Rainy Season Tips: ಮಳೆಗಾಲದ ಋತುವಿನಲ್ಲಿ ಆರೋಗ್ಯಕ್ಕೆ ವರದಾನ ಈ ಗಿಡಮೂಲಿಕೆಗಳು!

Rainy Season Tips: ಮಳೆಗಾಲದ ಋತುವಿನಲ್ಲಿ ಆರೋಗ್ಯದ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಈ ಋತುವಿನಲ್ಲಿ ಹಲವು ರೀತಿಯ ಕಾಯಿಲೆಗಳ ಅಪಾಯವಿರುತ್ತದೆ. ಹಾಗಾದರೆ ಬನ್ನಿ ಮಾನ್ಸೂನ್ ನಲ್ಲಿ ಆರೋಗ್ಯಪೂರ್ಣವಾಗಿರಲು ಯಾವು ಉಪಾಯಗಳನ್ನು ಅನುಸರಿಸಬೇಕು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jul 7, 2023, 11:36 PM IST
  • ಮಳೆಗಾಲದಲ್ಲಿ ಮುಲೇಟಿ ಸೇವಿಸುವುದರಿಂದ ಗಂಟಲು ನೋವು, ಶೀತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
  • ಮಳೆಯಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ನೀವು ಬಯಸುತ್ತಿದ್ದರೆ,
  • ನೀವೂ ಕೂಡ ಮುಲೇಟಿ ಸೇವಿಸಿ. ಇದು ನಿಮಗೆ ತುಂಬಾ ಪ್ರಯೋಜನಕಾರಿ ಸಾಬೀತಾಗಬಹುದು.
Rainy Season Tips: ಮಳೆಗಾಲದ ಋತುವಿನಲ್ಲಿ ಆರೋಗ್ಯಕ್ಕೆ ವರದಾನ ಈ ಗಿಡಮೂಲಿಕೆಗಳು! title=

Rainy Season Tips: ಬದಲಾಗುತ್ತಿರುವ ಹವಾಮಾನದಲ್ಲಿ ಹಲವು ರೀತಿಯ ಕಾಯಿಲೆಗಳು ಬರುವ ಅಪಾಯವಿರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಶೀತ, ನೆಗಡಿ, ಜ್ವರ, ಅಲರ್ಜಿ ಮುಂತಾದ ಸಮಸ್ಯೆಗಳಿಗೆ ಜನರು ತುತ್ತಾಗುತ್ತಾರೆ. ಇದಕ್ಕೆ ಕಾರಣ ನಮ್ಮ ದುರ್ಬಲ ರೋಗನಿರೋಧಕ ಶಕ್ತಿಯಾಗಿರುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಮಾನ್ಸೂನ್‌ನಲ್ಲಿ ಉಂಟಾಗುವ ಈ ಸಮಸ್ಯೆಗಳನ್ನು ನಿವಾರಿಸಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ತುಂಬಾ ಮುಖ್ಯ. ನೀವೂ ಕೂಡ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಯಸುತ್ತಿದ್ದರೆ, ಇದಕ್ಕಾಗಿ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಹಲವು ರೀತಿಯ ಗಿಡಮೂಲಿಕೆಗಳಿವೆ, ಅವುಗಳನ್ನು ಬಳಸಿಕೊಂಡು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಮಾನ್ಸೂನ್‌ನಲ್ಲಿ ಯಾವ ಗಿಡಮೂಲಿಕೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಈ ಗಿಡಮೂಲಿಕೆಗಳು ಮಳೆಗಾಲದ ಋತುವಿನಲ್ಲಿ ಪ್ರಯೋಜನಕಾರಿಯಾಗಿವೆ
ಅಮೃತ ಬಳ್ಳಿ 

ಗಿಲೋಯ್  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾದ ಗಿಲೋಯ್‌ನಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕಂಡುಬರುತ್ತವೆ. ಅಷ್ಟೇ ಅಲ್ಲ, ಗಿಲೋಯ್ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ.

ತುಳಸಿ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಳಸಿ ಎಲೆಗಳ ಸೇವನೆ ಕೂಡ ರಾಮಬಾಣ ಉಪಾಯವಾಗಿದೆ. ಹಲವು ರೋಗಗಳನ್ನು ಗುಣಪಡಿಸಲು ಇದು ಉಪಯುಕ್ತವಾಗಿದೆ. ತುಳಸಿ ಸೇವನೆಯಿಂದ ಕೆಮ್ಮು, ನೆಗಡಿ ಮತ್ತು ಜ್ವರವನ್ನು ಕಡಿಮೆ ಮಾಡಬಹುದು. ಇದಲ್ಲದೆ, ಇದು ನಿಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ.

ಮುಲೇಟಿ
ಮಳೆಗಾಲದಲ್ಲಿ ಮುಲೇಟಿ ಸೇವಿಸುವುದರಿಂದ ಗಂಟಲು ನೋವು, ಶೀತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಮಳೆಯಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ನೀವು ಬಯಸುತ್ತಿದ್ದರೆ, ನೀವೂ ಕೂಡ ಮುಲೇಟಿ ಸೇವಿಸಿ. ಇದು ನಿಮಗೆ ತುಂಬಾ ಪ್ರಯೋಜನಕಾರಿ ಸಾಬೀತಾಗಬಹುದು.

ಇದನ್ನೂ ಓದಿ- Lifestyle Tips: 35 ವಯಸ್ಸಿನ ಬಳಿಕ ಈ ರೀತಿ ನಿಮ್ಮ ತೂಕ ಇಳಿಸಿ, ಶರೀರ ಸೃದೃಢವಾಗಿರುತ್ತದೆ!

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಈ ಆಯುರ್ವೇದ ಗಿಡಮೂಲಿಕೆಗಳನ್ನು ಸೇವಿಸಬಹುದು. ಆದರೆ, ಒಂದು ವೇಳೆ ನೀವು ಯಾವುದಾದರೊಂದು ಗಂಭೀರ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ, ತಜ್ಞರ ಸಲಹೆಯ ಮೇರೆಗೆ ಮಾತ್ರ ಈ ಗಿಡಮೂಲಿಕೆಗಳನ್ನು ಸೇವಿಸಿ.

ಇದನ್ನೂ ಓದಿ-Belly Fat Reducing Tips: ಕಚೇರಿಯಲ್ಲಿನ ನಿಮ್ಮ ಚೆಯರ್ ನಲ್ಲಿಯೇ ಕುಳಿತು ಈ ವ್ಯಾಯಾಮ ಮಾಡಿ ಹೊಟ್ಟೆ ಬೊಜ್ಜು ಕರಗಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News