ಯುವತಿಯರ ʼಈ ರಹಸ್ಯ ಸ್ಥಳʼಗಳಲ್ಲಿ ʼಮಚ್ಚೆʼ ಇದ್ರೆ ಆಕೆಯ ಗಂಡನಿಗೆ ಶುಭ..!

Moles and astrology : ನಾಲಿಗೆ ಮೇಲೆ ಮಚ್ಚೆಗಳಿದ್ದವರು ಏನಾದ್ರೂ ಹೇಳಿದ್ರೆ ನಿಜ ಆಗುತ್ತೆ ಅಂತ ಹಿರಿಯರು ಹೇಳಿದ್ದನ್ನು ನೀವು ಆಗಾಗ ಕೇಳಿರುತ್ತೀರಿ. ಹೌದು.. ಇದು ನಿಜ ಮಚ್ಚೆಗಳಿದ್ದರೆ ಒಳ್ಳೆಯದು ಅಂತ ಹೇಳುತ್ತಾರೆ. ಈ ಪೈಕಿ ಹೆಚ್ಚಾಗಿ ಹೆಣ್ಣುಮಕ್ಕಳಿಗೆ ಕಪ್ಪು ಮಚ್ಚೆ ಇದ್ರೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಅಂತಹ ಹುಡುಗಿಯರು ಜೀವನದಲ್ಲಿ ಸುಖವಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಅದ್ರೆ ಇದು ಎಲ್ಲ ತರಹದ ಮಚ್ಚೆಗಳಿಗೆ ಅನ್ವಹಿಸುವುದಿಲ್ಲ.

Written by - Krishna N K | Last Updated : May 5, 2023, 07:51 PM IST
  • ಯುವತಿಯರ ಮೈಮೇಲೆ ಇರುವ ಮಚ್ಚೆಗಳು ಮಂಗಳಕರ.
  • ಎಲ್ಲಾ ಮಚ್ಚೆಗಳು ಶುಭಕರವೆಂದು ಹೇಳಲಾಗದರು.
  • ಈ ಕೆಳಗೆ ನೀಡಿರುವ ಮಚ್ಚೆಗಳಿರುವ ಯುವತಿರು ತುಂಬಾ ಅದೃಷ್ಟವಂತರು.
ಯುವತಿಯರ ʼಈ ರಹಸ್ಯ ಸ್ಥಳʼಗಳಲ್ಲಿ ʼಮಚ್ಚೆʼ ಇದ್ರೆ ಆಕೆಯ ಗಂಡನಿಗೆ ಶುಭ..! title=

Moles and Astrology : ಸುಂದರವಾಗಿರುವ ಹುಡುಗಿಯರಿಗೆ ಕೆನ್ನೆ ಮೇಲೆ ಮಚ್ಚೆ ಇದ್ರೆ, ಎಷ್ಟು ಕ್ಯೂಟ್‌ ಆಗಿ ಕಾಣುತ್ತಾರೆ ಅಲ್ವಾ. ಅದೇ ತರ ಅವರ ಮಚ್ಚೆಗಳು ಸಹ ಕೆಲವೊಂದಿಷ್ಟು ಸರಿ ಅದೃಷ್ಟದ ಸಂಕೇತವಾಗಿರುತ್ತವೆ. ಹೌದು.. ಮಚ್ಚೆಗಳು ಹುಡುಗಿಯರ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಅವರನ್ನು ಮದುವೆಯಾಗುವ ವ್ಯಕ್ತಿಯ ಹಣೆಬರಹವನ್ನೇ ಬದಲಾಯಿಸಿ ಬಿಡುತ್ತದೆ. ಹಾಗಿದ್ರೆ, ಮಚ್ಚೆಗಳ ಪ್ರಾಮುಖ್ಯತೆಗಳ ಬಗ್ಗೆ ತಿಳಿಯೋಣ ಬನ್ನಿ.

ಬೆರಳಿನ ಮೇಲೆ ಕಪ್ಪು ಮಚ್ಚೆ : ಹೆಣ್ಣುಮಕ್ಕಳ ತೋರುಬೆರಳಿನ ಮೇಲೆ ಕಪ್ಪು ಮಚ್ಚೆ ಇದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ಹುಡುಗಿಯರು ಜೀವನದಲ್ಲಿ ಎಂದಿಗೂ ದುಃಖಿತರಾಗುವುದಿಲ್ಲವಂತೆ. ಅಲ್ಲದೆ, ಶ್ರೀಮಂತಿಕೆ ಹೊಂದುತ್ತಾರೆ ಎಂದು ಹೇಳಲಾಗುತ್ತದೆ.

ಭುಜದ ಮೇಲೆ ಮಚ್ಚೆ : ಭುಜದ ಮೇಲೆ ಮಚ್ಚೆ ಹೊಂದಿರುವ ಹುಡುಗಿಯರು ಉತ್ತಮ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅಲ್ಲದೆ, ಅವರಿಗೆ ಸಮಾಜದಲ್ಲಿ ಅಪಾರ ಗೌರವ ಸಿಗುತ್ತದೆ.

