Sugandharaj Plant: ಈ ದೇವಿಯ ಕೃಪೆಗಯಾಗಿ ಮನೆಯಲ್ಲಿರಲಿ ಸುಗಂಧರಾಜ್ಯ ಹೂವಿನ ಗಿಡ

Rajnigandha Plant At Home: ವಾಸ್ತು ಶಾಸ್ತ್ರದಲ್ಲಿ ಹಲವು ಗಿಡಗಳ ಕುರಿತು ಉಲ್ಲೇಖಿಸಲಾಗಿದ್ದು, ಅವುಗಳನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಮತ್ತು ಶಾಂತಿ ನೆಲಸುತ್ತದೆ ಎನ್ನಲಾಗಿದೆ. ಇದಲ್ಲದೆ ವ್ಯಕ್ತಿಯ ಜೀವನದಲ್ಲಿ ಹಣಕಾಸಿನ ಮುಗ್ಗಟ್ಟು ಕೂಡ ಎದುರಾಗುವುದಿಲ್ಲ ಎನ್ನಲಾಗುತ್ತದೆ. ಇಂತಹುದೇ ಒಂದು ಗಿಡ ಅಂದರೆ ಅದು ಸುಗಂಧರಾಜ ಅಥವಾ ರಜನೀಗಂಧ ಹೂವಿನ ಗಿಡ.   

Written by - Nitin Tabib | Last Updated : May 17, 2022, 04:52 PM IST

    ವಾಸ್ತು ಶಾಸ್ತ್ರದಲ್ಲಿ ಗಿಡ-ಮರಗಳಿಗೆ ವಿಶೇಷ ಮಹತ್ವವಿದೆ.

    ಮನೆಯಲ್ಲಿನ ಸುಗಂಧರಾಜ ಗಿಡ ಸುಖ-ಸಮೃದ್ಧಿಗೆ ಕಾರಣ

    ಮನೆಯ ಈ ದಿಕ್ಕಿನಲ್ಲಿ ನೆಟ್ಟ ಸುಗಂಧರಾಜ ಗಿಡ ಮನೆಯಲ್ಲಿ ಲಕ್ಷ್ಮಿಯ ವಾಸಕ್ಕೆ ಕಾರಣ

Sugandharaj Plant: ಈ ದೇವಿಯ ಕೃಪೆಗಯಾಗಿ ಮನೆಯಲ್ಲಿರಲಿ ಸುಗಂಧರಾಜ್ಯ ಹೂವಿನ ಗಿಡ title=
Vastu Tips For Prosperity

Right Direction For Rajnigandha: ಬಿಳಿ ಬಣ್ಣದ ಚಿಕ್ಕ-ಚಿಕ್ಕ ಹೂವುಗಳಾಗಿರುವ ಸುಗಂಧರಾಜ ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರಕ್ಕೆ ಕಾರಣವಾಗುತ್ತವೆ. ಇನ್ನೊಂದೆಡೆ ವಾಸ್ತು ಶಾಸ್ತ್ರದ ಪ್ರಕಾರ ಕೂಡ ಈ ಗಿಡ ಭಾರಿ ಮಹತ್ವವನ್ನು ಪಡೆದುಕೊಂಡಿದೆ. ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ನಾವು ನಮ್ಮ ಮನೆಯಲ್ಲಿಡುವ ಪ್ರತಿಯೊಂದು ವಸ್ತುಗಳು ನಮ್ಮ ಜೀವನದ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವ ಬೀರುತ್ತವೆ. ವಾಸ್ತುಗೆ ಅನುಗುಣವಾಗಿ ಸರಿಯಾದ ದಿಕ್ಕಿನಲ್ಲಿ ನಾವು ವಸ್ತುಗಳನ್ನು ಇಟ್ಟರೆ ಅದು ಸಕಾರಾತ್ಮಕ ಪ್ರಭಾವ ಬೀರುತ್ತದೆ. 

