Horoscope Today: ಈ ರಾಶಿಯವರು ಉದ್ಯೋಗದಲ್ಲಿ ಯಾವುದೇ ಬದಲಾವಣೆ ಮಾಡಬೇಡಿ

Today Horoscope(12-02-2023): ಮೇಷ ರಾಶಿಯವರಿಗೆ ವಾಹನ ಭಾಗ್ಯ ಸಿಗಲಿದೆ. ವೃಷಭ ರಾಶಿಯವರ ಹೊಸ ವ್ಯಾಪಾರ ಶುರುವಾಗಲಿದೆ. ಕರ್ಕ ರಾಶಿಯವರು ತಾಯಿಯ ಆರೋಗ್ಯದ ಕಡೆ ಗಮನ ಕೊಡಿ.

Written by - Zee Kannada News Desk | Last Updated : Feb 12, 2023, 05:47 AM IST
  • ವೃಷಭ ರಾಶಿಯವರಿಗೆ ವ್ಯವಹಾರದಲ್ಲಿ ಹೂಡಿಕೆ ಲಾಭದಾಯಕವಾಗಿರುತ್ತದೆ.
  • ಕರ್ಕ ರಾಶಿಯವರು ಉದ್ಯೋಗದಲ್ಲಿ ಯಾವುದೇ ಬದಲಾವಣೆ ಮಾಡಬೇಡಿ
  • ಸಿಂಹ ರಾಶಿಯವರಿಗೆ ಶೀಘ‍್ರವೇ ಶುಭ ಸುದ್ದಿ ಸಿಗಲಿದ್ದು, ಒಳಿತಾಗಲಿದೆ
Horoscope Today: ಈ ರಾಶಿಯವರು ಉದ್ಯೋಗದಲ್ಲಿ ಯಾವುದೇ ಬದಲಾವಣೆ ಮಾಡಬೇಡಿ title=
ಇಂದಿನ ರಾಶಿಭವಿಷ್ಯ

ಇಂದಿನ ರಾಶಿಭವಿಷ್ಯ(12-02-2023): ಮೀನ ರಾಶಿಯವರ ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಕುಂಭ ರಾಶಿಯವರಿಗೆ ಹಣಕಾಸಿನ ಲಾಭವಾಗಲಿದೆ. ಭಾನುವಾರ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ನಿಮಗೆ ವಾಹನ ಭಾಗ್ಯ ಸಿಗಲಿದೆ. ವ್ಯವಹಾರದಲ್ಲಿ ಚಿಂತನಶೀಲವಾಗಿ ಹೂಡಿಕೆ ಮಾಡಿ. ಹನುಮಂತನಿಗೆ ಕೆಂಪು ಹೂವುಗಳನ್ನು ಅರ್ಪಿಸಿರಿ.

ಅದೃಷ್ಟದ ಬಣ್ಣ: ಕಿತ್ತಳೆ

ವೃಷಭ ರಾಶಿ: ವ್ಯವಹಾರದಲ್ಲಿ ಹೂಡಿಕೆ ಲಾಭದಾಯಕವಾಗಿರುತ್ತದೆ. ಸಂಬಂಧಗಳಲ್ಲಿ ಜಾಗರೂಕರಾಗಿರಿ. ಹೊಸ ವ್ಯಾಪಾರ ಶುರುವಾಗಲಿದೆ.

ಅದೃಷ್ಟ ಬಣ್ಣ: ಬಿಳಿ

ಮಿಥುನ ರಾಶಿ: ಈ ರಾಶಿಯವರು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ತಂದೆ-ತಾಯಿಯನ್ನು ಗೌರವಿಸಿ. ದೇವಸ್ಥಾನದಲ್ಲಿ ಪ್ರಸಾದವನ್ನು ಅರ್ಪಿಸಿರಿ.

ಅದೃಷ್ಟ ಬಣ್ಣ: ಬಿಳಿ

ಕರ್ಕ ರಾಶಿ: ಈ ರಾಶಿಯವರು ಉದ್ಯೋಗದಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ನಿಮ್ಮ ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ. ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ಪಾರ್ವತಿ ದೇವಿಗೆ ಗುಲಾಬಿ ಅರ್ಪಿಸಿರಿ.

ಅದೃಷ್ಟದ ಬಣ್ಣ: ಗುಲಾಬಿ

ಇದನ್ನೂ ಓದಿ: Maha Shivratri 2023: ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ಸಿಂಹ ರಾಶಿ: ಈ ರಾಶಿಯವರಿಗೆ ಶೀಘ‍್ರವೇ ಶುಭ ಸುದ್ದಿ ಸಿಗಲಿದೆ. ನಿಮ್ಮ ಆಭರಣಗಳನ್ನು ನೋಡಿಕೊಳ್ಳಿ. ನಿಮ್ಮ ಮನಸ್ಸಿನಲ್ಲಿ ದುಃಖವನ್ನು ತರಬೇಡಿ. ದುರ್ಗಾ ದೇವಿಗೆ ಹಳದಿ ಹೂಗಳನ್ನು ಅರ್ಪಿಸಿ.

