ಬಳಸುವ ಮುನ್ನ ಎಚ್ಚರವಿರಲಿ , ಈ ವಸ್ತುಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ

How Food Affects Mental Health:  ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಒತ್ತಡ  ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

Written by - Ranjitha R K | Last Updated : Jul 14, 2021, 09:07 PM IST
  • ಕಾಫಿಯಲ್ಲಿ ಕೆಫೀನ್ ಅಂಶ ಇರುತ್ತದೆ ಇದು ಆಂಡ್ರೆಲೈನ್ ಗೆ ಕಾರಣವಾಗುತ್ತದೆ.
  • ಆಲ್ಕೋಹಾಲ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
  • ಉಪ್ಪನ್ನು ಹೆಚ್ಚು ಸೇವಿಸುವುದು ಕೂಡಾ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ
ಬಳಸುವ ಮುನ್ನ ಎಚ್ಚರವಿರಲಿ , ಈ ವಸ್ತುಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ   title=
ಆಲ್ಕೋಹಾಲ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. (photo india.com)

ನವದೆಹಲಿ : How Food Affects Mental Health:  ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಒತ್ತಡ  ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.  ಕೆಟ್ಟ ಆಹಾರ ಪದ್ಧತಿ ಕೂಡಾ ಒತ್ತಡ ಮತ್ತು ಮಾನಸಿಕ ಆರೋಗ್ಯ ಹಾಳಾಗಲು ಕಾರಣವಾಗಬಹುದು. ಕೇಳುವುದಕ್ಕೆ ವಿಚಿತ್ರ ಎಂದೆನಿಸಿದರೂ ಇದು ಸತ್ಯ. ನಾವು ಸೇವಿಸುವ ಆಹಾರ ದೈಹಿಕ  ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು, ಒತ್ತಡವನ್ನು ತಪ್ಪಿಸಲು, ಉತ್ತಮ ಆಹಾರ, ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಮಾಡುವಂತೆ ಸೂಚಿಸಲಾಗುತ್ತದೆ. ಆದ್ದರಿಂದ ನಿಮ್ಮ ಮಾನಸಿಕ ಆರೋಗ್ಯವನ್ನು ಕೆಡಿಸುವಂಥಹ ಕೆಲವು ಆಹಾರಗಳ ಬಗ್ಗೆ ತಿಳಿದು ಕೊಳ್ಳೋಣ ..

ಈ ಆಹಾರಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ:
1. ಕೆಫೀನ್: ಹೆಚ್ಚು ಚಹಾ ಅಥವಾ ಕಾಫಿ (coffee) ಸೇವಿಸುವ ಜನರು ಒತ್ತಡಕ್ಕೆ ಒಳಗಾಗುತ್ತಾರೆ. ಕೆಫೀನ್ ಕಾಫಿಯಲ್ಲಿ ಕಂಡುಬರುತ್ತದೆ, ಇದು  ಆಂಡ್ರೆಲಿನ್ ಗೆ ಕಾರಣವಾಗುತ್ತದೆ. ಮತ್ತು ಇದು ಮಾನಸಿಕ ಆರೋಗ್ಯದ (mental health) ಮೇಲೆ ಪರಿಣಾಮ ಬೀರುತ್ತದೆ. ಇದರ ಬದಲಾಗಿ ಹರ್ಬಲ್ ಚಹಾ, ಪುದೀನ, ನಿಂಬೆ (Lemon) ಅಥವಾ ಎಳನೀರು ಇತ್ಯಾದಿಗಳ ಸೇವನೆ ಆರೋಗ್ಯಕರವಾಗಿರುತ್ತದೆ.  

ಇದನ್ನೂ ಓದಿ : Side Effects Of Eating Clove : ಆಹಾರದ ರುಚಿ ಹೆಚ್ಚಿಸುವ ಲವಂಗವನ್ನು ಇವರಿಗೆ ಸಮಸ್ಯೆಯಾಗಿ ಪರಿಣಮಿಸಬಹುದು

