Utpanna Ekadashi: ಉತ್ಪನ್ನ ಏಕಾದಶಿ ಉಪವಾಸ ಆಚರಣೆಯಿಂದ ಹಲವು ಪ್ರಯೋಜನಗಳು

ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನವನ್ನು ಉತ್ಪನ್ನ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಬಾರಿಯ ಉತ್ಪನ್ನ ಏಕಾದಶಿಯ ಉಪವಾಸವನ್ನು ನವೆಂಬರ್ 20ರ ಭಾನುವಾರದಂದು ಆಚರಿಸಲಾಗುತ್ತದೆ. ಈ ಉಪವಾಸದ ಕಥೆ, ಪೂಜಾ ವಿಧಾನ ಮತ್ತು ಉತ್ಪನ್ನ ಏಕಾದಶಿಯ ಮಹತ್ವವನ್ನು ತಿಳಿಯಿರಿ.

Written by - Puttaraj K Alur | Last Updated : Nov 16, 2022, 03:08 PM IST
  • ಮಾರ್ಗಶಿರ ಮಾಸದ ಕೃಷ್ಣಪಕ್ಷದ ಏಕಾದಶಿ ದಿನವನ್ನು ಉತ್ಪನ್ನ ಏಕಾದಶಿ ಎಂದು ಕರೆಯಲಾಗುತ್ತದೆ
  • ಈ ಬಾರಿಯ ಉತ್ಪನ್ನ ಏಕಾದಶಿಯ ಉಪವಾಸವನ್ನು ನವೆಂಬರ್ 20ರಂದು ಆಚರಿಸಲಾಗುತ್ತದೆ
  • ಮಾರ್ಗಶಿರ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಗೆ ಸಾಕಷ್ಟು ಮನ್ನಣೆಯಿದೆ
Utpanna Ekadashi: ಉತ್ಪನ್ನ ಏಕಾದಶಿ ಉಪವಾಸ ಆಚರಣೆಯಿಂದ ಹಲವು ಪ್ರಯೋಜನಗಳು  title=
ಉತ್ಪನ್ನ ಏಕಾದಶಿ 2022

ನವದೆಹಲಿ: ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನವನ್ನು ಉತ್ಪನ್ನ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಬಾರಿಯ ಉತ್ಪನ್ನ ಏಕಾದಶಿಯ ಉಪವಾಸವನ್ನು ನವೆಂಬರ್ 20ರಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಇದಕ್ಕೆ ಸಾಕಷ್ಟು ಮನ್ನಣೆ ಇದೆ. ಈ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಏಕಾದಶಿ ತಿಥಿ ಪ್ರತಿ ತಿಂಗಳು 2 ಬಾರಿ ಬರುತ್ತದೆ. ಒಂದು ವರ್ಷದಲ್ಲಿ ಒಟ್ಟು 24 ಏಕಾದಶಿಗಳಿವೆ. ಆದರೆ ಮಾರ್ಗಶಿರ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಗೆ ಸಾಕಷ್ಟು ಮನ್ನಣೆಯಿದೆ. ಹೀಗಿರುವಾಗ ಉತ್ಪನ್ನ ಏಕಾದಶಿಯ ಪೂಜಾ ವಿಧಾನ, ಉಪವಾಸದ ಕಥೆ ಮತ್ತು ಮಹತ್ವವನ್ನು ತಿಳಿಯಿರಿ.

ದೇವಿ ಏಕಾದಶಿ

ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನ ದೇವಿಯು ಏಕಾದಶಿ ಭಗವಾನ್ ವಿಷ್ಣುವಿನಿಂದ ಕಾಣಿಸಿಕೊಂಡಳು. ಈ ದಿನದಿಂದಲೇ ಏಕಾದಶಿ ಉಪವಾಸವನ್ನು ಪ್ರಾರಂಭಿಸಲಾಯಿತು. ಈ ವ್ರತವನ್ನು ಆಚರಿಸುವುದರಿಂದ ಎಲ್ಲಾ ರೀತಿಯ ಪಾಪಗಳೂ ನಾಶವಾಗುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: 30 ವರ್ಷಗಳ ಬಳಿಕ ಇದೀಗ ಈ ರಾಶಿಯವರನ್ನು ಹೆಜ್ಜೆ ಹೆಜ್ಜೆಗೂ ಕಾಡಲಿದ್ದಾನೆ ಶನಿದೇವ .!

