ಈ ಮೂರು ರೀತಿಯ ಹಾಲು ಕುಡಿಯುವ ಮೂಲಕ ಡಯಾಬಿಟೀಸ್ ನಿಯಂತ್ರಣದಲ್ಲಿಡಬಹುದು, ಸೇವನೆ ಸಮಯ ಹೀಗಿರಲಿ

Milk Drinks For Diabetes Patients: ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ಆದ್ದರಿಂದ ಅವರು 3 ರೀತಿಯ ಹಾಲು ಪಾನೀಯಗಳನ್ನು ಕುಡಿಯಬೇಕು.

Written by - Ranjitha R K | Last Updated : Mar 10, 2022, 10:18 AM IST
  • ಮಧುಮೇಹ ರೋಗಿಗಳು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ
  • 3 ವಿಧದ ಹಾಲು ಪಾನೀಯಗಳನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು
  • ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ
ಈ ಮೂರು ರೀತಿಯ ಹಾಲು ಕುಡಿಯುವ ಮೂಲಕ ಡಯಾಬಿಟೀಸ್ ನಿಯಂತ್ರಣದಲ್ಲಿಡಬಹುದು, ಸೇವನೆ ಸಮಯ ಹೀಗಿರಲಿ   title=
ಮಧುಮೇಹ ರೋಗಿಗಳು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ (file photo)

ನವದೆಹಲಿ : ಭಾರತದಲ್ಲಿ ಮಧುಮೇಹದ (Diabetes)ಕಾಯಿಲೆ ಸಾಮಾನ್ಯವಾಗಿದೆ. ದೇಶದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಧುಮೇಹ ರೋಗಿಗಳು ತಾವು ಸೇವಿಸುವ ಆಹಾರ ಪದ್ದತಿಯ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಳ್ಳಬೇಕಾಗುತ್ತದೆ.  ಈ ಕಾಯಿಲೆಯಿದ್ದವರು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿರಿಸುವ ಆಹಾರವನ್ನು  ಹೆಚ್ಚು ಸೇವಿಸಬೇಕು (Blood Sugar Level). ಈ ಪರಿಸ್ಥಿತಿಯಲ್ಲಿ, ಹಾಲಿನ ಸೇವನೆಯು ಈ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಮಧುಮೇಹ ರೋಗಿಗಳು ಯಾವ ಸಮಯದಲ್ಲಿ ಹಾಲು  (Milk) ಸೇವಿಸಬೇಕು ಎನ್ನುವುದು ಪ್ರಶ್ನೆ.  

ಮಧುಮೇಹ ರೋಗಿಗಳು ಯಾವಾಗ ಹಾಲು ಕುಡಿಯಬೇಕು?
ಆರೋಗ್ಯ ತಜ್ಞರ ಪ್ರಕಾರ, ಬೆಳಗಿನ ಉಪಾಹಾರದಲ್ಲಿ ಹಾಲು ಸೇವನೆಯು ಟೈಪ್ 2 ಮಧುಮೇಹ (Type 2 diabetes) ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಲು ಸೇವಿಸಿದಾಗ  ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯು ಕಡಿಮೆಯಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ (Blood Sugar level)ಕಡಿಮೆಯಾಗಲು ಸಹಾಯವಾಗುತ್ತದೆ.  ಹಾಗಿದ್ದರೆ ಮಧುಮೇಹ ರೋಗಿಗಳು ಯಾವ ರೀತಿಯ ಹಾಲಿನ ಪಾನೀಯಗಳನ್ನು ಸೇವಿಸಬೇಕು ?

ಇದನ್ನೂ ಓದಿ : Weight Loss Tips : ನೀವು ತೂಕ ಇಳಿಸಿಕೊಳ್ಳಬೇಕೆ? ಹಾಗಿದ್ರೆ, ಹೀಗೆ ಪ್ರತಿ ದಿನ ನೀರು ಕುಡಿಯಿರಿ!

ಮಧುಮೇಹಕ್ಕೆ ಹಾಲಿನ ಪಾನೀಯಗಳು :
1. ಅರಿಶಿನ ಹಾಲು
ಅರಿಶಿನ ಹಾಲು (Turmeric milk) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅರಿಶಿನವು ಆಂಟಿ ಇಂಫ್ಲಮೆಟರಿ  ಮತ್ತು ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ, ಇದು ಟೈಪ್ 2 ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದನ್ನು ಕುಡಿಯುವುದರಿಂದ, ಇನ್ಸುಲಿನ್ ಮಟ್ಟವು ಸಮತೋಲನದಲ್ಲಿರುತ್ತದೆ. 


 
2. ದಾಲ್ಚಿನ್ನಿ ಹಾಲು :
ದಾಲ್ಚಿನ್ನಿ ಹಾಲು ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಇದರಲ್ಲಿ ಆಂಟಿ ಇಂಫ್ಲಮೆಟರಿ  ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (blood sigara level)ನಿಯಂತ್ರಿಸಲು ಸಹಾಯ ಮಾಡುತ್ತದೆ. 


 
ಇದನ್ನೂ ಓದಿ : Lips Beauty Tips: ತುಟಿಗಳ ಅಂದ ಹೆಚ್ಚಿಸಲು ಮನೆಯಲ್ಲೇ ಇದೆ ಮದ್ದು

3. ಬಾದಾಮಿ ಹಾಲು :
ಬಾದಾಮಿ ಹಾಲು (badam milk) ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ವಿಟಮಿನ್ ಡಿ, ವಿಟಮಿನ್ ಇ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಪ್ರೋಟೀನ್ ಮತ್ತು ಫೈಬರ್‌ನಲ್ಲಿಯೂ ಸಮೃದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News