ಬಿಸಿಲಿನಿಂದ ಚರ್ಮ ಕಳೆಗುಂದಿದೆಯೇ? ಹೊಳೆಯುವ ತ್ವಚೆಯನ್ನು ಮರಳಿ ಪಡೆಯಲು ಇಲ್ಲಿವೆ 5 ಫೇಸ್ ಪ್ಯಾಕ್‌ಗಳು

Sunburn Removal Tips: ಸನ್‌ಬರ್ನ್  ಸಮಸ್ಯೆಯಿಂದ ಮುಕ್ತಿ ಪಡೆದು ಹೊಳೆಯುವ ತ್ವಚೆ ನಿಮ್ಮದಾಗಿಸಬೇಕೇ? ಇದಕ್ಕಾಗಿ ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ. 

Written by - Yashaswini V | Last Updated : May 15, 2024, 12:53 PM IST
  • ಬೆವರಿನಿಂದಾಗಿ ಮುಖ ಕಪ್ಪಾಗುವುದರಿಂದ ಮುಖದಲ್ಲಿ ಕಳೆ ಕಡಿಮೆಯಾಗಿ ಮಂದತೆ ಗೋಚರಿಸುತ್ತದೆ.
  • ಇನ್ನೂ ಕೆಲವರಿಗೆ ಬೇಸಿಗೆಯಲ್ಲಿ ಸನ್‌ಬರ್ನ್ ಸಮಸ್ಯೆ ಅತಿಯಾಗಿ ಕಾಡುತ್ತದೆ.
  • ಆದರೆ ಈ ಸಮಸ್ಯೆಗಳಿಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಸುಲಭ ಪರಿಹಾರ
ಬಿಸಿಲಿನಿಂದ ಚರ್ಮ ಕಳೆಗುಂದಿದೆಯೇ? ಹೊಳೆಯುವ ತ್ವಚೆಯನ್ನು ಮರಳಿ ಪಡೆಯಲು ಇಲ್ಲಿವೆ 5 ಫೇಸ್ ಪ್ಯಾಕ್‌ಗಳು  title=

Facepacks For Glowing Skin: ಬೇಸಿಗೆಯಲ್ಲಿ ಚರ್ಮ ಕಳೆಗುಂದುವುದು ಸಹಜ. ಇದಕ್ಕೆ ಅತಿಯಾದ ಬಿಸಿಲು ಮತ್ತು ಹೆಚ್ಚಾಗಿ ಬೆವರುವುದು ಪ್ರಮುಖ ಕಾರಣಗಳಿರಬಹುದು. ಬೆವರಿನಿಂದಾಗಿ ಮುಖ ಕಪ್ಪಾಗುವುದರಿಂದ ಮುಖದಲ್ಲಿ ಕಳೆ ಕಡಿಮೆಯಾಗಿ ಮಂದತೆ ಗೋಚರಿಸುತ್ತದೆ. ಇನ್ನೂ ಕೆಲವರಿಗೆ ಬೇಸಿಗೆಯಲ್ಲಿ ಸನ್‌ಬರ್ನ್  ಸಮಸ್ಯೆ (Sunburn Problems) ಅತಿಯಾಗಿ ಕಾಡುತ್ತದೆ. ಆದರೆ, ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ತ್ವಚೆಯ ಹೊಳಪನ್ನು ಮರಳಿ ಪಡೆಯಬಹುದು. ಅಂತಹ ಕೆಲವು ಸರಳ ಫೇಸ್ ಪ್ಯಾಕ್‌ಗಳು ಇಲ್ಲಿವೆ. 

ಬಿಸಿಲಿನಿಂದ ಟ್ಯಾನ್ ಆಗಿರುವ ಚರ್ಮವನ್ನು ಮರಳಿ ಕಾಂತಿಯುತವಾಗಿಸಲು ಸಹಾಯಕವಾದ ಸರಳ ಫೇಸ್ ಪ್ಯಾಕ್‌ಗಳೆಂದರೆ... 
ಕಡಲೆಹಿಟ್ಟು ಮತ್ತು ಅರಿಶಿನದ ಫೇಸ್ ಪ್ಯಾಕ್ (Chickpea flour and Turmeric Face Pack): 

ಸೂರ್ಯನ ಕಿರಣಗಳು ಮತ್ತು ಬೆವರಿನಿಂದ ನಿಮ್ಮ ಮುಖವು ನಿರ್ಜೀವವಾಗಿದ್ದರೆ ಕಡಲೆಹಿಟ್ಟು ಮತ್ತು ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ  ಮುಖಕ್ಕೆ ಹಚ್ಚುವುದರಿಂದ ಕಾಂತಿಯುತ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಬಹುದು. 

