ಅಡುಗೆ ಮನೆಯಲ್ಲಿ ಈ ವಸ್ತುಗಳು ಯಾವುದೇ ಕಾರಣಕ್ಕೂ ಖಾಲಿಯಾಗಬಾರದು ! ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ

 ಅಡುಗೆಮನೆಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅಡುಗೆಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ  ಅಶುಭ ಪರಿಣಾಮ ಬೀರುತ್ತದೆ.  

Written by - Ranjitha R K | Last Updated : Jan 19, 2023, 03:02 PM IST
  • ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಮಹತ್ವವಿದೆ.
  • ಅಡುಗೆ ಮನೆಯಲ್ಲಿನ ಕೆಲವು ವಸ್ತುಗಳು ಖಾಲಿಯಾಗಬಾರದು
  • ಜೀವನದ ಮೇಲೆ ಅಶುಭ ಪರಿಣಾಮ ಬೀರುತ್ತದೆ
ಅಡುಗೆ ಮನೆಯಲ್ಲಿ ಈ ವಸ್ತುಗಳು ಯಾವುದೇ ಕಾರಣಕ್ಕೂ ಖಾಲಿಯಾಗಬಾರದು ! ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ  title=

ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಮಹತ್ವವಿದೆ. ಈ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಮನೆಯಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಲಾದ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ನಾಶಮಾಡುತ್ತವೆ ಮತ್ತು ಧನಾತ್ಮಕ ಶಕ್ತಿಯು ಹರಡುತ್ತದೆ. ಅಡುಗೆಮನೆಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. 

ಅಡುಗೆ ಮನೆಯಲ್ಲಿನ ಕೆಲವು ವಸ್ತುಗಳು ಖಾಲಿಯಾದರೆ ಮನೆಯಲ್ಲಿ ಋಣಾತ್ಮಕ ಶಕ್ತಿಯ ಸಂಚಾರ ಹೆಚ್ಚುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ವಾಸ್ತುವಿನ ಈ ನಿಯಮಗಳನ್ನು ಅಳವಡಿಸಿಕೊಂಡರೆ, ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ. ಹೀಗಾದಾಗ ಆಶೀರ್ವಾದದ ಮಳೆಯನ್ನೇ ಹರಿಸುತ್ತಾಳೆ. ಲಕ್ಷ್ಮೀ ದೇವಿಯ ಆಶೀರ್ವಾದವಿದ್ದರೆ ಎಲ್ಲಾ ದಿಕ್ಕಿನಿಂದಲೂ ಹಣ ಹರಿದು ಬರುತ್ತದೆ. ಆದರೆ ಅಡುಗೆಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ  ಅಶುಭ ಪರಿಣಾಮ ಬೀರುತ್ತದೆ. 

ಇದನ್ನೂ ಓದಿ : ಧನ-ವ್ಯಾಪಾರದ ಕಾರಕ ಬುಧನ ನೇರನಡೆ ಆರಂಭ, ಏಪ್ರಿಲ್ 20ರವರೆಗೆ ಈ ರಾಶಿಗಳ ಜನರಿಗೆ ಬಂಪರ್ ಲಾಭ

ಉಪ್ಪು :
ಮನೆಯಲ್ಲಿ ಉಪ್ಪು ಮುಗಿಯುವ ಮೊದಲೇ ಉಪ್ಪನ್ನು ಖರೀದಿಸಿ ತಂದಿಡಿ. ವಾಸ್ತುವಿನ ಪ್ರಕಾರ ಅಡುಗೆಮನೆಯಲ್ಲಿ ಉಪ್ಪು ಖಾಲಿಯಾಗುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾದರೆ ನಕಾರಾತ್ಮಕ ಶಕ್ತಿಯ ಸಂವಹನ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ವಾಸ್ತು  ಉಂಟಾದರೆ ಲಕ್ಷ್ಮೀ ದೇವಿ ಹೊರಟು ಹೋಗುತ್ತಾಳೆ. 

ಅರಿಶಿನ :
ಹಿಂದೂ ಧರ್ಮದಲ್ಲಿ ಅರಿಶಿನಕ್ಕೆ ವಿಶೇಷ ಮಹತ್ವವಿದೆ. ಅರಿಶಿನವನ್ನು ಮಂಗಳಕರ ಮತ್ತು ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅರಿಶಿನದ ಬಗ್ಗೆ ವಾಸ್ತು ಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ. ಅಡುಗೆಮನೆಯಲ್ಲಿ ಅರಿಶಿನ ಕೂಡಾ ಖಾಲಿಯಾಗಬಾರದು. ಅರಿಶಿನ ಖಾಲಿಯಾದರೆ ಗುರುದೋಷ ಎದುರಾಗುತ್ತದೆ ಎನ್ನಲಾಗುತ್ತದೆ. ವಿಷ್ಣುವಿಗೆ ಹಳದಿ ಬಣ್ಣ ಮತ್ತು ಅರಿಶಿನ ಎಂದರೆ ತುಂಬಾ ಪ್ರಿಯ. ಈ ಕಾರಣದಿಂದಾಗಿ ಅಡುಗೆಮನೆಯಲ್ಲಿ ಅರಿಶಿನವನ್ನು ಖಾಲಿಯಾಗುವ, ಮೊದಲೇ ತಂದು ಇರಿಸಿಕೊಳ್ಳುವುದು ಮುಖ್ಯ. 

ಇದನ್ನೂ ಓದಿ : ವರ್ಷದ ಮೊದಲ ಶನಿಚರಿ ಅಮಾವಾಸ್ಯೆಯ ದಿನ 5 ರಾಶಿಗಳ ಜನರ ಮೇಲೆ ಶನಿಯ ವಕ್ರ ದೃಷ್ಟಿ, ಈ ಉಪಾಯ ಮಾಡಿ

ಅಕ್ಕಿ :
ಹಿಂದೂ ಧರ್ಮದಲ್ಲಿ ಅಕ್ಕಿಯನ್ನು ಪೂಜೆ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಅಕ್ಕಿ ಕೂಡಾ ಸಂಪೂರ್ಣವಾಗಿ ಖಾಲಿಯಾಗಲು ಬಿಡಬಾರದು. ಮನೆಯಲ್ಲಿ ಅಕ್ಕಿ ಖಾಲಿಯಾದರೆ ಶುಕ್ರ ದೋಷ ಎದುರಾಗುತ್ತದೆ.   

ಎಣ್ಣೆ :
ಎಣ್ಣೆಯನ್ನು ಎಲ್ಲಾ ಮನೆಗಳಲ್ಲಿ ಬಳಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ ಅಡುಗೆಮನೆಯಲ್ಲಿ ಎಣ್ಣೆ ಖಾಲಿಯಾಗಲು ಬಿಡಬಾರದು. ಎಣ್ಣೆ ಶನಿ ದೇವರಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಅಡುಗೆ ಮನೆಯಲ್ಲಿ ಎಣ್ಣೆ  ಖಾಲಿಯಾದರೆ ಶನಿದೇವನ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News