GF BF Relationship Tips: ಯಾವುದೇ ಸಂಬಂಧದಿಂದ ಹೊರಬರುವುದು ತುಂಬಾ ಕಷ್ಟದ ಸಂಗತಿಯಾಗಿರುತ್ತದೆ. ಹೀಗಾಗಿ ಬ್ರೇಕ್ ಅಪ್ ಬಗ್ಗೆ ಯೋಚಿಸಲಾಗುವುದಿಲ್ಲ, ಆದರೆ ನಿಮ್ಮ ಸಂಗಾತಿ ನಿರಂತರವಾಗಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದರೆ, ನಿಮ್ಮ ಸಂಬಂಧದ ಬಗ್ಗೆ ನೀವು ಗಂಭೀರವಾಗಿರಬೇಕು, ಆದರೂ ಬ್ರೇಕ್ ಅಪ್ ಪ್ರತಿಯೊಂದು ಸಮಸ್ಯೆಗೆ ಪರಿಹಾರವಲ್ಲ, ಆದರೆ ಅನೇಕ ಬಾರಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಕಾಳಜಿ ವಹಿಸದೇ ಇದ್ದಾಗ ಮತ್ತು ಪದೇ ಪದೇ ನಿಮಗೆ ಸುಳ್ಳು ಹೇಳುತ್ತಿದ್ದರೆ, ಕರೆಗಳು ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದಾದಲ್ಲಿ ಮತ್ತು ಇದ್ದಕ್ಕಿದ್ದಂತೆ X ಬಗ್ಗೆ ಮಾತನಾಡಲು ಆರಂಭಿಸಿದರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಸಂಬಂಧದ ಬಗ್ಗೆ ನೀವು ಗಂಭೀರವಾಗಿ ಯೋಚಿಸಲು ಪ್ರಾರಂಭಿಸಬೇಕು. ನಿಮ್ಮ ಸಂಗಾತಿ ಕೂಡ ಇಂತಹ ತಪ್ಪುಗಳನ್ನು ಮಾಡುತ್ತಿದ್ದಾರೆಯೇ?
ಪದೇ ಪದೇ ಸುಳ್ಳು ಹೇಳುವುದು
ಅಂದಹಾಗೆ, ಯಾವುದೇ ಸಂಬಂಧದಲ್ಲಿ ಸುಳ್ಳನ್ನು ಹೇಳಬಾರದು ಏಕೆಂದರೆ ಕೆಲವೊಮ್ಮೆ ಸುಳ್ಳು ಎಲ್ಲರ ಮುಂದೆ ಬಹಿರಂಗಗೊಳ್ಳುತ್ತದೆ ಮತ್ತು ಆ ಸಮಯದಲ್ಲಿ ಎಲ್ಲರ ಮುಂದೆ ನಿಮ್ಮ ಇಮೇಜ್ ಹಾಳಾಗುತ್ತದೆ. ಅದೇ ರೀತಿ, ನೀವು ನಿಮ್ಮ ಸಂಗಾತಿಯೊಂದಿಗೆ ಎಂದಿಗೂ ಸುಳ್ಳು ಹೇಳಬಾರದು ಏಕೆಂದರೆ ನಿಮ್ಮ ಸಣ್ಣ ಸುಳ್ಳು ನಿಮ್ಮ ಸಂಗಾತಿ ಭಾವನೆಗೆ ಅಪಾರ ಹಾನಿ ತಲುಪಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿ ಪದೇ ಪದೇ ಸುಳ್ಳು ಹೇಳುತ್ತಿದ್ದರೆ, ನಿಮ್ಮ ಸಂಬಂಧದ ಬಗ್ಗೆ ನೀವು ಯೋಚಿಸಬೇಕು.
ಇದನ್ನೂ ಓದಿ-Health Care Tips: ಆಹ್ಲಾದಕರ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡುತ್ತವೆ ಈ ಕಾಯಿಲೆಗಳು.. ಎಚ್ಚರ!