ಕಲ್ಲಂಗಡಿ ಫೇಸ್ ಪ್ಯಾಕ್ (Watermelon face pack): 
ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆಯಿಂದ ಪರಿಹಾರಕ್ಕಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸಲು ಸಲಹೆ ನೀಡಲಾಗುತಡೆ. ಅಂತೆಯೇ, ಚರ್ಮವನ್ನು ತೇವಾಂಶದಿಂದ ಇರುವಂತೆ ಕಾಳಜಿವಹಿಸಲು ಕಲ್ಲಂಗಡಿ ಫೇಸ್ ಪ್ಯಾಕ್ (Watermelon face pack) ಅನ್ನು ಅನ್ವಯಿಸುವುದು ಪ್ರಯೋಜನಕಾರಿ ಆಗಿದೆ. ಈ ಫೇಸ್ ಪ್ಯಾಕ್ ತ್ವಚೆಯನ್ನು ಹೈಡ್ರೇಟ್ ಆಗಿಡಲು ಮತ್ತು ಬೇಸಿಗೆಯಲ್ಲಿ ಚರ್ಮದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಲು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ಇದನ್ನೂ ಓದಿ- ಕೂದಲುದುರುವಿಕೆ ಸಮಸ್ಯೆಗೆ ಕಾಫಿಯಿಂದ ಸಿಗುತ್ತೆ ಸುಲಭ ಪರಿಹಾರ

ಅರಿಶಿನ ಮತ್ತು ಮೊಸರಿನ ಫೇಸ್ ಪ್ಯಾಕ್ (Turmeric and yogurt face pack): 
ಅರಿಶಿನ ಮತ್ತು ಮೊಸರು ಎರಡೂ ಕೂಡ ಚರ್ಮದ ಆರೋಗ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತದೆ. ವಾರಕ್ಕೆ ಎರಡು ಬಾರಿ ರೋಸ್ ವಾಟರ್ ಬೆರೆಸಿ ಮೊಸರು ಮತ್ತು ಅರಿಶಿನ ಮಿಶ್ರಿತ ಫೇಸ್ ಪ್ಯಾಕ್ ತಯಾರಿಸಿ ಅನ್ವಯಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. 

ಕಡಲೆಹಿಟ್ಟು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ (Chickpea flour and honey face pack): 
ಬೇಸಗೆಯಲ್ಲಿ ಕಡಲೆಹಿಟ್ಟು ಮತ್ತು ಜೇನುತುಪ್ಪವನ್ನು ರೋಸ್ ವಾಟರ್ ಜೊತೆಗೆ  ಮಿಕ್ಸ್ ಮಾಡಿ ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ನಿಮ್ಮ ತ್ವಚೆಯಲ್ಲಿರುವ ಕೊಳೆ ನಿವಾರಣೆಯಾಗುತ್ತದೆ.  ಈ ಫೇಸ್ ಪ್ಯಾಕ್ ಹಚ್ಚುವುದರಿಂದ ಕಾಂತಿಯುತ ತ್ವಚೆಯನ್ನು ಮರಳಿ ಪಡೆಯಬಹುದು. 

ಇದನ್ನೂ ಓದಿ- Aloe Vera for Hair Care: ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಅಲೋವೆರಾ

ಕಡಲೆ ಹಿಟ್ಟು ಮತ್ತು ಅಲೋವೆರಾ ಜೇಲ್ ಫೇಸ್ ಪ್ಯಾಕ್ (Chickpea flour and aloe vera gel face pack): 
ಅಲೋವೆರಾ ಚರ್ಮಕ್ಕೆ ವರದಾನವಿದ್ದಂತೆ ಎಂದು ನಿಮಗೆ ತಿಳಿದಿರಬಹುದು. ಅಲೋವೆರಾ ಜೆಲ್ ಅನ್ನು ಕಡಲೆ ಹಿತ್ತಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮದಲ್ಲಿ ಮೂಡಿರುವ ಕಲೆ ನಿವಾರಣೆಯಾಗಿ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಬಹುದು. ಇದಕ್ಕಾಗಿ, ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುವುದು ಹೆಚ್ಚು ಪ್ರಯೋಜನಕಾರಿ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News