Shanidev Remedies - ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಶನಿದೆವನನ್ನು ಕರ್ಮಫಲದಾತ ಹಾಗೂ ನ್ಯಾಯದ ದೇವರು ಎಂದು ಕರೆಯಲಾಗಿದೆ. ಶನಿಯ ಕೃಪೆಗೆ ಪಾತ್ರರಾಗಲು ಹಾಗೂ ಆತನ ಕೆಟ್ಟ ದೃಷ್ಟಿಯಿಂದ ಪಾರಾಗಲು ಶನಿದೇವನಿಗೆ ಪೂಜೆ, ಆರಾಧನೆ, ಉಪಾಸನೆಗಳನ್ನು ನೆರವೇರಿಸಲಾಗುತ್ತದೆ. ಶನಿದೇವ ಯಾರೊಬ್ಬರ ಮೇಲೆ ಪ್ರಸನ್ನನಾದರೆ, ಆ ವ್ಯಕ್ತಿಗೆ ರಾಜನಾಗಲು ಸಮಯ ಬೇಕಾಗುವುದಿಲ್ಲ ಎನ್ನಲಾಗುತ್ತದೆ. ಇದಕ್ಕೆ ವಿಪತೀತ ಎಂಬಂತೆ ಯಾರೊಬ್ಬರ ಮೇಲೆ ಶನಿ ಮುನಿಸಿಕೊಂಡರೆ ರಾಜನನ್ನು ಕೂಡ ರಂಕನನ್ನಾಗಿಸುತ್ತಾನೆ. ಹೀಗಿರುವಾಗ ಶನಿಯ ಪ್ರಕೋಪಕ್ಕೆ ಮನುಷ್ಯರೇ ಅಲ್ಲ ದೇವ-ದೇವತೆಗಳು ಕೂಡ ಹೆದರುತ್ತಾರೆ.
ಶನಿದೇವ ವ್ಯಕ್ತಿಗಳಿಗೆ ಅವರವರ ಕರ್ಮಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಶನಿದೇವನನ್ನು ಒಲಿಸಲು ಹಾಗೆ ನೋಡಿದರೆ ಶನಿವಾರದ ದಿನ ತುಂಬಾ ಉತ್ತಮ ಎಂದು ಹೇಳಲಾಗುತ್ತದೆ. ಆದರೆ, ಶನಿ ಜಯಂತಿಯ ದಿನ ಮಾಡಲಾಗುವ ಕೆಲ ವಿಶೇಷ ಉಪಾಯಗಳು ಅತ್ಯಂತ ಫಲದಾಯಕ ಸಾಬೀತಾಗುತ್ತವೆ. ಪ್ರತಿ ವರ್ಷದ ಜೇಷ್ಠ ಮಾಸದ ಅಮಾವಾಸ್ಯೆಯ ತಿಥಿಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 30 ರಂದು ಶನಿ ಜಯಂತಿಯ ಉತ್ಸವ ಬರುತ್ತಿದೆ. ಈ ದಿನ ಸೋಮವತಿ ಅಮಾವಾಸ್ಯೆ ಹಾಗೂ ವಟ ಸಾವಿತ್ರಿ ವೃತ ಎರಡೂ ಕೂಡ ಬಂದಿರುವುದರಿಂದ ಅತ್ಯಂತ ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ಬಾರಿ ಶನಿ ಜಯಂತಿಯ ದಿನ ಅತ್ಯಂತ ವಿಶೇಷವಾಗಿರಲಿದೆ. ಈ ಬಾರಿಯ ಶನಿ ಜಯಂತಿಯ ದಿನ ಶನಿಯನ್ನು ಪ್ರಸನ್ನಗೊಳಿಸಲು ಕೆಳಗೆ ಸೂಚಿಸಿರುವ ಈ ಎರಡು ಉಪಾಯಗಳನ್ನು ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳೆಲ್ಲವೂ ನೆರವೇರುತ್ತವೆ ಎನ್ನಲಾಗಿದೆ.
ಇದನ್ನೂ ಓದಿ-Name Astrology: ಈ ಹೆಸರಿನ ಹುಡುಗರು ತನ್ನ ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ
ಶನಿ ಚಾಲಿಸಾ ಓದಿ ಶನಿಗೆ ಆರತಿಯನ್ನು ಅವಶ್ಯವಾಗಿ ನೆರವೇರಿಸಿ
ಶನಿ ಜಯಂತಿಯ ದಿನ ಬೆಳಗ್ಗೆ ಸ್ನಾನ ಇತ್ಯಾದಿಗಳಿಂದ ನಿವೃತ್ತಿ ಪಡೆದ ಬಳಿಕ ಶನಿದೇವನಿಗೆ ನಮಸ್ಕರಿಸಿ ಹಾಗೂ ಮನಸ್ಸಿನಲ್ಲಿಯೇ ಶನಿಯ ಧ್ಯಾನ ಮಾಡಿ. ಶನಿ ಚಾಲಿಸಾ ಪಠಿಸಿ. ಎಳ್ಳೆಣ್ಣೆ ಹಾಗೂ ಸಾಸಿವೆ ಎಣ್ಣೆಯ ದೀಪದಿಂದ ಶನಿಗೆ ಆರತಿ ಬೆಳಗಿ. ಈ ದಿನ ಶನಿಯ ಮಹಿಮೆಯನ್ನು ಕೊಂಡಾಡುವುದರಿಂದ ಶನಿ ಪ್ರಸನ್ನನಾಗಿ ವ್ಯಕ್ತಿಯ ಎಲ್ಲಾ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾನೆ ಎನ್ನಲಾಗಿದೆ. ಹೀಗಾಗಿ ಶನಿ ಜಯಂತಿಯ ದಿನ ಶನಿಗೆ ಪೂಜೆ ಸಲ್ಲಿಸುವುದು ಹಾಗೂ ಶನಿ ಚಾಲಿಸಾ ಪಠಿಸುವ ಎರಡು ಕೆಲಸಗಳನ್ನು ಮಾಡಲು ಮರೆಯಬೇಡಿ.
ಇದನ್ನೂ ಓದಿ-Weekly Horoscope : ವಾರದ ರಾಶಿ ಭವಿಷ್ಯ, ಈ ರಾಶಿಯವರಿಗೆ ಅದೃಷ್ಟ ಜೊತೆಗೆ ಆರ್ಥಿಕ ಲಾಭ!
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.