Ramadan 2021 ತಿಂಗಳಿನಲ್ಲಿ ಕೊರೊನಾ ಲಸಿಕೆ ಪಡೆದರೆ ರೋಜಾ ಮುರಿಯುವುದಿಲ್ಲ: ಫತ್ವಾ

Ramadan 2021: ಮೌಲಾನಾ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹ್ಲಿ, ಮೌಲಾನಾ ನಸ್ರುಲ್ಲಾ, ಮೌಲಾನಾ ನಾಯಮುರ್ರಹ್ಮಾನ್ ಸಿದ್ದಿಕಿ ಮತ್ತು ಮೌಲಾನಾ ಮುಹಮ್ಮದ್ ಮುಷ್ತಾಕ್ ಈ ಕುರಿತಾದ ಫತ್ವಾಗೆ ಸಹಿ ಹಾಕಿದ್ದಾರೆ.

Written by - Nitin Tabib | Last Updated : Apr 13, 2021, 06:17 PM IST
  • ಪವಿತ್ರ ರಂಜಾನ್ ಹಬ್ಬದ ವೇಳೆ ಕೊರೊನಾ ಲಸಿಕೆ ಪಡೆಯಬಹುದೇ?
  • ಲಸಿಕೆ ಪಡೆಯುವುದರಿಂದ ರಂಜಾನ್ ರೋಜಾಗೆ ಯಾವುದೇ ರೀತಿಯ ಧಕ್ಕೆ ಇಲ್ಲ
  • ಫತ್ವಾ ಹೊರಡಿಸಿದ ಭೋಪಾಲ್ ದಾರೂಲ್ ಇಫ್ತಾ.
Ramadan 2021 ತಿಂಗಳಿನಲ್ಲಿ ಕೊರೊನಾ ಲಸಿಕೆ ಪಡೆದರೆ ರೋಜಾ ಮುರಿಯುವುದಿಲ್ಲ: ಫತ್ವಾ title=
Ramadan 2021 (File Photo: Vaccination)

ಲಖನೌ: Ramadan 2021 - ಕರೋನಾ (Coronavirus) ಲಸಿಕೆ ಪಡೆಯುವುದರಿಂದ ರೋಸಾ ಮುರಿಯುವುದಿಲ್ಲ ಎಂದು ದಾರುಲ್ ಇಫ್ತಾ ಫರಂಗಿ ಮಹಲ್ ತನ್ನ ಫತ್ವಾವೊಂದರಲ್ಲಿ ಹೇಳಿದ್ದು, ರಂಜಾನ್ ತಿಂಗಳಲ್ಲಿ ಉಪವಾಸದ ಸ್ಥಿತಿಯಲ್ಲಿ ಲಸಿಕೆ ತೆಗೆದುಕೊಳ್ಳಬಹುದು ಎಂದು ಹೇಳಿದೆ. ಮಂಗಳವಾರ ದಾರುಲ್ ಇಫ್ತಾ ನೀಡಿದ ಈ ಮಹತ್ವದ ಫತ್ವಾದಲ್ಲಿ, ಕರೋನಾ ಲಸಿಕೆ ಔಷಧಿ ಹೊಟ್ಟೆಯೊಳಗೆ ಅಲ್ಲ, ಮಾನವ ದೇಹದ ರಕ್ತನಾಳಗಳಲ್ಲಿಸೇರಿಸಲಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ. ಆದ್ದರಿಂದ ಅದು ರೋಜಾವನ್ನು  ಮುರಿಯುವುದಿಲ್ಲ. ಮುಸ್ಲಿಮರು ಕೋವಿಡ್ -19 ಲಸಿಕೆ ಪಡೆಯಲು ವಿಳಂಬ ಮಾಡಬಾರದು ಎಂದು ಫತ್ವಾದಲ್ಲಿ ತಿಳಿಸಲಾಗಿದೆ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಪ್ರಜೆಯಾದ ಅಬ್ದುರ್ರಶೀದ್ ಕಿಡ್ವಾಯ್ ಅವರು  ದಾರುಲ್ ಇಫ್ತಾಗೆ "ಕೋವಿಡ್ -19 (Covid-19) ನಂತಹ ಭಯಾನಕ ಕಾಯಿಲೆಯ ಉತ್ತುಂಗದ ಸಮಯದಲ್ಲಿದೆ. ಇದರಿಂದ ಅಪಾರಾಗಳು ಚುಚ್ಚುಮದ್ದಿನ ಮೂಲಕ ಔಷಧಿ ನೀಡಲಾಗುತ್ತದೆ. ಎರಡು ಡೋಸ್‌ಗಳನ್ನು ನೀಡಲಾಗುವುದು. ನಾವು ಅದರ ಮೊದಲ ಡೋಸನ್ನು ಹಲವಾರು ದಿನಗಳ ಹಿಂದೆ ತೆಗೆದುಕೊಂಡಿದ್ದೇವೆ. ಎರಡನೇ ಡೋಸ್ ರಂಜಾನ್‌ನಲ್ಲಿ ನೀಡಲಾಗುವುದು. ಲಸಿಕೆಯನ್ನು (Corona Vaccine) ಉಪವಾಸದ ಸ್ಥಿತಿಯಲ್ಲಿ ತೆಗೆದುಕೊಳ್ಳಬಹುದೇ ಎಂಬುದನ್ನು ನೀವು ತಿಳಿಸಬೇಕು" ಎಂದು ಕೋರಿದ್ದರು.

