Vastu Tips:: ಮನೆಯಲ್ಲಿ ಕಸಗೂಡಿಸುವ ಸರಿಯಾದ ಸಮಯ ಯಾವುದು ಗೊತ್ತಾ? ನಿಮ್ಮೀ ತಪ್ಪು ನಿಮಗೆ ದಾರಿದ್ರ್ಯ ತರಬಹುದು

Broom Vastu Tips: ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ಕೆಲ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ದೇವಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ಹಾಗಾದರೆ  ಮನೆಯಲ್ಲಿ ಕಸಗೂಡಿಸುವ ವಿಷಯಕ್ಕೆ ಸಂಬಂಧಿಸಿದ ವಾಸ್ತು ಸಲಹೆಗಳು ಯಾವುವು ಮತ್ತು ಸರಿಯಾದ ಸಮಯ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

Written by - Nitin Tabib | Last Updated : May 20, 2022, 07:04 PM IST
  • ವಾಸ್ತುಶಾಸ್ತ್ರದಲ್ಲಿ ಪೊರಕೆಯನ್ನು ದೇವಿ ಲಕ್ಷ್ಮಿಯ ರೂಪ ಎಂದು ಹೇಳಲಾಗಿದೆ.
  • ತಪ್ಪಾದ ಸಮಯದಲ್ಲಿ ಕಸಗೂಡಿಸುವುದು ದಾರಿದ್ರ್ಯಕ್ಕೆ ಕಾರಣ.
  • ಹಾಗಾದರೆ ಕಸಗೂಡಿಸುವ ಸರಿಯಾದ ಸಮಯ ಯಾವುದು?
Vastu Tips:: ಮನೆಯಲ್ಲಿ ಕಸಗೂಡಿಸುವ ಸರಿಯಾದ ಸಮಯ ಯಾವುದು ಗೊತ್ತಾ? ನಿಮ್ಮೀ ತಪ್ಪು ನಿಮಗೆ ದಾರಿದ್ರ್ಯ ತರಬಹುದು title=
Brooming Vastu Tips

Broom Sweep Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಸಗೂಡಿಸಲು  ಕೂಡ ಸರಿಯಾದ  ಮತ್ತು ತಪ್ಪಾದ ಸಮಾಯಾಗಳಿವೆ. ಸರಿಯಾದ ಸಮಯಕ್ಕೆ ಕಸವನ್ನು ಗೂಡಿಸಿದರೆ, ದೇವಿ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ. ಸುಖ, ಸಂತೋಷ ಮತ್ತು ಸಮೃದ್ಧಿ ಮನೆಯಲ್ಲಿ ಹರಿದು ಬರುತ್ತದೆ. ಹಲವು ಬಾರಿ ಜನರು ದೀರ್ಘ ಕಾಲದ ನಂತರ ತಮ್ಮ ಮನೆಗೆ ಹಿಂದಿರುಗುತ್ತಾರೆ ಮತ್ತು ಧೂಳಿನಿಂದ  ಕೂಡಿದ ಮನೆಯನ್ನು ನೋಡಿದ ತಕ್ಷಣ ಅವರು ಅದನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ತಮಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರವೂ ಮನೆಯಲ್ಲಿ ಕಸಗುಡಿಸಬೇಡಿ.

