ನವದೆಹಲಿ : ಸಹೋದರ ಮತ್ತು ಸಹೋದರಿಯರ ಅವಿನಾಭಾವ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ರಕ್ಷಾ ಬಂಧನದ (Raksha Bandan 2021) ಹಬ್ಬ ಬಂದೇ ಬಿಟ್ಟಿದೆ. ಇಂದು ಅಂದರೆ ಆಗಸ್ಟ್ 22ರ ಭಾನುವಾರ ಹಬ್ಬವನ್ನು ಆಚರಿಸಲಾಗುತ್ತಿದೆ. ಸಹೋದರ ಸಹೋದರಿಯರಿಗೆ ಇದೊಂದು ವಿಶೇಷ ದಿನವಾಗಿರುತ್ತದೆ. ಈ ವರ್ಷ ಈ ಹಬ್ಬ ಇನ್ನೂ ವಿಶೇಷ. ಯಾಕೆಂದರೆ ಈ ಬಾರಿ ರಕ್ಷಾಬಂಧನ (Rakshan Bandhan) ದಿನದಂದು ಎರಡು ಯೋಗಗಳು ರೂಪುಗೊಳ್ಳುತ್ತವೆ. ಇದರ ಹೊರತಾಗಿ, ಈ ಬಾರಿಯ ರಕ್ಷಾಬಂಧನದ ಹಬ್ಬದಂದು ಅಶುಭವಾದ ಕಾಳ ಭದ್ರನ ನೆರಳು ಇರುವುದಿಲ್ಲ. ಇಂದು ಇಡೀ ದಿನ ಭದ್ರ ಕಾಲ ಇರುವುದಿಲ್ಲ. ಭದ್ರಾ ಅವಧಿಯಲ್ಲಿ ಮಂಗಳಕರವಾದ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ರಾಖಿ ಕಟ್ಟಿದರೆ ಸಮಸಸ್ಯೆಗಳನ್ನು ಆಹ್ವಾನಿಸಿದಂತೆ ಎನ್ನುವುದು ನಂಬಿಕೆ.
ಶೋಭನ್ ಯೋಗ :
ಶೋಭನ್ ಯೋಗವನ್ನು (Shobhan yoga) ಮಂಗಳಕರವಾದ ಕೆಲಸ ಮಾಡಲು ತುಂಬಾ ಒಳ್ಳೆಯದು. ಇಂದು ರಕ್ಷಾ ಬಂಧನದ (Raksha bandhan) ದಿನದಂದು ಶೋಭನ್ ಯೋಗವು ಬೆಳಿಗ್ಗೆ 10:34 ರವರೆಗೆ ಇರುತ್ತದೆ. ಈ ಸಮಯದ ಮಿತಿಯವರೆಗೆ ಸಹೋದರನಿಗೆ ರಾಖಿ ಕಟ್ಟುವ ಮೂಲಕ, ಸಹೋದರ-ಸಹೋದರಿಯರ ಸಂಬಂಧದ ಇನ್ನಷ್ಟು ಗಟ್ಟಿಯಾಗಿರುತ್ತದೆ.. ಇದಲ್ಲದೇ, ಸಂಜೆ 07:40 ರವರೆಗೆ ಧನಿಷ್ಠಾ ನಕ್ಷತ್ರ ಕೂಡ ಇರಲಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಧನಿಷ್ಠಾ ನಕ್ಷತ್ರದಲ್ಲಿ ಜನಿಸಿದ ಜನರು ತಮ್ಮ ಸಹೋದರ ಸಹೋದರಿಯರನ್ನು ತುಂಬಾ ಪ್ರೀತಿಸುತ್ತಾರೆ. ಆದ್ದರಿಂದ ಈ ರಾಶಿಯನ್ನು ರಾಖಿ ಕಟ್ಟಲು ಇದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ : Raksha Bandhan 2021: ರಾಖಿ ಕಟ್ಟುವ ಶುಭ ಮುಹೂರ್ತ, ಪೂಜಾ ಸಮಯದ ಬಗ್ಗೆ ತಿಳಿದುಕೊಳ್ಳಿ…
ರಕ್ಷಾಬಂಧನದ ಶುಭ ಸಮಯ :
ರಕ್ಷಾಬಂಧನದಂದು ಭದ್ರ ಕಾಲ (Bhadra kaala) ಇಲ್ಲದ ಕಾರಣ, ರಾಖಿಯನ್ನು ಬೆಳಿಗ್ಗೆ 05:50 ರಿಂದ ಸಂಜೆ 06:03 ರವರೆಗೆ ಯಾವುದೇ ಸಮಯದಲ್ಲಿ ಕಟ್ಟಬಹುದು. ಅಂದರೆ, ರಾಖಿ ಕಟ್ಟಲು 12 ಗಂಟೆ 13 ನಿಮಿಷಗಳ ಸಮಯವಿರುತ್ತದೆ ಮತ್ತು ಅದು ನಿರಂತರವಾಗಿರುತ್ತದೆ. ಅದೇ ಸಮಯದಲ್ಲಿ, ರಾಖಿ ಕಟ್ಟಲು 2 ವಿಶೇಷ ಶುಭ ಸಮಯಗಳಿರುತ್ತವೆ.
ಅಮೃತ ಮುಹೂರ್ತ: ಬೆಳಿಗ್ಗೆ 09:34 ರಿಂದ 11:07 ರವರೆಗೆ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:04 ರಿಂದ 12:58 ಕ್ಕೆ
ಇದನ್ನೂ ಓದಿ : Raksha Bandhan 2021: ರಕ್ಷಾ ಬಂಧನದಂದು ಸಹೋದರನಿಗೆ ರಾಖಿ ಕಟ್ಟುವಾಗ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