ಅವರ ಪ್ರಶ್ನೆಗೆ ಉತ್ತರಿಸಿರುವ ದಾರುಲ್ ಇಫ್ತಾ (Darool Ifta) ಈ ಫತ್ವಾ ಜಾರಿಗೊಳಿಸಿದೆ.  ಈ ಫತ್ವಾ ಮೇಲೆ  ಮೌಲಾನಾ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹ್ಲಿ, ಮೌಲಾನಾ ನಸ್ರುಲ್ಲಾ, ಮೌಲಾನಾ ನಾಯಮುರ್ರಹ್ಮಾನ್ ಸಿದ್ದಿಕಿ ಮತ್ತು ಮೌಲಾನಾ ಮುಹಮ್ಮದ್ ಮುಷ್ತಾಕ್ ಸಹಿ ಹಾಕಿದ್ದಾರೆ.

ಇದನ್ನೂ ಓದಿ- Lord Hanuman Birth Place: ಅಂಜನೇಯ ಸ್ವಾಮಿ ಜನ್ಮಸ್ಥಾನದ ಕುರಿತು ಮುಖಾಮುಖಿಯಾದ ಕರ್ನಾಟಕ-ಆಂಧ್ರಪ್ರದೇಶ

ರಂಜಾನ್ ಹಬ್ಬದ ಅಂಗವಾಗಿ ಶುಭಾಷಯ ಕೋರಿದ ಯೋಗಿ
ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿರುವ  ಯೋಗಿ ಆದಿತ್ಯನಾಥ್ ಅವರು ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಅಂಗವಾಗಿ ರಾಜ್ಯದ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ. ಮತ್ತು ಉತ್ತರ ಪ್ರದೇಶವು ಸಾಮರಸ್ಯ, ಸಹೋದರತ್ವ ಮತ್ತು ಸಾಂಸ್ಕೃತಿಕ ಐಕ್ಯತೆಗೆ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಈ ಪರಂಪರೆ ಮತ್ತು ಸಂಪ್ರದಾಯವನ್ನು ಹಾಗೇ ಇಟ್ಟುಕೊಂಡು, ಕರೋನಾ ವೈರಸ್ ಸೋಂಕಿನ ದೃಷ್ಟಿಯಿಂದ ಜನರು ರಂಜಾನ್ ಸಮಯದಲ್ಲಿ ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ- ಮಕ್ಕಳನ್ನು Corona ಸೋಂಕಿನಿಂದ ರಕ್ಷಿಸುವ ಐದು Super Food

ಈ ಕುರಿತು ಮಂಗಳವಾರ ಬಿಡುಗಡೆ ಮಾಡಲಾಗಿರುವ ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ, ಮುಖ್ಯಮಂತ್ರಿಗಳು ತಮ್ಮ ಶುಭಾಶಯ ಸಂದೇಶದಲ್ಲಿ, ರೋಜಾ, ಮಾನವೀಯತೆಗೆ ಸೇವೆ, ಪವಿತ್ರ ರಂಜಾನ್ (Ramadan 2021) ಸಮಯದಲ್ಲಿ ದೇವರಿಗೆ ಸೇವೆ ಮುಂತಾದ ಉತ್ತಮ ಕಾರ್ಯಗಳು ತಾಳ್ಮೆ, ಸ್ವಯಂ ಶಿಸ್ತು, ಸಹಿಷ್ಣುತೆ, ಸರಳತೆ ಇತ್ಯಾದಿಗಳಿಗೆ ಉತ್ತೇಜನ ಸಿಗುತ್ತದೆ. ಇದು ಪರಸ್ಪರ ಪ್ರೀತಿ ಮತ್ತು ಸಹೋದರತ್ವದ ಭಾವನೆಯನ್ನು ಬಲಪಡಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ- Vastu Tips: ನೌಕರಿ ಸಿಗುತ್ತಿಲ್ಲವೇ? ಈ ವಾಸ್ತುಶಾಸ್ತ್ರ ಸಲಹೆಗಳನ್ನು ಅನುಸರಿಸಿ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News