ಪುರಾಣದ ಮಹತ್ವ

ಒಮ್ಮೆ ಭಗವಾನ್ ವಿಷ್ಣುವು ಮುರ್ ಎಂಬ ಅಸುರನೊಂದಿಗೆ ಯುದ್ಧ ಮಾಡುತ್ತಿದ್ದನು. ಯುದ್ಧದ ಸಮಯದಲ್ಲಿ ವಿಷ್ಣುವು ದಣಿದನು ಮತ್ತು ವಿಶ್ರಾಂತಿ ಪಡೆಯಲು ಬದರಿಕಾಶ್ರಮ ಗುಹೆಗೆ ಹೋದನು, ಆದರೆ ಮುರ್ ಅಸುರನು ವಿಷ್ಣುವನ್ನು ಹಿಂಬಾಲಿಸಿ ಅಲ್ಲಿಗೆ ಬಂದನು. ಅವನು ವಿಷ್ಣುವಿನ ಮೇಲೆ ಆಕ್ರಮಣ ಮಾಡಲಿದ್ದನು, ಈ ಮಧ್ಯೆ ವಿಷ್ಣುವಿನ ದೇಹದಿಂದ ಹುಟ್ಟಿದ ದೇವತೆಯು ಮುರ್ ಅಸುರನನ್ನು ಕೊಂದಳು.

ಸಂತುಷ್ಟನಾದ ಭಗವಾನ್ ವಿಷ್ಣು

ಭಗವಾನ್ ವಿಷ್ಣುವು ಆ ದೇವಿಯನ್ನು ನೋಡಿ ಬಹಳ ಪ್ರಸನ್ನನಾದನು. ದೇವಿಯು ‘ನೀನು ಮಾರ್ಗಶೀರ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಜನಿಸಿದೆಯಾದ್ದರಿಂದ ಇಂದಿನಿಂದ ನಿನ್ನ ಹೆಸರು ಏಕಾದಶಿ ಎಂದಾಗುತ್ತದೆ. ಏಕಾದಶಿಯಂದು ನಿನ್ನನ್ನು ಪೂಜಿಸಿ ನನ್ನೊಂದಿಗೆ ಉಪವಾಸ ಮಾಡುವವರು ಎಲ್ಲಾ ರೀತಿಯ ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: Astro Tips : ಇದ್ದಕ್ಕಿದ್ದಂತೆ ನಿಮ್ಮ ಸಾಲ ಹೆಚ್ಚಾಗುತ್ತಿದೆಯಾ? ತಕ್ಷಣ ಮನೆಯಿಂದ ಈ ವಸ್ತುಗಳನ್ನು ಹೊರಗಿಡಿ!

ಪ್ರಾಮುಖ್ಯತೆ

ಉತ್ಪನ್ನ ಏಕಾದಶಿಗೆ ವಿಶೇಷವಾದ ಮಹತ್ವವಿದೆ. ಈ ವ್ರತವನ್ನು ಆಚರಿಸುವುದರಿಂದ ಯಾವುದೇ ವ್ಯಕ್ತಿಯು ವಿಷ್ಣು ಲೋಕದಲ್ಲಿ ಸ್ಥಾನ ಪಡೆಯುತ್ತಾನೆ. ಆತ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಮತ್ತು ಅವನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಪೂಜಾ ವಿಧಾನ

ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು. ವಿಷ್ಣುವಿನ ಮೂರ್ತಿಗೆ ದೀಪವನ್ನು ಹಚ್ಚಿ ಅಭಿಷೇಕ ಮಾಡಬೇಕು. ವೀಳ್ಯದೆಲೆ, ತೆಂಗಿನಕಾಯಿ, ಹಣ್ಣು, ಲವಂಗ, ಪಂಚಾಮೃತ, ಅಕ್ಷತೆ, ಸಿಹಿತಿಂಡಿಗಳು ಮತ್ತು ಶ್ರೀಗಂಧವನ್ನು ಅರ್ಪಿಸಿ, ನಂತರ ವಿಷ್ಣುವಿನ ಆರತಿಯನ್ನು ಮಾಡಬೇಕು. ಈ ಸಮಯದಲ್ಲಿ ದೇವರಿಗೆ ಅರ್ಪಿಸುವ ಎಡೆಗೆ ತುಳಸಿಯನ್ನು ಬಳಸಬೇಕು. ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News