Raksha Bandhan 2021: ರಾಖಿ ಕಟ್ಟುವ ಶುಭ ಮುಹೂರ್ತ, ಪೂಜಾ ಸಮಯದ ಬಗ್ಗೆ ತಿಳಿದುಕೊಳ್ಳಿ…

ರಾಖಿ ಕಟ್ಟುವ ಶುಭ ಮುಹೂರ್ತ ಮತ್ತು ಪೂಜಾ ವಿಧಿ-ವಿಧಾನಗಳು, ಸಮಯದ ಬಗ್ಗೆ ಇಲ್ಲಿದೆ ಮಾಹಿತಿ.

Written by - Puttaraj K Alur | Last Updated : Aug 21, 2021, 06:15 PM IST
  • ಪ್ರತಿವರ್ಷದಂತೆ ಈ ವರ್ಷವೂ ಬಂದಿದೆ ಸಡಗರ-ಸಂಭ್ರಮದ ರಕ್ಷಾ ಬಂಧನದ ಉತ್ಸವ
  • ಸಹೋದರ-ಸಹೋದರಿಯರು ಆಚರಿಸುವ ರಕ್ಷಾ ಬಂಧನಕ್ಕೆ ಕೌಂಟ್ ಡೌನ್ ಶುರುವಾಗಿದೆ
  • ರಕ್ಷಾ ಬಂಧನ ಹಬ್ಬದ ಶುಭ ಮುಹೂರ್ತ, ಪೂಜಾ ಸಮಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ
Raksha Bandhan 2021: ರಾಖಿ ಕಟ್ಟುವ ಶುಭ ಮುಹೂರ್ತ, ಪೂಜಾ ಸಮಯದ ಬಗ್ಗೆ ತಿಳಿದುಕೊಳ್ಳಿ… title=
ಆಗಸ್ಟ್ 22ರ ಭಾನುವಾರ ರಕ್ಷಾ ಬಂಧನ ಉತ್ಸವ ನಡೆಯಲಿದೆ

ನವದೆಹಲಿ: ಪ್ರತಿವರ್ಷದಂತೆ ಈ ವರ್ಷವೂ ಸಂಭ್ರಮ-ಸಡಗರದ ರಕ್ಷಾ ಬಂಧನ(Raksha Bandhan) ದ ಹಬ್ಬ ಬಂದಿದೆ. ಈ ವರ್ಷ ಆಗಸ್ಟ್ 22 ರಂದು ರಕ್ಷಾ ಬಂಧನದ ಶುಭ ಸಮಾರಂಭವನ್ನು ಆಚರಿಸಲಾಗುತ್ತಿದೆ. ಎಲ್ಲಾ ಸಹೋದರ ಸಹೋದರಿಯರಿಗೆ ಸಮರ್ಪಿತವಾಗಿರುವ ಈ ಬಹುನಿರೀಕ್ಷಿತ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ.

ಈ ಹಬ್ಬದ ಪ್ರಯುಕ್ತ ಸಹೋದರಿಯರು ವಿಶೇಷ ಶುಭ ಮುಹೂರ್ತದ ಸಮಯದಲ್ಲಿ ಸಹೋದರರ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ. ರಾಖಿ ಕಟ್ಟುವ ಶುಭ ಮುಹೂರ್ತ(Rakhi Muhurat) ಮತ್ತು ಪೂಜಾ ವಿಧಿ-ವಿಧಾನಗಳು, ಸಮಯದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.  

ಇದನ್ನೂ ಓದಿ: Tulsi Water Benefits: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಸೇವಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ

ರಾಖಿ ಕಟ್ಟಲು ಶುಭ ಮುಹೂರ್ತ:(Rakhi Muhurat)

  * ಆಗಸ್ಟ್ 22ರ ಭಾನುವಾರ ರಕ್ಷಾ ಬಂಧನ ಉತ್ಸವ ನಡೆಯಲಿದೆ

  * ರಕ್ಷಾ ಬಂಧನ ದಾರ ಸಮಾರಂಭ ಸಮಯ – ಬೆಳಗ್ಗೆ 6:15 ರಿಂದ ಸಂಜೆ 5:31 ಗಂಟೆಯವರೆಗೆ (ಅವಧಿ - 11 ಗಂಟೆ 16 ನಿಮಿಷಗಳು)

  * ಮಧ್ಯಾಹ್ನ ಸಮಯದ ರಕ್ಷಾ ಬಂಧನ ಮುಹೂರ್ತ – ಮಧ್ಯಾಹ್ನ1:42 ರಿಂದ ಸಂಜೆ 4:18ರವರೆಗೆ (ಅವಧಿ - 2 ಗಂಟೆ 36 ನಿಮಿಷಗಳು) ರಾಖಿ ಕಟ್ಟಲು ಇದು ಶುಭ ಸಮಯವಾಗಿದ್ದು, ಈ ಸಮಯದಲ್ಲಿ ರಾಖಿ ಕಟ್ಟುವುದು ಅತ್ಯಂತ ಮಂಗಳಕರವಾಗಿರುತ್ತದೆ. ಭದ್ರಾ ಕಾಲ(Bhadra Kaal)ವನ್ನು ಅಶುಭ ಮುಹೂರ್ತ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಶುಭಕಾರ್ಯಗಳು ನೆರವೇರುವುದಿಲ್ಲ ಎಂದು ಹಿರಿಯರು ಪಂಚಾಂಗದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Castor Oil: ಡಾರ್ಕ್ ಸರ್ಕಲ್ ಸಮಸ್ಯೆಗೆ ತಕ್ಷಣ ಪರಿಹಾರ ನೀಡಲಿದೆ ಈ ಎಣ್ಣೆ