ಅದೃಷ್ಟ ಬಣ್ಣ: ಹಳದಿ

ಕನ್ಯಾ ರಾಶಿ: ಈ ರಾಶಿಯವರಿಗೆ ಶೀಘ್ರವೇ ಅದೃಷ್ಟದ ಜೊತೆಗೆ ಧನಲಾಭವಾಗಲಿದೆ. ನಿಮ್ಮ ಸಂಗಾತಿಯನ್ನು ಗೌರವಿಸಿ. ಯಾವುದೇ ಪ್ರಯಾಣ ಮಾಡಬೇಡಿ. ಚಿಕ್ಕ ಹುಡುಗಿಯರಿಗೆ ಸಿಹಿ ಹಂಚಿ.

ಅದೃಷ್ಟ ಬಣ್ಣ: ಮರೂನ್

ತುಲಾ ರಾಶಿ: ಈ ರಾಶಿಯವರು ಹೊಸ ಮನೆಯನ್ನು ಖರೀದಿಸುವ ಕಾಲ ಕೂಡಿಬಂದಿದೆ. ಮಕ್ಕಳ ಕಡೆಗೆ ಗಮನ ಕೊಡಿ. ಸ್ನೇಹಿತರಿಂದ ಯಾವುದೇ ವಿಷಯಗಳನ್ನು ಮರೆಮಾಡಬೇಡಿ. ದೇವಿ ದೇವಸ್ಥಾನದಲ್ಲಿ ಕಮಲದ ಹೂವುಗಳನ್ನು ಅರ್ಪಿಸಿ.

ಅದೃಷ್ಟದ ಬಣ್ಣ: ಗುಲಾಬಿ

ವೃಶ್ಚಿಕ ರಾಶಿ: ವಿದೇಶ ಪ್ರಯಾಣದ ಅವಕಾಶಗಳು ದೂರವಾಗುತ್ತವೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕೆಲಸದ ಸ್ಥಳದಲ್ಲಿ ಬದಲಾವಣೆ ಇರುತ್ತದೆ. ನಿಮ್ಮ ತಾಯಿಗೆ ಉಡುಗೊರೆ ನೀಡಿ.

ಅದೃಷ್ಟ ಬಣ್ಣ: ಕೆಂಪು

ಇದನ್ನೂ ಓದಿ: Garud Puran Lessons: ಇಂತಹ ಸಂಗಾತಿ ಇದ್ದರೆ ಜೀವನವೇ ನರಕಾಗುತ್ತದೆ!

ಧನು ರಾಶಿ: ನಿಮ್ಮ ಮನಸ್ಸಿನ ಸಂದಿಗ್ಧತೆ ಕೊನೆಗೊಳ್ಳುತ್ತದೆ. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನ ಹರಿಸುತ್ತಾರೆ. ಪಾದಗಳ ಸಮಸ್ಯೆ ಕೊನೆಗೊಳ್ಳುತ್ತದೆ. ಲಕ್ಷ್ಮಿದೇವಿಗೆ ಗುಲಾಬಿ ಅರ್ಪಿಸಿರಿ.

ಅದೃಷ್ಟ ಬಣ್ಣ: ಚಿನ್ನ

ಮಕರ ರಾಶಿ: ನಿಮ್ಮ ಆಲೋಚನೆಗಳು ಸಕಾರಾತ್ಮಕತೆಯನ್ನು ತರುತ್ತದೆ. ಸ್ನೇಹಿತರನ್ನು ಗೌರವಿಸಿ. ಈ ಸಮಯದಲ್ಲಿ ಹೂಡಿಕೆ ಮಾಡಬೇಡಿ. ದೇವಿ ದೇವಸ್ಥಾನದಲ್ಲಿ ಹಣ್ಣುಗಳನ್ನು ಅರ್ಪಿಸಿ.

ಅದೃಷ್ಟ ಬಣ್ಣ: ನೀಲಿ

ಕುಂಭ ರಾಶಿ: ಈ ರಾಶಿಯವರಿಗೆ ಹಣಕಾಸಿನ ಲಾಭವಾಗಲಿದೆ. ಸಂಗಾತಿಯ ಆರೋಗ್ಯ ಹದಗೆಡುತ್ತದೆ. ರಿಯಲ್ ಎಸ್ಟೇಟ್ ಸಮಸ್ಯೆ ಕೊನೆಗೊಳ್ಳಲಿದೆ. ದೇವಿ ದೇವಸ್ಥಾನದಲ್ಲಿ ಮದರಂಗಿಯನ್ನು ಅರ್ಪಿಸಿ.

ಅದೃಷ್ಟದ ಬಣ್ಣ: ಗುಲಾಬಿ

ಮೀನ ರಾಶಿ: ಈ ರಾಶಿಯವರು ಹಿರಿಯರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದುಕೊಳ್ಳಬೇಕು. ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಸ್ನೇಹಿತರ ಬೆಂಬಲ ಸಿಗಲಿದೆ. ದೇವಿ ದೇವಸ್ಥಾನದಲ್ಲಿ ಸೀತಾಫಲವನ್ನು ಅರ್ಪಿಸಿ.

ಅದೃಷ್ಟ ಬಣ್ಣ: ಹಳದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News