Astrology: ತಾವೇ ಶ್ರೇಷ್ಠ ಅಂದುಕೊಳ್ಳುತ್ತಾರಂತೆ ಈ 4 ರಾಶಿಯವರು, ನಿಮ್ಮ ಸುತ್ತಲೂ ಇದ್ದಾರೆಯೇ ಇವರು?

ಜ್ಯೋತಿಷ್ಯದ ಪ್ರಕಾರ, ಅಂತಹ ಅಭ್ಯಾಸವು 4 ರಾಶಿಚಕ್ರಗಳವರಿಗೆ ಇರುತ್ತದೆಯಂತೆ.  ತಮ್ಮನ್ನು ತಾವು ಅತ್ಯುತ್ತಮವೆಂದು ಪರಿಗಣಿಸುವ ಈ ಅಭ್ಯಾಸದಿಂದಾಗಿ, ಅವರು ಕೆಲವೊಮ್ಮೆ ಭಾರೀ ನಷ್ಟವನ್ನು ಕೂಡಾ ಅನುಭವಿಸಬೇಕಾಗುತ್ತದೆ.   

Written by - Ranjitha R K | Last Updated : Sep 20, 2021, 01:32 PM IST
  • ಜ್ಯೋತಿಷ್ಯದ ಮೂಲಕ ವ್ಯಕ್ತಿಯ ಸ್ವಭಾವ ತಿಳಿದುಕೊಳ್ಳಬಹುದು
  • 4 ರಾಶಿಚಕ್ರ ಚಿಹ್ನೆಗಳು ತಮ್ಮನ್ನು ತಾವು ಅತ್ಯುತ್ತಮರೆಂದು ಪರಿಗಣಿಸುತ್ತಾರೆ
  • ಎಲ್ಲಿ ಹೋದರೂ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ
Astrology: ತಾವೇ ಶ್ರೇಷ್ಠ ಅಂದುಕೊಳ್ಳುತ್ತಾರಂತೆ ಈ 4 ರಾಶಿಯವರು, ನಿಮ್ಮ ಸುತ್ತಲೂ ಇದ್ದಾರೆಯೇ ಇವರು?

ನವದೆಹಲಿ : ಅನೇಕ ಜನರು ಯಾವಾಗಲೂ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಪ್ರತಿಯೊಂದು ವಿಷಯದಲ್ಲೂ ತಮಗೇ ಸಂಪೂರ್ಣ ಜ್ಞಾನ ಇರುತ್ತದೆ ಅಂದುಕೊಳ್ಳುತ್ತಾರೆ. ತಾವು ಏನು ಹೇಳುತ್ತಾರೆ, ತಾವು ಏನು ಅಂದುಕೊಳ್ಳುತ್ತಾರೆ ಅದೇ ಸತ್ಯ ಎಂದು ಭಾವಿಸುತ್ತಾರೆ. ತಮ್ಮನ್ನು ತಾವೇ ಸರ್ವಜ್ಞ ಎಂದು ಪರಿಗಣಿಸಿಕೊಳ್ಳುತ್ತಾರೆ. ಜ್ಯೋತಿಷ್ಯದ ಪ್ರಕಾರ, ಅಂತಹ ಅಭ್ಯಾಸವು 4 ರಾಶಿಚಕ್ರಗಳವರಿಗೆ (Zodiac Signs) ಇರುತ್ತದೆಯಂತೆ.  ತಮ್ಮನ್ನು ತಾವು ಅತ್ಯುತ್ತಮವೆಂದು ಪರಿಗಣಿಸುವ ಈ ಅಭ್ಯಾಸದಿಂದಾಗಿ, ಅವರು ಕೆಲವೊಮ್ಮೆ ಭಾರೀ ನಷ್ಟವನ್ನು ಕೂಡಾ ಅನುಭವಿಸಬೇಕಾಗುತ್ತದೆ. 