* ರಕ್ಷಾ ಬಂಧನ ಭದ್ರಾ ಕಾಲದ ಅಂತ್ಯ ಸಮಯ – ಬೆಳಗ್ಗೆ 6:15

* ರಕ್ಷಾ ಬಂಧನ ಭದ್ರಾ ಪಂಚ ಕಾಲ- ಬೆಳಗ್ಗೆ 2:19 ರಿಂದ ಬೆಳಗ್ಗೆ 3:27 ರವರೆಗೆ

* ರಕ್ಷಾ ಬಂಧನ ಭದ್ರಾ ಮುಖ ಕಾಲ – ಬೆಳಗ್ಗೆ 3:27 ರಿಂದ 5:19 ರವರೆಗೆ

* ಪೂರ್ಣಿಮಾ ತಿಥಿ ಆರಂಭ - ಆಗಸ್ಟ್ 21ರ ಸಂಜೆ 7 ಗಂಟೆಗೆ

* ಪೂರ್ಣಿಮಾ ತಿಥಿ ಕೊನೆಗೊಳ್ಳುವುದು - ಆಗಸ್ಟ್ 22ರ ಸಂಜೆ 5:31ಕ್ಕೆ

(drikpanchang.com ಪ್ರಕಾರ)

ಇದನ್ನೂ ಓದಿ: Palmistry: ನಿಮ್ಮ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳ ಕುರಿತು ಹೇಳುತ್ತವೆ ಅಂಗೈಯಲ್ಲಿನ ಈ ನಾಲ್ಕು ರೇಖೆಗಳು

ರಕ್ಷಾ ಬಂಧನ ಪೂಜಾ ವಿಧಿ ವಿಧಾನಗಳು 2021: (Hindu Panchanga)

* ಸಹೋದರಿಯರು ತಮ್ಮ ಪ್ರೀತಿಯ ಸಹೋದರರಿಗೆ ರಾಖಿ ಕಟ್ಟಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಒಂದು ಸಣ್ಣ ದೀಪ, ಅರಿಶಿನ ಬೆರೆಸಿದ ಅಕ್ಕಿ, ಕುಂಕುಮ, ಸಿಹಿತಿಂಡಿಗಳು ಮತ್ತು ನಿಮಗಿಷ್ಟವಾದ ರಾಖಿಯನ್ನು ಖರೀದಿಸಿ ಇಟ್ಟುಕೊಂಡಿರಬೇಕು.

* ನಿಮ್ಮ ಇಡೀ ಕುಟುಂಬದೊಂದಿಗೆ ಒಳಿತಿಗಾಗಿ ಪ್ರಾರ್ಥಿಸಿ. ನಿಮ್ಮ ಮನೆಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಮಾಡಿ

* ದೇವರಿಗೆ ಪೂಜೆ ಸಲ್ಲಿಸಿದ ನಂತರ ನೆಲದ ಮೇಲೆ ಚಾಪೆಯನ್ನು ಹಾಸಿರಿ. ಚಾಪೆಯ 4 ದಿಕ್ಕಿನಲ್ಲಿ ರಂಗೋಲಿ ಹಾಕಿ. ನಿಮ್ಮ ಸಹೋದರನನ್ನು ಚಾಪೆಯ ಮೇಲೆ ಕುಳಿತುಕೊಳ್ಳುವಂತೆ ಸಿದ್ಧತೆ ಮಾಡಿಕೊಳ್ಳಿ.   

* ನಂತರ ನೀವಿಬ್ಬರೂ ಪರಸ್ಪರ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಬೇಕು.

* ನಿಮ್ಮ ಸಹೋದರನ ಹಣೆಯ ಮೇಲೆ ಕುಂಕುಮದ ತಿಲಕವನ್ನು ಹಚ್ಚಿ.

* ನಂತರ ಸಯೋದರನ ಬಲ ಮಣಿಕಟ್ಟಿನ ಸುತ್ತ ರಾಖಿ ಕಟ್ಟಿರಿ.

* ನಂತರ ನಿಮ್ಮ ಸಹೋದರನಿಗೆ ಆರತಿಯನ್ನು ಬೆಳಗಿ ಶುಭವಾಗಲಿ ಎಂದು ಹಾರೈಸಿರಿ.

* ಸಹೋದರ ತಲೆಯ ಮೇಲೆ ಅಕ್ಷತೆ ಹಾಕಿ.

* ನಿಮ್ಮ ಸಹೋದರನಿಗೆ ಸಿಹಿತಿಂಡಿ ನೀಡಿ.

* ಸಹೋದರ ನಿಮಗಾಗಿ ಖರೀದಿಸಿದ ಉಡುಗೊರೆಯನ್ನು ನಮ್ರತೆಯಿಂದ ಸ್ವೀಕರಿಸಿ.

* ಈ ಆಚರಣೆ ಮಾಡುವ ವಿಧಾನವು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಬಹುದು, ಆದರೆ ರಾಖಿ ಕಟ್ಟುವ ತತ್ವಗಳು ಒಂದೇ ಆಗಿರುತ್ತವೆ.

* ನಿಮ್ಮ ಒಡಹುಟ್ಟಿದವರೊಂದಿಗೆ ಖುಷಿ-ಖುಷಿಯಾಗಿ ರಕ್ಷಾ ಬಂಧನ ಉತ್ಸವವನ್ನು ಆಚರಿಸಿ ಸಂಭ್ರಮಿಸಿರಿ.

 ಎಲ್ಲಾ ಸಹೋದರ-ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News