Shani Astro tips: ಶನಿದೇವರ ನ್ಯಾಯ ಮತ್ತು ಕರ್ಮಫಲದ ಬಗ್ಗೆ ತಿಳಿಯಿರಿ

Shani Astro tips: ಜನರು ಸಾಮಾನ್ಯವಾಗಿ ಶನಿ ದೇವನನ್ನು ಕ್ರೂರ ದೇವತೆ ಎಂದು ಪರಿಗಣಿಸುತ್ತಾರೆ. ಆದರೆ ವಾಸ್ತವದಲ್ಲಿ ಅದು ಹಾಗಲ್ಲ. ಶನಿದೇವರು ಜನರನ್ನು ತನ್ನ ನಿಜವಾದ ಸ್ನೇಹಿತರಂತೆ ನೋಡಿಕೊಳ್ಳುತ್ತಾರಂತೆ.

Written by - Puttaraj K Alur | Last Updated : Feb 12, 2023, 06:26 AM IST
  • ಜನರು ಸಾಮಾನ್ಯವಾಗಿ ಶನಿ ದೇವನನ್ನು ಕ್ರೂರ ದೇವತೆ ಎಂದು ಪರಿಗಣಿಸುತ್ತಾರೆ
  • ಶನಿದೇವರು ಜನರನ್ನು ತನ್ನ ನಿಜವಾದ ಸ್ನೇಹಿತರಂತೆ ನೋಡಿಕೊಳ್ಳುತ್ತಾರೆ
  • ಜನರ ತಪ್ಪುಗಳ ಅನುಸಾರ ಶನಿದೇವರು ನ್ಯಾಯ ಮತ್ತು ಶಿಕ್ಷೆ ನೀಡುತ್ತಾನೆ
Shani Astro tips: ಶನಿದೇವರ ನ್ಯಾಯ ಮತ್ತು ಕರ್ಮಫಲದ ಬಗ್ಗೆ ತಿಳಿಯಿರಿ title=
Shani Astro tips

ನವದೆಹಲಿ: ಜನರು ಸಾಮಾನ್ಯವಾಗಿ ಶನಿ ದೇವನನ್ನು ಕ್ರೂರ ದೇವತೆ ಎಂದು ಪರಿಗಣಿಸುತ್ತಾರೆ. ಆದರೆ ವಾಸ್ತವದಲ್ಲಿ ಅದು ಹಾಗಲ್ಲ. ಶನಿದೇವರು ಜನರನ್ನು ತನ್ನ ನಿಜವಾದ ಸ್ನೇಹಿತರಂತೆ ನೋಡಿಕೊಳ್ಳುತ್ತಾರಂತೆ. ಒಬ್ಬ ನಿಜವಾದ ಸ್ನೇಹಿತ ತನ್ನ ಸ್ನೇಹಿತನ ತಪ್ಪುಗಳನ್ನು ಎತ್ತಿ ತೋರಿಸುವುದು ಮತ್ತು ಅಂತಹ ತಪ್ಪು ಮಾಡಬಾರದೆಂದು ಸಲಹೆ ನೀಡುವುದು ಇದರ ಉದ್ದೇಶ. ಈ ರೀತಿ ಮಾಡಬೇಡಿ ಇಲ್ಲವಾದಲ್ಲಿ ಅದಕ್ಕೆ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಶನಿದೇವ ನಮ್ಮನ್ನು ಎಚ್ಚರಿಸುತ್ತಾನಂತೆ.

‘‘ಹಿತಂ ಮನೋಹರಿ ಚ ದುರ್ಲಭ ವಾಚ" ಎಂದರೆ ಪ್ರಯೋಜನಕಾರಿ ಮಾತುಗಳು ಎಂದಿಗೂ ಸಿಹಿಯಾಗುವುದಿಲ್ಲವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನಮ್ಮ ನ್ಯೂನತೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಸ್ಪಷ್ಟವಾಗಿ ಹೇಳುವವನ್ನು ನಿಜವಾದ ಸ್ನೇಹಿತನೆಂದು ಪರಿಗಣಿಸಬಹುದು. ಅದೇ ರೀತಿ ಸಂತ ಕಬೀರ್ ದಾಸ್ ಕೂಡ ಹೇಳಿದ್ದಾರೆ, “ನಿಂದಕ್ ನಿರಯೇ ರಾಖಿಯೇ, ಅಂಗನ್ ಕುಟಿ ಛಾಯೇ” ಅಂದರೆ ಯಾವುದೇ ವ್ಯಕ್ತಿಯೊಬ್ಬ ತನ್ನ ಟೀಕೆಯನ್ನು ಯಾವಾಗಲೂ ತನ್ನೊಂದಿಗೆ ಇಟ್ಟುಕೊಳ್ಳಬೇಕು, ಏಕೆಂದರೆ ಅದು ಒಬ್ಬರ ನ್ಯೂನತೆಗಳನ್ನು ಅರಿತುಕೊಂಡಂತಾಗುತ್ತದೆ ಎಂದು.

