ಬೆಂಗಳೂರು: ಮಂಗಳವಾರ ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು, ಶೇವಿಂಗ್ ಮಾಡುವುದು ಸೇರಿದಂತೆ ಮುಂತಾದ ಕೆಲಸಗಳನ್ನು ಮಾಡುವುದನ್ನು ನಿಷೇಧ ಎಂಬುದು ಹಲವರಿಗೆ ತಿಳಿದಿದೆ. ಆದರೆ ಈ ಕೆಲಸಗಳ ಹೊರತಾಗಿ ಮಂಗಳವಾರದಂದು (Tuesday) ಕೆಲವು ವಸ್ತುಗಳನ್ನು ಖರೀದಿಸುವುದನ್ನು ಕೂಡ ನಿಷೇಧಿಸಲಾಗಿದೆ. ಮಂಗಳವಾರದಂದು ಕೆಲವು ವಸ್ತುಗಳನ್ನು ಖರೀದಿಸುವುದರಿಂದ ಆರ್ಥಿಕ ನಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. ಮಂಗಳವಾರ ಹನುಮನಿಗೆ (Lord Hanuman) ಅರ್ಪಿತವಾದ್ದರಿಂದ, ಜ್ಯೋತಿಷ್ಯದ ಪ್ರಕಾರ, ಮಂಗಳವಾರ ಯಾವ ವಸ್ತುಗಳ ಖರೀದಿಯನ್ನು ನಿಷೇಧಿಸಲಾಗಿದೆ ಎಂಬುದನ್ನು ತಿಳಿಯಿರಿ.
ಮಂಗಳವಾರ ಈ ವಸ್ತುಗಳನ್ನು ಎಂದಿಗೂ ಖರೀದಿಸಬೇಡಿ:
* ಗಾಜಿನ ಪಾತ್ರೆಗಳು ಅಥವಾ ವಸ್ತುಗಳನ್ನು ಮಂಗಳವಾರ ಖರೀದಿಸಬಾರದು. ಜ್ಯೋತಿಷ್ಯದ ಪ್ರಕಾರ, ಮಂಗಳವಾರ ಗಾಜಿನ ಸಾಮಾನುಗಳನ್ನು ಖರೀದಿಸುವುದರಿಂದ ಆರ್ಥಿಕ ನಷ್ಟ (Money Loss)ವಾಗುತ್ತದೆ. ಸಾಧ್ಯವಾದರೆ, ಈ ದಿನ ಯಾರಿಗೂ ಗಾಜಿನ ವಸ್ತುಗಳನ್ನು ನೀಡದಿರುವುದೂ ಕೂಡ ಉತ್ತಮ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- TUESDAY REMEDIES: ಶನಿ ದೇವನನ್ನು ಮೆಚ್ಚಿಸಲು ಮಂಗಳವಾರ ಹನುಮನನ್ನು ಪೂಜಿಸಿ
* ಮಂಗಳವಾರ ಅನೇಕ ಕೆಲಸಗಳಿಗೆ ಬಹಳ ಶುಭವೆಂದು ಪರಿಗಣಿಸಲಾಗಿದೆ, ಆದರೆ ಈ ದಿನ ಭೂಮಿಯನ್ನು ಎಂದಿಗೂ ಖರೀದಿಸಬಾರದು. ಭೂ ಪೂಜೆಯ ವಿಷಯದಲ್ಲಿ ಮಂಗಳವಾರವೂ ಅಶುಭಕರವಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ, ಮನೆಯ ಸದಸ್ಯರು ಕಾಯಿಲೆಗೆ ಬಲಿಯಾಗಬಹುದು ಎಂದೂ ಕೂಡ ನಂಬಲಾಗಿದೆ.
* ಧಾರ್ಮಿಕ-ಪುರಾಣಗಳಲ್ಲಿ, ಹನುಮಾನ್ ಜಿ (Lord Hanuman) ಅವರ ಆಶೀರ್ವಾದ ಪಡೆಯಲು, ಮಂಗಳವಾರ ಸಿಂಧೂರವನ್ನು ಅರ್ಪಿಸಲು ಸಲಹೆ ನೀಡಲಾಗುತ್ತದೆ. ಆದ್ದರಿಂದ, ಈ ದಿನ ಯಾರೂ ಕೂಡ ತಮಗಾಗಿ ಯಾವುದೇ ಮೇಕ್ಅಪ್ ಸಂಬಂಧಿತ ವಸ್ತುಗಳನ್ನು ಖರೀದಿಸಬಾರದು. ಇಲ್ಲದಿದ್ದರೆ, ದಾಂಪತ್ಯ ಜೀವನದಲ್ಲಿ ಮತ್ತು ಹಣದ ವಿಷಯಗಳಲ್ಲಿ ತೊಂದರೆಗಳು ಉಂಟಾಗಬಹುದು ಎನ್ನಲಾಗುತ್ತದೆ.
ಇದನ್ನೂ ಓದಿ- Tuesday: ಮಂಗಳವಾರದಂದು ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
* ಹನುಮಂತನಿಗೆ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತದೆ. ಹನುಮಂತನಿಗೆ ಕಡಲೆ ಹಿಟ್ಟಿನಿಂದ ಮಾಡಿದ ಸಿಹಿತಿಂಡಿಗಳನ್ನು ನೀಡಲಾಗುತ್ತದೆ. ಆದ್ದರಿಂದ, ಮಂಗಳವಾರದಂದು ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಖರೀದಿಸಬಾರದು ಅಥವಾ ಮಂಗಳವಾರ ಯಾರಿಗೂ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಕೊಡಬಾರದು. ಇದರಿಂದ ಮನೆಯಲ್ಲಿ ಅಪಶ್ರುತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
* ಮಂಗಳವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು ಮತ್ತು ಖರೀದಿಸಲೂ ಬಾರದು. ಮಾತ್ರವಲ್ಲ ಕಬ್ಬಿಣವನ್ನು ಸಹ ಖರೀದಿಸಬಾರದು. ಈ ದಿನ ಕೆಂಪು ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.