Vastu Tips for Sleeping Direction:ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಐಶ್ವರ್ಯವನ್ನು ತರಲು, ಖರ್ಚುಗಳನ್ನು ನಿಯಂತ್ರಿಸಲು, ಆದಾಯವನ್ನು ಹೆಚ್ಚಿಸಲು ಹಲವಾರು ಸಲಹೆಗಳನ್ನು ನೀಡಲಾಗಿದೆ. ಇದರ ಜೊತೆಗೆ ನೀವು ಕೆಲ ವಿಷಯಗಳ ಬಗ್ಗೆ ಎಚ್ಚರಿಕೆಯನ್ನೂ ವಹಿಸಬೇಕು ಎಂದು ಹೇಳಲಾಗಿದೆ. ಇವುಗಳಲ್ಲಿ ಮಲಗುವ ದಿಕ್ಕು ಕೂಡ ಶಾಮೀಲಾಗಿದೆ. ರಾತ್ರಿ ಮಲಗುವಾಗ ನಿಮ್ಮ ತಲೆಯು ಯಾವ ದಿಕ್ಕಿನಲ್ಲಿರುತ್ತದೆ ಎಂಬುದು ತುಂಬಾ ಮಹತ್ವದ್ದಾಗಿದೆ, ಅದು ನಿಮ್ಮ ಜೀವನದಲ್ಲಿನ ಧನಾಗಮನ, ನಿಮ್ಮ ಗೌರವ, ಆರೋಗ್ಯ-ಸಂಬಂಧ ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ನಿದ್ರೆಯ ದಿಕ್ಕಿನ ಬಗ್ಗೆ ಬಹಳ ಜಾಗರೂಕರಾಗಿರಬೇಕು.
ಮಲಗುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ (Vastu Tips For Bedroom)
>> ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಬೇಡಿ. ಇದನ್ನು ಮಾಡುವುದರಿಂದ ಕಾಂತೀಯ ಹರಿವು ನಿರ್ಬಂಧಿಸಲ್ಪಡುತ್ತದೆ ಮತ್ತು ಹದಗೆಡುತ್ತದೆ. ಈ ಕಾರಣದಿಂದಾಗಿ, ನಿದ್ರೆ ಸರಿಯಾಗಿ ಬರುವುದಿಲ್ಲ. ಈ ಸ್ಥಿತಿಯು ತಲೆನೋವು, ಮಾನಸಿಕ ಕಾಯಿಲೆಗಳಿಗೆ ಕಾರಣವಾಗಬಹುದು.
>> ತಲೆಯನ್ನು ದಕ್ಷಿಣಕ್ಕೆ ಮತ್ತು ಪಾದಗಳನ್ನು ಉತ್ತರಕ್ಕೆ ಇರಿಸಿ ಮಲಗುವುದು ಉತ್ತಮವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆ. ಅವನ ವಯಸ್ಸು ಹೆಚ್ಚಾಗುತ್ತದೆ. ಅವನು ತನ್ನ ಜೀವನದಲ್ಲಿ ಸಾಕಷ್ಟು ಹಣ, ಸಂತೋಷ, ಗೌರವವನ್ನು ಸಂಪಾದಿಸುತ್ತಾನೆ.
ಇದನ್ನೂ ಓದಿ-Rahu Gochar 2022: ಜಾತಕದಲ್ಲಿ ರಾಹು ದೋಷದ ಲಕ್ಷಣಗಳೇನು? ದುಃಖಗಳಿಂದ ಕೂಡಿರುತ್ತದೆ ಜೀವನ
ಇದೇ ವೇಳೆ ಪೂರ್ವ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ, ವ್ಯಕ್ತಿಯ ಸ್ಮರಣಶಕ್ತಿ, ಏಕಾಗ್ರತೆ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಮತ್ತು ಆಧ್ಯಾತ್ಮದ ಕಡೆಗೆ ಒಲವು ಹೊಂದಿದವರು ಪೂರ್ವ ದಿಕ್ಕಿನ ಕಡೆಗೆ ತಲೆಯಿಟ್ಟು ಮಲಗಬೇಕು.
ಪಶ್ಚಿಮ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದು ಕೂಡ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕು ಜಲದೇವನಾದ ವರುಣನ ದಿಕ್ಕು. ಈ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ವ್ಯಕ್ತಿಗೆ ಕೀರ್ತಿ ಪ್ರಾಪ್ತಿಯಾಗುತ್ತದೆ. ಅವನ ಗೌರವ ಹೆಚ್ಚಾಗುತ್ತದೆ. ಅವನ ಜೀವನದಲ್ಲಿ ಸಮೃದ್ಧಿ ಬರುತ್ತದೆ.
ಇದನ್ನೂ ಓದಿ-Weekly Horoscope: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಹಾನಿ ಸಾಧ್ಯತೆ, 7 ದಿನಗಳವರೆಗೆ ಎಚ್ಚರದಿಂದಿರಿ
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.