ಇದನ್ನೂ ಓದಿ: Garud Puran Lessons: ಇಂತಹ ಸಂಗಾತಿ ಇದ್ದರೆ ಜೀವನವೇ ನರಕಾಗುತ್ತದೆ!

ವ್ಯಕ್ತಿಯಲ್ಲಿ ಯಾವುದೇ ರೀತಿಯ ಕೊರತೆ ಕಂಡುಬಂದರೆ ಅದನ್ನು ನಿವಾರಿಸಬಹುದು. ಶನಿದೇವನೂ ಹೀಗೇ, ನಿಮ್ಮ ಕಾರ್ಯಗಳಿಗೆ ತಕ್ಕಂತೆ ಫಲವನ್ನು ಕೊಡುತ್ತಾನೆ. ಹೀಗಾಗಿ ನೀವು ಶನಿದೇವನನ್ನು ಅರ್ಥಮಾಡಿಕೊಳ್ಳಬೇಕು. ನೀವು ಸುಧಾರಿಸಿಕೊಳ್ಳದಿದ್ದರೆ ಶನಿದೇವ ಶಿಕ್ಷೆ ನೀಡುವ ಮೂಲಕ ಸರಿಪಡಿಸುತ್ತಾನೆ. ಹೀಗಾಗಿ ಶನಿಯ ಧೈಯಾ, ಸಾಡೇ ಸಾತಿ ಅಥವಾ ದಶಾ ಬದಲಾವಣೆಯಾಗಲಿ, ಕಾರ್ಯಗಳ ಫಲಿತಾಂಶಗಳು ಬಂದ ತಕ್ಷಣ ಪ್ರಾರಂಭವಾಗುತ್ತವೆ. ಶನಿಯು ಇತರರನ್ನು ಸಮಾನತೆಯಿಂದ ಕಾಣದಿರುವುದನ್ನು ಇಷ್ಟಪಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವ ಮತ್ತು ನ್ಯಾಯ ನೀಡುವಲ್ಲಿ ಶನಿಯು ತುಂಬಾ ಸಂತುಷ್ಟನಾಗಿರುತ್ತಾನೆ.

ಸಾಮಾನ್ಯವಾಗಿ ಸೂರ್ಯ-ಶನಿಯನ್ನು ವಿರೋಧಿಗಳು ಮತ್ತು ಶತ್ರುಗಳೆಂದು ಪರಿಗಣಿಸಲಾಗುತ್ತದೆ. ಆದರೆ ಇದು ಅವರ ಕೆಲಸದ ಸ್ವಭಾವದಿಂದಾಗಿ ಮಾತ್ರ. ಮುಹೂರ್ತ ಶಾಸ್ತ್ರದ ವೇದ ಸಂಚಿಕೆಯಲ್ಲಿ ಸೂರ್ಯ ಮತ್ತು ಶನಿ ಎಂದಿಗೂ ಪರಸ್ಪರ ಕಾದಾಡುವುದಿಲ್ಲವೆಂದು ಹೇಳಲಾಗಿದೆ. “ಸುತ್ಸ್ಥಾಪಿತ್ ಪಿತೃಸಂಬಂಧಿನಾಂ ವೇದಂ ನಹುಃ” ಅಂದರೆ ತಂದೆ-ಮಗನ ಸಂಬಂಧದಿಂದ ಅವರು ಈ ರೀತಿ ಮಾಡುವುದಿಲ್ಲವಂತೆ. ಶನಿಯನ್ನು ಸೂರ್ಯನ ಮಗನೆಂದು ಏಕೆ ಕರೆಯಲಾಗಿದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಸೂರ್ಯನಿಗೆ ನೇರವಾಗಿ ಸಂಬಂಧಿಸಿದ ಅಂಶಗಳು ಶನಿ ಗ್ರಹದಲ್ಲಿ ಭೌತಿಕವಾಗಿ ಲಭ್ಯವಿವೆ ಎಂದು ಮತ್ತಷ್ಟು ಸ್ಪಷ್ಟಪಡಿಸಲಾಗಿದೆ. 

ಇದನ್ನೂ ಓದಿ: Horoscope Today: ಈ ರಾಶಿಯವರು ಉದ್ಯೋಗದಲ್ಲಿ ಯಾವುದೇ ಬದಲಾವಣೆ ಮಾಡಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News