2. ಸಂಸ್ಕರಿಸಿದ ಆಹಾರ : ಬ್ಯುಸಿ ಜೀವನಶೈಲಿ ಮತ್ತು ಒತ್ತಡದ ಜೀವನಶೈಲಿಯಿಂದಾಗಿ, ನಾವು ಇನ್ಸ್ಟಂಟ್  ಆಹಾರದ ಮೊರೆ ಹೋಗುತ್ತಿದ್ದೇವೆ. ಆದರೆ ಸಂಸ್ಕರಿಸಿದ ಆಹಾರವನ್ನು (Processed food) ಸೇವಿಸುವುದರಿಂದ ಮಾನಸಿಕ ಕಾಯಿಲೆಗಳಲ್ಲದೆ ಹೃದಯ ಸಂಬಂಧಿ ರೋಗಗಳು, ಮಧುಮೇಹ ಮತ್ತು ಬೊಜ್ಜು ಉಂಟಾಗುತ್ತದೆ.  ಮೆದುಳನ್ನು ಆರೋಗ್ಯವಾಗಿಡಲು, ವೈಟ್ ಬ್ರೆಡ್, ಬಿಳಿ ಅಕ್ಕಿ, ಸಕ್ಕರೆ, ಸಿರಪ್, ಪಾಸ್ಟಾ ಇತ್ಯಾದಿಗಳನ್ನು ಸೇವಿಸಬೇಡಿ. ಇವುಗಳ ಅತಿಯಾದ ಸೇವನೆಯು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ .

3. ಸಿಹಿ ಪದಾರ್ಥಗಳು  :  ಸಕ್ಕರೆ ಮಿಠಾಯಿಗಳು, ಜಾಮ್‌ಗಳು, ಕೆಚಪ್, ಸಾಸ್‌ಗಳು ಮುಂತಾದ ಸಿಹಿ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದರಿಂದ ಒತ್ತಡ ಹೆಚ್ಚಾಗುತ್ತದೆ. ಇದು ಮಾತ್ರವಲ್ಲ, ಒತ್ತಡದಿಂದಾಗಿ, ರಕ್ತದಲ್ಲಿನ ಸಕ್ಕರೆ (Sugar level) ಮಟ್ಟವೂ ಹೆಚ್ಚಾಗುತ್ತದೆ. ಅವುಗಳ ಬದಲಿಗೆ, ನೀವು ಹಣ್ಣುಗಳನ್ನು ಹೊಂದಿರುವ ಸಿಹಿ ವಸ್ತುಗಳನ್ನು ಸೇವಿಸಬಹುದು.

4. ಆಲ್ಕೊಹಾಲ್: ಆಲ್ಕೊಹಾಲ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೆಚ್ಚು ಆಲ್ಕೊಹಾಲ್ ಕುಡಿಯುವುದರಿಂದ ಒತ್ತಡ ಮತ್ತು ಕಿರಿಕಿರಿ ಹೆಚ್ಚಾಗುತ್ತದೆ. ಆಲ್ಕೊಹಾಲ್ ಅನ್ನು ಅತಿಯಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಇದನ್ನೂ ಓದಿ : ಡಯಾಬಿಟಿಸ್ ರೋಗಿಗಳಾಗಿದ್ದರೆ ಈ ವಸ್ತುವನ್ನು ಹೀಗೆ ಸೇವಿಸಿ ನಿಯಂತ್ರಣದಲ್ಲಿರುತ್ತದೆ ಶುಗರ್

5. ಟ್ರಾನ್ಸ್ ಫ್ಯಾಟ್: ಪ್ರತಿ ಬಾರಿ ನೀವು ಪ್ಯಾಕೆಟ್ ಚಿಪ್ಸ್ ಅಥವಾ ಚಿಕನ್ ನಗೆಟ್ಸ್ ಸೇವಿಸುವಾಗ  ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ನೆನಪಿರಲಿ. ಇದು ಬಾಯಿ ಗೆ ರುಚಿಯಾಗಿರುತ್ತದೆ ಆದರೆ ಆರೋಗ್ಯಕ್ಕೆ ಖಂಡಿತವಾಗಿಯೂ ಒಲೆಯದಲ್ಲ. 

6. ಉಪ್ಪು: ಉಪ್ಪನ್ನು (Salt) ಹೆಚ್ಚು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವುದರ ಜೊತೆಗೆ, ಅತಿಯಾದ ಉಪ್ಪು ಸೇವನೆಯು ದೇಹದಲ್ಲಿ ಆಯಾಸಕ್ಕೆ ಕಾರಣವಾಗಬಹುದು. ಇದು ಹೃದಯ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News