ಸಾಲ ತೆಗೆದುಕೊಳ್ಳುವಾಗ ಖುಷಿ ಕೊಡುತ್ತದೆ. ಆದರೆ, ವಾಪಸ್ ತೀರಿಸುವಾಗ ನಾವು ಎಷ್ಟು ಖುಷಿ ಪಟ್ಟಿರುತ್ತೇವೋ ಅದಕ್ಕಿಂತ ಹತ್ತು ಪಟ್ಟು ನೋವು ಪಡುತ್ತೀವಿ.
ಹಾಗಿದ್ರೆ ಯಾವುದು ಸರಿ ಎಂದು ಯೋಚಿಸುತ್ತಿದ್ದೀರಾ? ಅದಕ್ಕೂ ಮುನ್ನ ಸಾಲವನ್ನು ಕೊಳ್ಳುವ ಯಾವ ರಾಶಿಯವರಿಗೆ ತೀರಿಸಲು ಕಷ್ಟವಾಗುತ್ತದೆ? ಯಾವ ರಾಶಿಚಿಹ್ನೆಯವರು ಸಾಲದ ಸಹವಾಸಕ್ಕೇ ಹೋಗಬಾರದು ಎನ್ನುವ ಕುರಿತು ತಿಳಿದುಕೊಳ್ಳಿ. ಸಾಲದ ಸುಳಿಯಲ್ಲಿ ಸಿಕ್ಕು ನರಳುವ ಆ ಮೂರು ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.
ಸಾಲವನ್ನು ತಪ್ಪಾಗಿ ಸಹ ತೆಗೆದುಕೊಳ್ಳಬೇಡಿ: ನಾಳೆ ಎಂಬುದರಲ್ಲಿ ಏನೂ ಬದಲಾವಣೆ ಇರುವುದಿಲ್ಲ ಎಂದು ಕೆಲವರು ಮೊದಲೇ ಅಂದುಕೊಂಡಿರುತ್ತಾರೆ. ಲಕ್ಷಾಂತರ ರೂಪಾಯಿ ಹಣವನ್ನು ಗಳಿಸಿದ ನಂತರವೂ ಜನರು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ ಮತ್ತು ಯಾವಾಗಲೂ ಸಾಲದಲ್ಲಿರುತ್ತಾರೆ. ಈ ವಿಷಯ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ, ಆದರೂ ನಿಜ. ರಾಶಿ ಚಕ್ರದ ಮೂರು ರಾಶಿಗಳು ಯಾವಾಗಲೂ ಸಾಲದಲ್ಲಿರುತ್ತಾರೆ. ಅಂತಹ ಮೂರು ರಾಶಿಯವರು ಯಾವಾಗಲೂ ಸಾಲ ಮಾಡಬಾರದು ಎಂದು ಹೇಳಲಾಗುತ್ತದೆ. ಕಾರಣ ಅವರಿಗೆ ಎಂದಿಗೂ ಅದನ್ನು ವಾಪಸ್ ಕೊಡಲಾಗುವುದಿಲ್ಲ.
ಮೇಷ ರಾಶಿ: ಲಕ್ಷ ಲಕ್ಷ ಹಣ ದುಡಿದರೂ ಉಳಿತಾಯ ಮಾತ್ರ ಇಲ್ಲ, ಸಾಮಾನ್ಯವಾಗಿ 'ಮೇಷ ರಾಶಿ'ಯ ಜನರಿಗೆ ಲಕ್ಷಾಂತರ ರೂಪಾಯಿ ದುಡಿದರು ಅವರಿಗೆ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಅವರ ಆದಾಯದ ಮೂಲಗಳು ಉತ್ತಮವಾಗಿರುತ್ತವೆ, ಆದರೆ ಅವರ ವೆಚ್ಚಗಳು ಅಷ್ಟೇ ದುಬಾರಿಯಾಗಿರುತ್ತವೆ. ಆದ್ದರಿಂದ, ಅವರ ಉಳಿತಾಯ ಶೂನ್ಯವಾಗಿರುತ್ತದೆ.
ತುಲಾ ರಾಶಿ: ಮೇಷ ರಾಶಿಯ ಹೊರತಾಗಿ,ತುಲಾ ರಾಶಿಯವರಿಗೂ ಹಣದ ಕೊರತೆಯಿರುತ್ತದೆ. ಅವರಿಗೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಅಭ್ಯಾಸವಿರುತ್ತದೆ. ಈ ರಾಶಿಯ ಜನರು - ಮನೆಯಲ್ಲಿ ನಿಕಟ ಸಂಬಂಧಿಗಳಿಗಾಗಿ ಪಾರ್ಟಿ ಮಾಡಿ ಅನಗತ್ಯವಾಗಿ ಹಣ ಖರ್ಚು ಮಾಡುತ್ತಾರೆ. ಅಥವಾ ಅವರು ಉಡುಗೊರೆಗಳಿಗಾಗಿ ಶಾಪಿಂಗ್ ಮಾಡುವುದಕ್ಕೆ ಹಣವನ್ನು ಹೆಚ್ಚು ಖರ್ಚು ಮಾಡುತ್ತಾರೆ. ಈ ಕಾರಣದಿಂದಾಗಿ, ಅವರು ಆರ್ಥಿಕ ವಿಷಯಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಕುಂಭರಾಶಿ: ಹಣದ ವಿಷಯದಲ್ಲಿ, ಕುಂಭರಾಶಿಯವರು ತುಂಬಾ ತೊಂದರೆಗೊಳಗಾಗುತ್ತಾರೆ. ಈ ಸಮಸ್ಯೆಯನ್ನು ತೊಡೆದುಹಾಕಲು ಅವರು ಕೈ ಹಾಕುವ ದೈನಂದಿನ ಉದ್ಯೋಗಗಳು ಸಹ ಕೈ ಕೊಡುತ್ತವೆ. ಇದರಿಂದಾಗಿ ಅವರು ಲಾಭಕ್ಕಿಂತ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಅದಕ್ಕಾಗಿಯೇ ಈ ರಾಶಿಯ ಜನರು ಸಾಲವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಒಮ್ಮೆ ಸಾಲ ತೆಗೆದುಕೊಂಡ ನಂತರ ಅವರಿಂದ ಮತ್ತೆ ಮರಳಿಸುವ ಸಾಮರ್ಥ್ಯ ಇಲ್ಲದೆಯೂ ಇರಬಹುದು.