Fruits You Should Never Refrigerate : ತರಕಾರಿಗಳಂತೆ ಒಂದಷ್ಟು ಹಣ್ಣುಗಳನ್ನು ಕೂಡಾ ಒಟ್ಟಿಗೆ ಖರೀದಿಸುವ ಅಭ್ಯಾಸ ಸಾಮಾನ್ಯವಾಗಿ ಬಹುತೇಕರಿಗೆ ಇರುತ್ತದೆ. ಖರೀದಿಸುವುದು ಮಾತ್ರವಲ್ಲ, ತರಕಾರಿಗಳಂತೆ ಆ ಹಣ್ಣುಗಳನ್ನು ಕೂಡಾ ಫ್ರಿಜ್ ನಲ್ಲಿ ಇಡಲಾಗುತ್ತದೆ. ಬೇಗನೆ ಕೆಡಬಾರದು ಎನ್ನುವ ಕಾರಣಕ್ಕೆ ಹಣ್ಣುಗಳನ್ನು ಕೂಡಾ ಫ್ರಿಜ್ ನಲ್ಲಿಡಲಾಗುತ್ತದೆ. ಆದರೆ ಇದು ಅತ್ಯಂತ ಕೆಟ್ಟ ಹವ್ಯಾಸ. ಫ್ರೆಶ್ ಇರಲಿ ಎನ್ನುವ ಕಾರಣಕ್ಕೆ ಕೆಲವೊಂದು ಹಣ್ಣುಗಳನ್ನು ಫ್ರಿಜ್ ನಲ್ಲಿಟ್ಟರೆ ಅವುಗಳು ಸಾರವನ್ನೇ ಕಳೆದುಕೊಳ್ಳುತ್ತವೆ. ಈ ಹಣ್ಣುಗಳಲ್ಲಿರುವ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ನಂತರ ಅವುಗಳನ್ನು ತಿಂದರೂ ಕೂಡಾ ದೇಹಕ್ಕೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ.
ಈ ಹಣ್ಣುಗಳನ್ನು ಯಾವ ಕಾರಣಕ್ಕೂ ಫ್ರಿಜ್ ನಲ್ಲಿಡಬಾರದು:
1. ಬಾಳೆಹಣ್ಣು :
ಬಾಳೆಹಣ್ಣನ್ನು ಕೋಣೆಯ ಉಷ್ಣಾಂಶದಲ್ಲಿ ಇಡುವುದೇ ಉತ್ತಮ, ಬಾಳೆ ಹಣ್ಣನ್ನು ರೆಫ್ರಿಜಿರೇಟರ್ ನಲ್ಲಿ ಇರಿಸಿದರೆ, ಅದು ಕಪ್ಪು ಬಣ್ಣಕ್ಕೆ ತಿರುಗಿ ಬೇಗನೆ ಹಾಳಾಗುತ್ತದೆ. ಈ ಹಣ್ಣಿನಿಂದ ಎಥಿಲೀನ್ ಅನಿಲ ಬಿಡುಗಡೆಯಾಗುತ್ತದೆ.
ಇದನ್ನೂ ಓದಿ : ಕಿಡ್ನಿ ಸ್ಟೋನ್ ರೋಗಿಗಳು ತಪ್ಪಿಯೂ ಈ 5 ಹಣ್ಣುಗಳನ್ನು ಸೇವಿಸಬಾರದು
2. ಸೇಬು :
ಸೇಬು ತುಂಬಾ ರುಚಿಕರವಾದ ಮತ್ತು ಪೌಷ್ಟಿಕಾಂಶ ಹೊಂದಿರುವ ಹಣ್ಣು. ಸೇಬು ಹಣ್ಣನ್ನು ಫ್ರಿಜ್ ನಲ್ಲಿ ಇರಿಸಿದರೆ, ಅದರ ಪೋಷಕಾಂಶಗಳು ಮರೆಯಾಗುತ್ತವೆ. ರೆಫ್ರಿಜರೇಟರ್ ನಲ್ಲಿ ಈ ಹಣ್ಣನ್ನು ಇರಿಸಲೇ ಬೇಕು ಎನ್ನುವುದು ಅನಿವಾರ್ಯವಾದರೆ ಮೊದಲು ಹಣ್ಣನ್ನು ಪೇಪರ್ ನಲ್ಲಿ ಸುತ್ತಿ ನಂತರ್ ಫ್ರಿಜ್ ನಲ್ಲಿದುವುದು ಸೂಕ್ತ.
3. ಕಲ್ಲಂಗಡಿ :
ಕಲ್ಲಂಗಡಿಯಲ್ಲಿ ನೀರಿನ ಅಂಶ ಅಧಿಕವಾಗಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಈ ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ನಾಶವಾಗುತ್ತವೆ.
4. ಲಿಚಿ :
ಲಿಚಿಯನ್ನು ಕೂಡಾ ಫ್ರಿಡ್ಜ್‌ನಲ್ಲಿಟ್ಟರೆ ಅದು ಒಳಗಿನಿಂದಲೇ ಕರಗಲು ಪ್ರಾರಂಭಿಸುತ್ತದೆ. ಹೀಗಾದಾಗ ಹಣ್ಣಿನಲ್ಲಿರುವ ಎಲ್ಲಾ ಪೋಷಕಾಂಶಗಳು ಕಣ್ಮರೆಯಾಗುತ್ತವೆ. ಆದ್ದರಿಂದ ಈ ಹಣ್ಣನ್ನು ಖರೀದಿಸುವಾಗ ಒಂದು ದಿನಕ್ಕೆ ಎಷ್ಟು ತಿನ್ನಬಹುದು ಅಷ್ಟು ಮಾತ್ರ ಖರೀದಿಸಿ ತನ್ನಿ.
ಇದನ್ನೂ ಓದಿ : ನಿತ್ಯ ಮೊಟ್ಟೆ ಸೇವಿಸಿದರೂ ಬರುವುದು ಹಾರ್ಟ್ ಅಟ್ಯಾಕ್ .! ಸಂಶೋಧನೆಯಿಂದ ಬಹಿರಂಗವಾಯಿತು ಮಾಹಿತಿ
5.ಮಾವಿನ ಹಣ್ಣು :
ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು ತಿನ್ನದಿದ್ದರೆ ಸೀಸನ್ ಅಪೂರ್ಣ ಎನಿಸುತ್ತದೆ. ಮಾವಿನ ಹಣ್ಣುಗಳು ಬೇಗನೆ ಹಣ್ಣಾದರೆ ಕೆಡುತ್ತದೆ. ಹಾಗಂತ ಫ್ರಿಜ್ ನಲ್ಲಿಟ್ಟರೆ ಹಣ್ಣು ತಿಂದರೂ ಪ್ರಯೋಜನವಾಗುವುದಿಲ್ಲ. ಮಾವಿನಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಅದರಲ್ಲಿರುವ ಪೋಷಕಾಂಶಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಈ ಹಿನ್ನೆಲೆಯಲ್ಲಿ ಮಾವಿನಹಣ್ಣನ್ನು ಕೂಡಾ ಫ್ರಿಜ್ ನಲ್ಲಿಟ್ಟು ತಿನ್ನಬಾರದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.