ವಿಟಮಿನ್ ಡಿ ಕೊರತೆಯ ಪ್ರಮುಖ ಲಕ್ಷಣಗಳು...

Vitamin:  ನಮ್ಮ ದೈನಂದಿನ ಬದುಕಿನಲ್ಲಿ ಕಂಡುಬರುವ ಬಹಳಷ್ಟು ಸೂಚನೆಗಳನ್ನ ನಾವು ಸಾಮಾನ್ಯ ಎಂದು ಬಾವಿಸುತ್ತೇವೆ. ಅದರೆ ಅದೇ ಸಾಮಾನ್ಯ ಸೂಚನೆಗಳು ನಿಮ್ಮ ದೇಹದಲ್ಲಿನ ವಿಟಮಿನ್‌ ಡಿ ಕೊರೆತೆಯ ಲಕ್ಷಣಗಳು ಎಂದು ನಿಮಗೆ ತಿಳಿದಿದೆಯಾ. ಹಾಗಾದರೆ ನೋಡಿ ಈ ಸೂಚನೆಗಳು ಕಂಡು ಬಂದಲ್ಲಿ ಹೆಚ್ಚೆತ್ತು ಕೊಳ್ಳಿ. ಇದಕ್ಕೆ ಕಾರಣ ನಿಮ್ಮ ದೇಹದಲ್ಲಿ ವಿಟಮಿನ್‌ ಡಿ ಯಾ ಕೊರೆತೆ ಕೂಡಾ ಆಗಿರಬಹುದು...

Written by - Zee Kannada News Desk | Last Updated : Jan 2, 2024, 03:16 PM IST
  • ವಿಟಮಿನ್‌ ಡಿ ಕೊರತೆಯಿಂದ ಮಾನಸಿಕ ಅಸ್ವಸ್ಥತೆ ಹಾಗೂ ಖಿನ್ನತೆ ಕಾಣಿಸಿಕೊಳ್ಳಬಹುದು.
  • ಜೀವಕೋಶದ ಬೆಳವಣಿಗೆಯನ್ನ ಉತ್ತೇಜಿಸಲು ವಿಟಮಿನ್ ಬಹಳಷ್ಟು ಅವಶ್ಯಕವಾಗಿದೆ.
  • ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವಲ್ಲಿ ವಿಟಮಿನ್ ಡಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ವಿಟಮಿನ್ ಡಿ ಕೊರತೆಯ ಪ್ರಮುಖ ಲಕ್ಷಣಗಳು... title=

ಖಿನ್ನತೆ 
ಮೆದುಳಿನ ಕಾರ್ಯ ನಿರ್ವಾಹಣೆಯಲ್ಲಿ ವಿಟಮಿನ್‌ ಡಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್‌ ಡಿ ಕೊರತೆಯಿಂದ ಮಾನಸಿಕ ಅಸ್ವಸ್ಥತೆ ಹಾಗೂ ಖಿನ್ನತೆ ಕಾಣಿಸಿಕೊಳ್ಳಬಹುದು. ಅದರಿಂದಾಗಿ ವಿಟಮಿನ್‌ ಡಿ ಅನ್ನ ಬ್ಯಾಲೆಂಸ್‌ ಮಾಡುವುದು ತುಂಬಾ ಮುಖ್ಯ.

ಕೂದಲು ಉದುರುವಿಕೆ
ಇತರ ರೋಗಲಕ್ಷಣಗಳಂತೆ ಉತ್ತಮವಾಗಿ ಸ್ಥಾಪಿತವಾಗಿಲ್ಲದಿದ್ದರೂ, ವಿಟಮಿನ್ ಡಿ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ಕೆಲ ಸಂಶೋಧನೆಗಳು ತೋರಿಸಿ ಕೊಡುತ್ತದೆ.