ಮನೆಯನ್ನು ಸ್ವಚ್ಛಗೊಳಿಸಲು ಉತ್ತಮ ಸಮಯ ಯಾವುದು?
ಸೂರ್ಯೋದಯದ ನಂತರದ ಸಮಯವನ್ನು ಮನೆಯ ಸ್ವಚ್ಛತೆಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಧರ್ಮಶಾಸ್ತ್ರಗಳಲ್ಲಿ ಪೊರಕೆಗೆ ಲಕ್ಷ್ಮಿ ದೇವಿಯ ರೂಪವೆಂದು ಹೇಳಲಾಗಿದೆ. ಮುಂಜಾನೆ ಸೂರ್ಯೋದಯದ ನಂತರವೇ ಮನೆಯನ್ನು ಸ್ವಚ್ಛಗೊಳಿಸಬೇಕು ಎಂಬ ಧಾರ್ಮಿಕ ನಂಬಿಕೆ ಇದೆ. ಸೂರ್ಯಾಸ್ತದ ನಂತರ ಮನೆಯಲ್ಲಿ ಕಸವನ್ನು ಗುಡಿಸಬೇಡಿ. ಅತ್ಯಾವಶ್ಯಕ ಎನಿಸಿದರೆ  ಕಸವನ್ನುಗುಡಿಸಿ ಆ ಕಸವನ್ನು ಯಾವುದಾದರೊಂದು ಮೂಲೆಯಲ್ಲಿ ಸಂಗ್ರಹಿಸಿ. ಆದರೆ ಆ ಮಣ್ಣು ಮತ್ತು ಕಸವನ್ನು ಮನೆಯಿಂದ ಹೊರಗೆ ಎಸೆಯಬೇಡಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಂಡು ಮನೆ ತೊರೆಯುತ್ತಾಳೆ. ಮನೆಯಲ್ಲಿ ದಾರಿದ್ರ್ಯ ಬರುತ್ತದೆ ಮತ್ತು ವ್ಯಕ್ತಿಯು ಕ್ರಮೇಣ ಬಡವನಾಗುತ್ತಾನೆ. ಆದ್ದರಿಂದ, ಮನೆಯನ್ನು ಸ್ವಚ್ಛಗೊಳಿಸುವಾಗ, ಈ ವಾಸ್ತು ನಿಯಮವನ್ನು ನೆನಪಿನಲ್ಲಿಡಿ.

ಇದನ್ನೂ ಓದಿ-Best Mother: ಈ ರಾಶಿಯವರು ಅತ್ಯುತ್ತಮ ಅಮ್ಮಂದಿರಂತೆ!

ಯಾವ ದಿನದಂದು ಹೊಸ ಪೊರಕೆಯನ್ನು ಮನೆಗೆ ತರಬೇಕು ಎಂಬುದನ್ನು ಸಹ ನೀವು ನೆನಪಿನಲ್ಲಿಡಬೇಕು. ಹಳೆಯ ಪೊರಕೆಯನ್ನು ಕಸಕ್ಕೆ ಎಸೆಯಬೇಡಿ. ಬದಲಿಗೆ, ಶುಭದಿನವನ್ನು ನೋಡಿ, ಅದನ್ನು ದೇವಸ್ಥಾನಕ್ಕೆ ದಾನ ಮಾಡಿ ಅಥವಾ ಬೇರೆ ಯಾವುದೇ ವ್ಯಕ್ತಿಗೆ ದಾನ ಮಾಡಿ. ಪೊರಕೆಗೆ ಅಗೌರವ ತೋರಿದರೆ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ. ಇದರ ಹೊರತಾಗಿ, ಪೊರಕೆಯನ್ನು ತಪ್ಪಾಗಿ ಅಂದರೆ, ಉದಾಹರಣೆಗೆ ಕಾಲಿನಿಂದ ಸ್ಪರ್ಶಿಸಬೇಡಿ. ಇದೂ ಕೂಡ ದೇವಿ ಲಕ್ಷ್ಮಿಯ ಪ್ರಕೋಪಕ್ಕೆ ಕಾರಣವಾಗುತ್ತದೆ. 

ಇದನ್ನೂ ಓದಿ-May 21: ಈ ಎರಡು ರಾಶಿಗಳ ಪಾಲಿಗೆ ವರದಾನ ಸಾಬೀತಾಗಲಿದೆ, ಈ ಲಿಸ್ಟ್ ನಲ್ಲಿ ನಿಮ್ಮ ರಾಶಿ ಇದೆಯಾ?

(Disclaimer - ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News