ನವದೆಹಲಿ : ಹಿಂದೂ ಧರ್ಮದಲ್ಲಿ ಹೋಮ ಹವನಕ್ಕೆ (Homa- Havan) ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಪ್ರಕ್ರಿಯೆಯನ್ನು ಯಜ್ಞ ಎಂದೂ ಕರೆಯುತ್ತಾರೆ. ಹವನದಲ್ಲಿ, ಜೇನುತುಪ್ಪ, ತುಪ್ಪ(Ghee),ಹಣ್ಣುಗಳು ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ. ಹವನವನ್ನು ನಿಯಮಿತವಾಗಿ ನಿರ್ವಹಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಗಾಳಿಯನ್ನು ಶುದ್ಧೀಕರಿಸುತ್ತದೆ. ಅಲ್ಲದೆ, ವಾಸ್ತು ಪ್ರಕಾರ ಹವನ ಮಾಡುವುದು ತುಂಬಾ ಪ್ರಯೋಜನಕಾರಿ (Benefits of havan) ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಸುತ್ತಮುತ್ತಲಿನ ಪರಿಸರದಲ್ಲಿ ಸಕಾರಾತ್ಮಕ ಶಕ್ತಿ ಅಥವಾ ಪಾಸಿಟಿವ್ ಎನರ್ಜಿ (Posotive Energy) ಉಳಿಯುತ್ತದೆ. ಹವನ ಮಾಡಿದ ನಂತರ ಅನೇಕ ಜನರು ಅದರ ಭಸ್ಮವನ್ನು ಎಸೆಯುತ್ತಾರೆ. ಆದರೆ, ಈ ಹವನ ಭಸ್ಮದಲ್ಲೂ ಚಮತ್ಕಾರಿ ಶಕ್ತಿ ಅಡಗಿದೆಯಂತೆ.
ಹವನ ಭಸ್ಮಗಳ ಪ್ರಯೋಜನಗಳು :
ಋಣಾತ್ಮಕ ಶಕ್ತಿಗಳು ದೂರವಿರುತ್ತವೆ : ಹವನ (Havan) ಮಾಡಿದ ನಂತರ, ಅದರ ಬೂದಿಯನ್ನು ಮನೆ ಅಥವಾ ವ್ಯಾಪಾರದ ಸ್ಥಳದ ಸುತ್ತಲೂ ಚಿಮುಕಿಸಬೇಕು. ಹೀಗೆ ಮಾಡುವುದರಿಂದ ಋಣಾತ್ಮಕ ಶಕ್ತಿಗಳು (Negetive energy) ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : ಅಕ್ಟೋಬರ್ 17 ರಂದು ಸೂರ್ಯನ ಸ್ಥಾನಪಲ್ಲಟ, ತೆರೆಯಲಿದೆ ಈ 6 ರಾಶಿಗಳ ಭಾಗ್ಯದ ಬಾಗಿಲು
ಕಣ್ಣಿನ ದೋಷದಿಂದ ಮುಕ್ತಿ: ಕಣ್ಣಿನ ದೋಷವನ್ನು ತಪ್ಪಿಸಲು, ಮನೆಯ ಸದಸ್ಯರು ಹವನ ಬೂದಿ ಅಥವಾ ಭಸ್ಮವನ್ನು ಹಣೆಗೆ ಹಚ್ಚಿಕೊಳ್ಳಬೇಕಂತೆ. ಹೀಗೆ ಮಾಡುವುದರಿಂದ ಕಣ್ಣಿನ ದೋಷಗಳನ್ನು (Eye Problem) ಹೋಗಲಾಡಿಸಬಹುದು ಎನ್ನುವುದು ನಂಬಿಕೆ.
ಧನ ಸಂಪತ್ತು ಹೆಚ್ಚುತ್ತದೆ : ಹವನದ ಭಸ್ಮವನ್ನು ತಿಜೋರಿಯಲ್ಲಿ ಇಡುವುದರಿಂದ ಹಣದ ಕೊರತೆ (money problem) ಎಂದಿಗೂ ಎದುರಾಗುವುದಿಲ್ಲ. ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗುತ್ತದೆ. ಮತ್ತು ಸಂಪತ್ತಿನಲ್ಲಿ ವೃದ್ದಿಯಾಗುತ್ತದೆ.
ಇದನ್ನೂ ಓದಿ : ದಸರಾದಲ್ಲಿ ಪಾನ್ ತಿನ್ನುವುದು ಏಕೆ ಮುಖ್ಯ? ಮಹತ್ವ ಮತ್ತು ಕಾರಣಗಳನ್ನು ತಿಳಿಯಿರಿ
ಕೆಟ್ಟ ಕನಸುಗಳಿಂದ ಮುಕ್ತಿ : ರಾತ್ರಿ ಹೊತ್ತು ಕೆಟ್ಟ ಕನಸು (Bad dreams) ಬೀಳುತ್ತಿದ್ದರೆ, ಹವನದ ಭಸ್ಮ ಉಪಯೋಗಕ್ಕೆ ಬರುತ್ತದೆ. ಪ್ರತಿದಿನ 4 ದಿನಗಳವರೆಗೆ ಹವನದ ಭಸ್ಮವನ್ನು ಹಣೆಗೆ ಹಚ್ಚಿಕೊಂಡರೆ, ಕೆಟ್ಟ ಕನಸು ಬರುವುದು ನಿಲ್ಲುತ್ತದೆಯಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