Weight Loss Tips: ಚಳಿಗಾಲದಲ್ಲಿ ಈ ತರಕಾರಿಗಳು ತೂಕ ಕಳೆದುಕೊಳ್ಳಲು ನಿಮಗೆ ಸಹಕಾರಿ

ಮೂಲಂಗಿ, ಸಿಹಿ ಆಲೂಗಡ್ಡೆ, ಕ್ಯಾರೆಟ್, ಎಲೆ ತರಕಾರಿಗಳು ಸೇರಿದಂತೆ ಹಸಿರು ತರಕಾರಿಗಳು ನಿಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿ.

Written by - Puttaraj K Alur | Last Updated : Jan 19, 2022, 09:13 PM IST
  • ಚಳಿಗಾಲದಲ್ಲಿ ಹಸಿರು ತರಕಾರಿಗಳನ್ನು ಸೇವಿಸಿ ತೂಕವನ್ನು ಕಳೆದುಕೊಳ್ಳಿ
  • ಚಳಿಗಾಲದಲ್ಲಿ ಮೂಲಂಗಿ, ಕ್ಯಾರೆಟ್, ಸಿಹಿ ಆಲೂಗಡ್ಡೆ ಆರೋಗ್ಯಕ್ಕೆ ಉಪಯುಕ್ತ
  • ತೂಕವು ನಷ್ಟದ ಜೊತೆಗೆ ಉತ್ತಮ ಆರೋಗ್ಯಕ್ಕೆ ತಪ್ಪದೇ ಸೊಪ್ಪು & ಹಸಿರು ತರಕಾರಿ ಸೇವಿಸಿರಿ
Weight Loss Tips: ಚಳಿಗಾಲದಲ್ಲಿ ಈ ತರಕಾರಿಗಳು ತೂಕ ಕಳೆದುಕೊಳ್ಳಲು ನಿಮಗೆ ಸಹಕಾರಿ title=
ಫಿಟ್ ಮತ್ತು ಆರೋಗ್ಯವಾಗಿರಲು ಹಸಿರು ತರಕಾರಿ ಸೇವಿಸಿ

ನವದೆಹಲಿ: ತೂಕ ಇಳಿಸಿಕೊಳ್ಳಲು ಹಲವು ರೀತಿಯ ಸಲಹೆ(Weight Loss Tips)ಗಳನ್ನು ಪಾಲಿಸುವವರು ತಮ್ಮ ಆಹಾರ ಮತ್ತು ಪಾನೀಯದ ಬಗ್ಗೆಯೂ ಗಮನ ಹರಿಸಬೇಕು. ಆಗ ಮಾತ್ರ ಅವರು ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ನೀವು ಹಲವಾರು ಮಾರ್ಗಗಳನ್ನು ಅನುಸರಿಸುತ್ತೀರಿ, ಆದರೆ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಲು ಮರೆಯಬೇಡಿ. ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿದರೆ ಖಂಡಿತ ತೂಕನಷ್ಟಕ್ಕೆ ಸಹಾಯ ಮಾಡುತ್ತದೆ. ಹಸಿರು ತರಕಾರಿಗಳು ಚಳಿಗಾಲದಲ್ಲಿ ಸುಲಭವಾಗಿ ಲಭ್ಯವಿವೆ. ಮೂಲಂಗಿ, ಕ್ಯಾರೆಟ್, ಸಿಹಿ ಆಲೂಗಡ್ಡೆಯನ್ನು ಚಳಿಗಾಲದಲ್ಲಿ ಆರೋಗ್ಯಕ್ಕೆ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಹಸಿರು ಮೂಲಂಗಿ/ಬೇರು ತರಕಾರಿ ತೂಕ ನಷ್ಟ(Weight Loss)ಕ್ಕೆ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಹಸಿರು ಅಥವಾ ಬೇರು ತರಕಾರಿ (Radish Green / Root Vegetable)