ಇದನ್ನೂ ಓದಿ: ಭಾರತ ವಿಶ್ವದ ಮಧುಮೇಹ ರಾಜಧಾನಿಯಾಗುತ್ತಿರುವುದೇಕೆ ? ಹೆಚ್ಚುತ್ತಿರುವ ಅಪಾಯವನ್ನು ತಡೆಯುವುದು ಹೇಗೆ ಗೊತ್ತೇ?

ಬೆನ್ನು ನೋವು
ವಿಟಮಿನ್ ಡಿ ಅತ್ಯಗತ್ಯ, ಇದರ ಕೊರತೆಯು ಮೂಳೆ ನೋವು ಮತ್ತು ಕೆಳ ಬೆನ್ನುನೋವಿಗೆ ಕಾರಣವಾಗಬಹುದು.

ಆಯಾಸ ಮತ್ತು ದೌರ್ಬಲ್ಯ
ವಿಟಮಿನ್ ಡಿ ಕೊರತೆಯ ಮತ್ತೊಂದು ಆರಂಭಿಕ ಚಿಹ್ನೆಗಳಲ್ಲಿ ಆಯಾಸ ಹಾಗೂ ದೌರ್ಬಲ್ಯ ಕೂಡ ಒಂದಾಗಿದೆ. ಸಾಕಷ್ಟು ವಿಶ್ರಾಂತಿಯ ನಂತರ ಕೂಡ ನಿಮಗೆ ದಣಿದ ಅನಿಭವ ಆಗುತಿದ್ದರೆ, ವಿಟಮಿನ್‌ ಡಿ ಮಟ್ಟವನ್ನ ಪರಿಗಣಿಸುವುದು ಮುಖ್ಯ.

ಗಾಯದ ಚೇತರಿಕೆ ವಿಳಂಭ
ವಿಟಮಿನ್ ಡಿ ಕೊರತೆಯು ಗಾಯದಿಂದ ಚೇತರಿಕೆ ಪಡೆಯುವ ಪ್ರಕ್ರಿಯನ್ನ ಸುಧೀರ್ಗ ಗೊಳಿಸುತ್ತದೆ. ಜೀವಕೋಶದ ಬೆಳವಣಿಗೆಯನ್ನ ಉತ್ತೇಜಿಸಲು ವಿಟಮಿನ್ ಬಹಳಷ್ಟು ಅವಶ್ಯಕವಾಗಿದೆ. ವಿಟಮಿನ್ ಡಿ ಕೊರತೆಯ ಕಾರಣ  ದೇಹದ ಸಾಮರ್ಥ್ಯವನ್ನು ಅದು ಕುಂಠಿತಗೊಳಿಸಬಹುದು, ಇದರಿಂದಾಗಿ ಗಾಯ ವಾಸಿಯಾಗಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ನಿಮಗೇನಾದರು ಗಾಯ ವಾಸಿಯಾಗಲು ವಿಳಂಭವಾಗುತ್ತಿದ್ದರೆ ಅದಕ್ಕೆ ಕಾರಣ ನಿಮಗೆ ವಿಟಮಿನ್‌ ಡಿ ಕೊರೆತೆ ಇದೆ ಎಂಬುದರ ಸಂಕೇತ. 

ಇದನ್ನೂ ಓದಿ: ಹಲಸಿನ ಹಣ್ಣಿನ ಬೀಜಗಳ ಸೇವನೆಯಿಂದ ಆಗುವ ಲಾಭ ತಿಳಿದರೆ ಶಾಕ್ ಆಗುತ್ತೀರಿ!

ಸೋಂಕುಗಳಿಂದ ಚೇತರಿಕೆ
ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವಲ್ಲಿ ವಿಟಮಿನ್ ಡಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನೀವು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಮತ್ತು ಕಾಯಿಲೆಯಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದರೆ, ಇದು ವಿಟಮಿನ್ ಡಿ ಕೊರತೆಯ ಸಂಕೇತವಾಗಿರಬಹುದು ಹುಷಾರ್

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News