನ್ನು ಬಳಸುವ ಮೂಲಕ ಮೌತ್ ಅಲ್ಸರ್ ನಿಂದ ಮುಕ್ತಿ ಪಡೆಯಬಹುದು. 
    
ಜೇನುತುಪ್ಪ : 
ಜೇನುತುಪ್ಪದಿಂದ ಬಾಯಿ ಹುಣ್ಣನ್ನು ಗುಣಪಡಿಸಬಹುದು. ಜೇನುತುಪ್ಪವು ಅನೇಕ ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ. ಗುಳ್ಳೆಯ ಮೇಲೆ ಸ್ವಲ್ಪ ಸಮಯದವರೆಗೆ ಜೇನುತುಪ್ಪವನ್ನು ಹಾಕಿ ಬಿಟ್ಟರೆ, ಅದರಿಂದ ಸಾಕಷ್ಟು ಪ್ರಯೋಜನವಾಗುತ್ತದೆ. ಬಾಯಿಯಲ್ಲಿ ಲಾಲಾರಸ ಸಂಗ್ರಹವಾಗುವವರೆಗೆ ಅದನ್ನು ಉಗುಳಬೇಡಿ. ದಿನಕ್ಕೆ 4 ಬಾರಿ ಇದೇ ರೀತಿ ಮಾಡುವುದರಿಂದ ಮೌತ್ ಅಲ್ಸರ್ ನಿಂದ ಪರಿಹಾರ ಪಡೆದುಕೊಳ್ಳಬಹುದು. 

ಇದನ್ನೂ ಓದಿ : Saffron Benefits : ಪುರುಷರ ಲೈಂಗಿಕ ಸಮಸ್ಯೆಗೆ ರಾಮಬಾಣ ಕೇಸರಿ : ದುಬಾರಿ ಔಷಧಿಗಳ ಅಗತ್ಯವಿಲ್ಲ!

ಉಗುರುಬೆಚ್ಚನೆಯ ನೀರನ್ನು ಬಳಸಿ  :
ಉಗುರುಬೆಚ್ಚನೆಯ ನೀರಿನಿಂದ ಕೂಡ ಮೌತ್ ಅಲ್ಸರ್ ಗೆ ಪರಿಹಾರ ಸಿಗುತ್ತದೆ. ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಉಪ್ಪನ್ನು ಬೆರೆಸಿ ಈ ನೀರಿನಿಂದ ಗಾರ್ಗಲ್  ಮಾಡಿ. ಗಾರ್ಗ್ಲಿಂಗ್ ಮಾಡಿದ ನಂತರ,  ಸಾಮಾನ್ಯ ನೀರಿನಿಂದ ಬಾಯಿಯನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಬಾಯಿ ಹುಣ್ಣುಗಳಿಂದ ಶೀಘ್ರವೇ ಪರಿಹಾರ ಸಿಗುತ್ತದೆ.      

ಅರಿಶಿನ ಪುಡಿ ಬಳಸಿ :
ಅರಿಶಿನವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಈ ವಸ್ತುವು ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವಂಥ ಪದಾರ್ಥವಾಗಿದೆ.  ಮೌತ್ ಅಲ್ಸ್ರರ್ ಸೋಂಕಿನಿಂದ ಉಂಟಾಗುತ್ತವೆ. ಈ ಸೋಂಕುಗಳನ್ನು ತಡೆಗಟ್ಟುವಲ್ಲಿ ಅರಿಶಿನವು ಪರಿಣಾಮಕಾರಿಯಾಗಿದೆ. ಅರಿಶಿನ ಪುಡಿಯನ್ನು ಬಳಸಿದರೆ, ಬಾಯಿ ಹುಣ್ಣುಗಳ ಊತದಲ್ಲಿ ಸಾಕಷ್ಟು ಪರಿಹಾರ ಸಿಗುತ್ತದೆ. ಕೆಲವೇ ದಿನಗಳಲ್ಲಿ ಈ ನೋವಿನಿಂದ ಪರಿಹಾರ ಸಿಗುತ್ತದೆ. ಒಂದು ಬಟ್ಟಲಿನಲ್ಲಿ ಸ್ವಲ್ಪ ಅರಿಶಿನ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಬೇಕು. ಈ ರೀತಿಯಲ್ಲಿ ಅದರ ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಪ್ರತಿದಿನ ಎರಡು ಬಾರಿ ಗುಳ್ಳೆಗಳ ಮೇಲೆ ಹಚ್ಚಿ. ಈ ರೀತಿಯಾಗಿ,  ಮಾಡುವುದರಿಂದಲೂ ಶೀಘ್ರದಲ್ಲೇ ಹುಣ್ಣುಗಳಿಂದ ಪರಿಹಾರ  ಸಿಗುತ್ತದೆ. 

ಇದನ್ನೂ ಓದಿ : Benefits of Turmeric : ಆರೋಗ್ಯಕ್ಕೆ ಅರಿಶಿನದ ಈ 5 ವೈಜ್ಞಾನಿಕ ಪ್ರಯೋಜನಗಳು : ಇಲ್ಲಿವೆ ನೋಡಿ

(  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News