ಮೂಲಂಗಿ, ಸಿಹಿ ಆಲೂಗಡ್ಡೆ, ಕ್ಯಾರೆಟ್, ಎಲೆ ತರಕಾರಿಗಳು ಸೇರಿದಂತೆ ಹಸಿರು ತರಕಾರಿಗಳು(Root Vegetable) ನಿಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿ. ಇವುಗಳಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ, ಇದರಲ್ಲಿ ಪ್ರೋಟೀನ್ ಗಳು, ಕಾರ್ಬೋಹೈಡ್ರೇಟ್ ಗಳು, ಕ್ಲೋರಿನ್, ಸೋಡಿಯಂ, ಕಬ್ಬಿಣವು ಹೇರಳವಾಗಿರುತ್ತದೆ. ಜನರು ಈ ಸೊಪ್ಪನ್ನು ಹಲವು ರೀತಿಯಲ್ಲಿ ಸೇವಿಸುತ್ತಾರೆ. ಈ ಸೊಪ್ಪನ್ನು ಯಾವುದೇ ರೀತಿಯಲ್ಲಿ ಬೇಯಿಸಿ ತಿನ್ನಬಹುದು. ಇವು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಚಳಿಗಾಲದಲ್ಲಿ ಹಸಿರು ಅಥವಾ ಬೇರು ತರಕಾರಿ(Weight Loss In Winter)ಗಳನ್ನು ತಿನ್ನುವುದರಿಂದ ಆಗುವ ಲಾಭಗಳೇನು ಎಂದು ತಿಳಿಯಿರಿ.

ಇದನ್ನೂ ಓದಿ: ಕುತ್ತಿಗೆ-ಬೆನ್ನು ನೋವಿನಿಂದ ಬಳಲುತ್ತಿದ್ದೀರಾ? ಈ ಸುಲಭ ಉಪಾಯಗಳ ಮೂಲಕ ಪರಿಹಾರ ಪಡೆಯಿರಿ

ಚಳಿಗಾಲದಲ್ಲಿ ಹಸಿರು ಅಥವಾ ಬೇರು ತರಕಾರಿಯ ಪ್ರಯೋಜನಗಳು

  • ಕ್ಯಾರೆಟ್-ಮೂಲಂಗಿ ಎಲೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ತರಕಾರಿ(Vegetables)ಗಳ ಎಲೆಗಳಲ್ಲಿ ಕೆಲವೇ ಕ್ಯಾಲೊರಿಗಳಿವೆ, ಇದರಿಂದಾಗಿ ಶೀಘ್ರದಲ್ಲಿ ನಿನಮಗೆ ಹಸಿವಾಗುವುದಿಲ್ಲ. ಇದನ್ನು ತಿನ್ನುವುದರಿಂದ ನಿಮ್ಮ ತೂಕ ಸದಾ ನಿಯಂತ್ರಣದಲ್ಲಿರುತ್ತದೆ.
  • ಇದರೊಂದಿಗೆ ಕೆಂಪು-ಹಸಿರು ತರಕಾರಿಗಳ ಜ್ಯೂಸ್ ಮಾಡಿ ಕುಡಿಯಬಹುದು. ಇದು ಯಕೃತ್ತನ್ನು ನಿರ್ವಿಷಗೊಳಿಸಲು ಸಹಕಾರಿಯಾಗಿದೆ. ಇದಲ್ಲದೆ ಇದು ಮೂತ್ರದ ಸಮಸ್ಯೆಗಳಿಗೆ ಸಹ ಸಹಾಯ ಮಾಡುತ್ತದೆ.
  • ಬೇರು ತರಕಾರಿಗಳನ್ನು(Benefits Root Vegetable) ನಿರಂತರವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಏಕೆಂದರೆ ಅವುಗಳಲ್ಲಿ ವಿಟಮಿನ್-ಸಿ ಪ್ರಮಾಣವೂ ತುಂಬಾ ಹೆಚ್ಚಿರುತ್ತದೆ. ಇದಕ್ಕಾಗಿ ಬೇರು ತರಕಾರಿಗಳನ್ನು ಕ್ಯಾರೆಟ್-ಮೂಲಂಗಿಗಿಂತ ಹೆಚ್ಚು ಮುಖ್ಯವೆಂದು ಪರಿಗಣಿಸಲಾಗುತ್ತದೆ.
  • ಎಲ್ಲಾ ವಿಧದ ಬೇರು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಗಳನ್ನು ಹೊಂದಿರುತ್ತವೆ. ಇದು ಹೃದಯಕ್ಕೂ ಪ್ರಯೋಜನವನ್ನು ನೀಡುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
  • ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಇವೆಲ್ಲವನ್ನೂ ಸೇವಿಸುವುದರಿಂದ ನಿಮ್ಮ ತೂಕವು ಕಡಿಮೆ(How To Weight Loss)ಯಾಗುತ್ತದೆ ಮತ್ತು ಅದೇ ಸಮಯದಲ್ಲಿ ನೀವು ಆರೋಗ್ಯವಾಗಿರುತ್ತೀರಿ.

ಇದನ್ನೂ ಓದಿ: ಪಪ್ಪಾಯಿಯ ಪ್ರಯೋಜನ ತಿಳಿದೇ ಇದೆ.. ಆದರೆ ಅದರಿಂದಾಗುವ ಅನಾರೋಗ್ಯದ ಅರಿವಿದೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News