ಸಂದೇಶ-ಕರೆಗೆ ಉತ್ತರಿಸುತ್ತಿಲ್ಲ
ಕೆಲವೊಂದು ಸಂದರ್ಭಗಳಲ್ಲಿ ಸಂದೇಶಗಳು ಮತ್ತು ಕರೆಗಳಿಗೆ ಉತ್ತರಿಸಲಾಗುವುದಿಲ್ಲ. ಏಕೆಂದರೆ ಯಾರುಬೇಕಾದರೂ ಎಲ್ಲಿಯಾದರೂ ಕಾರ್ಯನಿರತರಾಗಿರಬಹುದು, ಆದರೆ ಈ ಸಮಸ್ಯೆ ನಿಮಗೆ ಮತ್ತೆ ಮತ್ತೆ ಸಂಭವಿಸುತ್ತಿದ್ದರೆ, ಅದರ ಹಿಂದಿನ ಕಾರಣವನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ಸಂಗಾತಿಯ ದೈನಂದಿನ ದಿನಚರಿಯನ್ನು ನೀವು ತಿಳಿದಿರಬೇಕು. ಇಂತಹ ಪರಿಸ್ಥಿತಿಯಲ್ಲಿ, ಅವನು ಬಿಡುವಿನ ವೇಳೆಯಲ್ಲಿ ನಿಮ್ಮೊಂದಿಗೆ ಮಾತನಾಡದಿದ್ದರೆ, ನಿಮ್ಮ ಸಂಬಂಧದ ಬಗ್ಗೆ ನೀವು ಗಂಭೀರವಾಗಿರಬೇಕು.
ಇದನ್ನೂ ಓದಿ-Baba Vanga Prediction: ಮುಂದಿನ ವರ್ಷ ಭೂಮಿಯ ಮೇಲೆ ಭಾರಿ ಹಾಹಾಕಾರ! 2023ರ ಬಾಬಾ ವಂಗಾ ಭವಿಷ್ಯವಾಣಿ ಇಲ್ಲಿದೆ
ಯಾವಾಗಲು ಎಕ್ಸ್ ಕುರಿತು ಮಾತನಾಡುತ್ತಿದ್ದರೆ ಎಚ್ಚೆತ್ತುಕೊಳ್ಳಿ
ಒಂದು ವೇಳೆ ನಿಮ್ಮ ಸಂಗಾತಿ ಪದೇ ಪದೇ ತನ್ನ ಹಳೆ ಗೆಳೆಯ/ಗೆಳತಿ ಅಂದರೆ ಎಕ್ಸ್ ಅನ್ನು ನೆನಪಿಸಿಕೊಳ್ಳುತ್ತಿದ್ದರೆ, ಬಹುಶಃ ಆ X ಗೆ ಸಂಬಂಧಿಸಿದಂತೆ ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಏನಾದರೂ ನಡೆಯುತ್ತಿದೆ ಎಂದರ್ಥ. ಇಂತಹ ಪರಿಸ್ಥಿತಿಯಲ್ಲಿ, ನೀವು ಅಂತಹ ವಿಷಯಗಳನ್ನು ಇಷ್ಟಪಡುವುದಿಲ್ಲ ಎಂದು ಆತನಿಗೆ/ಆಕೆಗೆ ತಿಳಿಯಪಡಿಸಬೇಕು. ಆಗಲೂ ಕೂಡ ಅವನು ನಿಮ್ಮೊಂದಿಗೆ ಅದೇ ವಿಷಯದ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ, ಖಂಡಿತವಾಗಿಯೂ ನಿಮ್ಮ ಸಂಗಾತಿಯು ತನ್ನ ಮಾಜಿ ವ್ಯಕ್ತಿಯನ್ನು ಮರೆತಿಲ್ಲ ಎಂದರ್ಥ ಮತ್ತು ನೀವು ನಿಮ್ಮ ಸಂಬಂಧದ ಬಗ್ಗೆ ಗಂಭೀರವಾಗಿ ಯೋಚಿಸಬೇಕು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.