ಈ ರಾಶಿಚಕ್ರ ಚಿಹ್ನೆಗಳ ಜನರು ತಮ್ಮನ್ನು ತಾವೇ ಅತ್ಯುತ್ತಮರೆಂದು ಪರಿಗಣಿಸುತ್ತಾರೆ. 
ಸಿಂಹ (Leo): ಈ ರಾಶಿಯ ಜನರು ಹುಟ್ಟಿನಿಂದಲೇ ತಮ್ಮನ್ನು ತಾವು ಚೆನ್ನಾಗಿ ಅರ್ಥಮಾಡಿಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವರು ಯಾವಾಗಲೂ ತಮ್ಮನ್ನು ತಾವು ಎಲ್ಲಾ ರೀತಿಯಲ್ಲೂ. ಇತರರಿಗಿಂತ ಉತ್ತಮರು ಅಂದುಕೊಳ್ಳುತ್ತಾರೆ. ಯಾವಾಗಲೂ ತಮ್ಮ ಮಾತೇ  ಸರಿ ಎನ್ನುವ ಭಾವನೆ ಇವರಲ್ಲಿರುತ್ತದೆ. ಇತರರ ಅಭಿಪ್ರಾಯಕ್ಕೆ ಪ್ರಾಮುಖ್ಯತೆ ನೀಡುವುದೇ ಇಲ್ಲ. 

ಇದನ್ನೂ ಓದಿ : Astrology: ಈ 3 ರಾಶಿಗಳ 'ಅಚ್ಚೆ ದಿನ್' ಆರಂಭ, ಶನಿ ಪ್ರಕೊಪದಿಂದ ಯಾರಿಗೆ ಮುಕ್ತಿ ತಿಳಿಯೋಣ ಬನ್ನಿ

ಕನ್ಯಾ: ಕನ್ಯಾ ರಾಶಿಯ (Virgo)ಜನರು ತುಂಬಾ ಪರಿಪೂರ್ಣತಾವಾದಿಗಳಾಗಿದ್ದು, ಅವರು ಇತರರ ಕೆಲಸದಲ್ಲಿ ಕೆಲವು ತಪ್ಪುಗಳನ್ನು ಹುಡುಕುತ್ತಿರುತ್ತಾರೆ. ಇತರರಲ್ಲಿ ತಪ್ಪು ಹುಡುಕುತ್ತಾ, ತಾವು ಮಾತ್ರ ಎಲ್ಲಾ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಲು ಸಾಧ್ಯ ಎಂಬ ಭಾವನೆ ಹೊಂದಿರುತ್ತಾರೆ. ತಮಗಿಂತ ಉತ್ತಮರು ಯಾರೂ ಇಲ್ಲ ಎಂಬ ಭಾವನೆ ಇವರಲ್ಲಿರುತ್ತದೆ. 

ಧನು ರಾಶಿ : ಧನು ರಾಶಿಯ (Sagittarius) ಜನರು ವಿನಮ್ರ ಸ್ವಭಾವದವರು. ತೋರಿಕೆ ಇವರಿಗೆ ಇಷ್ಟವಿರುವುದಿಲ್ಲ. ಈ ರಾಶಿಯವರು (Zodiac sign) ಅತ್ಯಂತ ಪ್ರತಿಭಾವಂತರಾಗಿರುತ್ತಾರೆ. ಅವರ ಮನಸ್ಸಿನಲ್ಲಿ, ಅವರು ಯಾವಾಗಲೂ ತಮ್ಮನ್ನು ತಾವು ಇತರರಿಗಿಂತ ಉತ್ತಮರೆಂದು ಪರಿಗಣಿಸುತ್ತಾರೆ. 

ಇದನ್ನೂ ಓದಿ : Budh Rashi Parivartan: ಬುಧ-ಶುಕ್ರರ ಸಂಯೋಜನೆ; ಈ ರಾಶಿಯ ಜನರಿಗೆ ಅದೃಷ್ಟವೋ ಅದೃಷ್ಟ

ಮೀನ (Pisces): ಈ ರಾಶಿಚಕ್ರದ ಜನರು ಇತರರಿಗಿಂತ ತುಂಬಾ ಭಿನ್ನರು ಮತ್ತು ಅವರು ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ. ಈ ಕಾರಣದಿಂದಾಗಿ, ಅವರು ತಮ್ಮನ್ನು ಅತ್ಯುತ್ತಮವೆಂದು ಪರಿಗಣಿಸುತ್ತಾರೆ. 
 

(ಸೂಚನೆ -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News