ಇದನ್ನೂ ಓದಿ: ನಿಮ್ಮ ಕಿವಿಯ ಮೇಲೆ ಕೂದಲು ಇವೆಯೇ...? ಹಾಗಿದ್ರೆ ನಿವು ಅತ್ಯಂತ ಪ್ರಭಾವಶಾಲಿಗಳು.. ಹೇಗೆ ಗೊತ್ತಾ..!

ಹೊಟ್ಟೆಯ ಮೇಲೆ ಮಚ್ಚೆ : ಹೆಣ್ಣುಮಕ್ಕಳ ಹೊಟ್ಟೆಯ ಮೇಲೆ ಚಿಕ್ಕ ಕಪ್ಪು ಮಚ್ಚೆ ಇದ್ದರೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಅಂತಹ ಹುಡುಗಿಯರು ಅದೃಷ್ಟವಂತರು. ಅವರು ಬಯಸಿದ್ದೆಲ್ಲಾ ಪಡೆಯುತ್ತಾರೆ.

ಬೆನ್ನಿನ ಮೇಲೆ ಮಚ್ಚೆ : ಹೆಣ್ಣುಮಕ್ಕಳ ಬೆನ್ನಿನ ಮೇಲೆ ಮಚ್ಚೆ ಇದ್ದರೆ ಗಂಡನಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ಹುಡುಗಿಯರು ಗಂಡನಿಗೆ ಅದೃಷ್ಟವನ್ನು ತರುತ್ತಾರೆ.

ಇದನ್ನೂ ಓದಿ: Chandra Grahan 2023 : ಇಂದು ರಾತ್ರಿ ಸಂಭವಿಸುವ ʼಚಂದ್ರ ಗ್ರಹಣʼದ ವೇಳೆ ಈ ʼಶಕ್ತಿ ಮಂತ್ರʼ ಜಪಿಸಿ..!

ಹಣೆಯ ಮೇಲೆ ಮಚ್ಚೆ : ಹಣೆಯ ಬಲಭಾಗದಲ್ಲಿರುವ ಮಚ್ಚೆ ಇರುವ ಹುಡುಗಿಯರು ಅದೃಷ್ಟವಂತರು. ಅಂತಹ ಯುವತಿಯರು ಮದುವೆಯಲ್ಲಿ ಸಂದರ್ಭದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸುವುದಿಲ್ಲ. ಬಯಸಿದ ವರನನ್ನು ಪಡೆಯುವುದರ ಜೊತೆಗೆ, ಸಮೃದ್ಧಿ ಜೀವನ ಹೊಂದುತ್ತಾರೆ.

ಕಂಕುಳಿನ ಕೆಳಗೆ ಮಚ್ಚೆ : ಹೆಣ್ಣುಮಕ್ಕಳು ತಮ್ಮ ಕಂಕುಳಿನ ಕೆಳಗೆ ಮಚ್ಚೆ ಹೊಂದಿದ್ದರೆ ಮಂಗಳಕರವೆಂದು ಹೇಳಲಾಗುತ್ತದೆ. ಈ ರೀತಿಯ ಮಚ್ಚೆ ಹೊಂದಿರುವ ಯುವತಿಯರಿಗೆ ಯಾವುದೇ ತೊಂದರೆಗಳು ಅಡ್ಡಿಯಾಗುವುದಿಲ್ಲ. ಇವರು ಬಹಳ ಅದೃಷ್ಟವಂತರು.

ಇದನ್ನೂ ಓದಿ:Chandra Grahan 2023: ಚಂದ್ರಗ್ರಹಣದ ವೇಳೆ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ!

ಹಣೆಯ ಮಧ್ಯದಲ್ಲಿ ಮಚ್ಚೆ : ಹೆಣ್ಣು ಮಕ್ಕಳಿಗೆ ಹುಬ್ಬಿನ ಮಧ್ಯದಲ್ಲಿ ಮಚ್ಚೆ ಇದ್ದರೆ ತುಂಬಾ ಶುಭ. ಇದು ಗಂಡನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಹುಡುಗಿಯರು ಗಂಡಂದಿರಿಗೆ ಅದೃಷ್ಟ ತರುತ್ತಾರೆ.

ತೊಡೆಯ ಮೇಲೆ ಮಚ್ಚೆ : ಹೆಣ್ಣುಮಕ್ಕಳ ತೊಡೆಯ ಮೇಲೆ ಮೆಚ್ಚೆ ಇದ್ದರೆ ಅದು ಉತ್ತಮ ಸಂಕೇತ. ಅಂತಹ ಹುಡುಗಿಯರ ಜೀವನದಲ್ಲಿ ಯಾವಾಗಲೂ ಸಂತೋಷ ತುಂಬಿರುತ್ತದೆ.

ಕಿವಿಯ ಮೇಲೆ ಮಚ್ಚೆ : ಹೆಣ್ಣುಮಕ್ಕಳ ಕಿವಿಯ ಮೇಲೆ ಮಚ್ಚೆ ಇರುವುದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ಹುಡುಗಿಯರು ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ. ಅಲ್ಲದೆ ಅವರು ತುಂಬಾ ಅದೃಷ್ಟವಂತರಾಗಿರುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News