ನವದೆಹಲಿ : ಬಾಹ್ಯಾಕಾಶದಲ್ಲಿರುವ ಎಲ್ಲಾ ಗ್ರಹಣಗಳು ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತವೆ. ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ನವೆಂಬರ್ ತಿಂಗಳಲ್ಲಿ ಸಂಭವಿಸಲಿದೆ. ಈ ಚಂದ್ರಗ್ರಹಣದ ಪ್ರಭಾವ ಕೆಲವು ರಾಶಿಗಳ ಮೇಲೆ ಬೀರಲಿದೆ. ಹಾಗಾಗಿ ಈ ರಾಶಿಯವರು ಚಂದ್ರಗ್ರಹಣದ ವೇಳೆ ಜಾಗರೂಕರಾಗಿರಬೇಕು.
ಈ ದಿನ ಚಂದ್ರ ಗ್ರಹಣ ಸಂಭವಿಸಲಿದೆ :
ಈ ಚಂದ್ರಗ್ರಹಣವು (Lunar eclipse) ನವೆಂಬರ್ 19 ರ ಬುಧವಾರ ರಾತ್ರಿ 11.30 ಕ್ಕೆ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಗ್ರಹಣವು ಸಂಜೆ 5:33 ಕ್ಕೆ ಸಂಭವಿಸುತ್ತದೆ. ಆದರೂ, ಇದು ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ ಜ್ಯೋತಿಷ್ಯದ ಪ್ರಕಾರ ಇದನ್ನು ನೋಡಿದರೆ, ಇದು ಜಾತಕದ ಮೇಲೆ ನೇರ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : Raksha Bandhan 2021 Things To Avoid: ರಕ್ಷಾ ಬಂಧನದ ದಿನ ಸಹೋದರಿಯರು ಮರೆತೂ ಸಹ ಈ ತಪ್ಪು ಮಾಡಬಾರದು
ಸೂತಕ ಸಮಯದಲ್ಲಿ ಹುಷಾರಾಗಿರಿ :
ನವೆಂಬರ್‌ನಲ್ಲಿ ನಡೆಯಲಿರುವ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣದಲ್ಲೂ ಸೂತಕ ಅವಧಿಯಿದೆ. ಧರ್ಮಗ್ರಂಥಗಳ ಪ್ರಕಾರ (Astrology) , ಇದನ್ನುಉಪಚಾಯಾ ಗ್ರಹಣ ಎಂದು ಕರೆಯುತ್ತಾರೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ, ಚಂದ್ರಗ್ರಹಣ ಆರಂಭವಾಗುವ 9 ಗಂಟೆಗಳ ಮೊದಲು ಸೂತಕ ಅವಧಿ ಆರಂಭವಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಲಾಗುವುದಿಲ್ಲ. ಈ ಚಂದ್ರಗ್ರಹಣವು ಎರಡು ರಾಶಿಚಕ್ರದ ಮೇಲೆ ಪರಿಣಾಮ ಬೀರಲಿದ್ದು, ಅವರು ಜಾಗರೂಕರಾಗಿರಬೇಕು.
ಈ ರಾಶಿಯ ಜನರು ಮಾದಕ ವಸ್ತುಗಳಿಂದ ದೂರವಿರಬೇಕು :
ಈ ಚಂದ್ರಗ್ರಹಣದ ಪರಿಣಾಮ ವೃಷಭ ಮತ್ತು ವೃಶ್ಚಿಕ ರಾಶಿಯ ಜನರ ಮೇಲೆ ಬೀರಲಿದೆ. ಈ ದಿನ ಕೇತು (ketu) ಗ್ರಹವು ವೃಶ್ಚಿಕ ರಾಶಿಯಲ್ಲಿ ಇರುತ್ತದೆ. ಆದ್ದರಿಂದ, ಈ ಸಮಯದಲ್ಲಿ ವ್ಯಕ್ತಿಯು ಯಾವುದೇ ರೀತಿಯ ಕಾನೂನು ಬಾಹಿರ ಕೆಲಸವನ್ನು ಮಾಡಬಾರದು. ಈ ಸಮಯದಲ್ಲಿ ಮಾದಕ ವಸ್ತುಗಳಿಂದ ದೂರವಿರಲು ಪ್ರಯತ್ನಿಸಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ಹೂಡಿಕೆ ಮಾಡಲೇ ಮಾಡಬಾರದು.
ಇದನ್ನೂ ಓದಿ : Surya Grahan 2021: ಡಿಸೆಂಬರ್ . 4ರಂದು ನಡೆಯಲಿದೆ ವರ್ಷದ ಕೊನೆಯ ಸೂರ್ಯಗ್ರಹಣ, ಯಾರ ಮೇಲೆ ಬೀರಲಿದೆ ಪ್ರಭಾವ
ಚಾಲನೆ ಮಾಡುವಾಗ ಜಾಗರೂಕರಾಗಿರಿ:
ವೃಷಭ ರಾಶಿಯ ಜನರು ತಮ್ಮ ಕೋಪವನ್ನು ನಿಯಂತ್ರಿಸಬೇಕು ಮತ್ತು ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಚಂದ್ರ ಗ್ರಹಣ ಸಮಯದಲ್ಲಿ ಯಾರೊಂದಿಗೂ ವಾದ ಮಾಡಬೇಡಿ. ಹಾಗೆ ಮಾಡುವುದರಿಂದ ನಿಮಗೆ ನಷ್ಟವಾಗುತ್ತದೆ. ರಾಹು (Rahu) ವೃಷಭ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ, ನಿಮ್ಮ ಮಾತನ್ನು ನಿಯಂತ್ರಿಸದಿದ್ದರೆ, ಭಾರೀ ನಷ್ಟವನ್ನು ಎದುರಿಸಬೇಕಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