ಇದೇ ರೀತಿ ವಾಸ್ತು ಶಾಸ್ತ್ರದಲ್ಲಿ ಗಿಡ-ಮರಗಳಿಗೂ ಕೂಡ ವಿಶೇಷ ಮಹತ್ವವಿದೆ. ಕೆಲ ಸಸ್ಯಗಳು ಮನೆಯಲ್ಲಿರುವ ಎಲ್ಲಾ ರೀತಿಯ ವಾಸ್ತುದೋಷಗಳನ್ನು ತೊಡೆದುಹಾಕಿ ಮನೆಯಲ್ಲಿ ಸುಖ-ಸಮೃದ್ಧಿ ಮತ್ತು ಶಾಂತಿಯನ್ನು ತರುತ್ತವೆ. ಇಂತಹ ಸಸ್ಯಗಳಲ್ಲಿ ಸುಗಂಧರಾಜ ಸಸ್ಯ ಕೂಡ ಒಂದು. ಒಂದೆಡೆ ಈ ಸಸ್ಯದ ಹೂವುಗಳ ಸುವಾಸನೆ ಮನೆಯಲ್ಲಿ ಧನಾತ್ಮಕ ಪ್ರಭಾವ ಬೀರಿದರೆ, ಇದನ್ನು ಸರಿಯಾದ ಜಾಗದಲ್ಲಿ ನೆಡುವುದರಿಂದ ಮನೆಯಲ್ಲಿ ದೇವಿ ಲಕ್ಷ್ಮಿ ನೆಲೆಸುತ್ತಾಳೆ. ಇದಲ್ಲದೆ ಮನೆಯ ಯಜಮಾನನ ಆದಾಯದಲ್ಲಿ ವೃದ್ಧಿಯಾಗುತ್ತದೆ. ಹಾಗಾದರೆ, ಬನ್ನಿ ಈ ಸುಗಂಧರಾಜ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ,

ವಾಸ್ತು ಶಾಸ್ತ್ರದ ಲೆಕ್ಕಾಚಾರದಲ್ಲಿ ಸುಗಂಧರಾಜ
ವಾಸ್ತು ಪರಿಣಿತರ ಪ್ರಕಾರ ಗಿಡ-ಮರಗಳು ಮನೆಯಲ್ಲಿ ಸಕಾರಾತ್ಮಕತೆ ಮತ್ತು ಶಾಂತಿಯನ್ನು ತರುತ್ತವೆ ಎನ್ನಲಾಗಿದೆ . ಆದರೆ, ಇದರರ್ಥ ಪ್ರತಿಯೊಂದು ಗಿಡ-ಮರ ಮನೆಯಲ್ಲಿನ ಸಾಕಾರಾತ್ಮಕತೆಗೆ ಕಾರಣವಾಗುತ್ತದೆ ಎಂಬುದು ತಪ್ಪು. ಇದೇ ಕಾರಣದಿಂದ ಮನೆಯಲ್ಲಿ ಕೆಲ ಸಸ್ಯಗಳು ಮನೆಯಲ್ಲಿರಬಾರದು ಎಂದೂ ಕೂಡ ಹೇಳಲಾಗುತ್ತದೆ. ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯಲ್ಲಿ ಸುಗಂಧರಾಜ್ಯ ಗಿಡವನ್ನು ನೆಡುವುದರ ಬಗ್ಗೆ ಯೋಚಿಸುತ್ತಿದ್ದರೆ, ಅದನ್ನು ನೆಡುವ ಮೊದಲು ಅದರ ಸರಿಯಾದ ದಿಕ್ಕಿನ ಮಾಹಿತಿ ನಿಮಗಿರುವುದು ಉತ್ತಮ. 

ಇದನ್ನೂ ಓದಿ-Numerology: ಈ ದಿನಾಂಕದಂದು ಜನಿಸಿದ ಜನರು ಸ್ವಭಾವತಃ ಸರಳರು, ಆಸ್ತಿಯ ವಿಷಯದಲ್ಲಿ ಅದೃಷ್ಟವಂತರು

ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಸುಗಂಧರಾಜ ಗಿದವನ್ನು ನೆಡುವುದು ಅತ್ಯಂತ ಉತ್ತಮ ಮತ್ತು ಅದು ಲಾಭದಾಯಕ ಪರಿಣಾಮ ನೀಡುತ್ತದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಧನ-ಧಾನ್ಯ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ದೇವಿ ಲಕ್ಷ್ಮಿಯ ಕೃಪಾಯವೃಷ್ಟಿಯಾಗುತ್ತದೆ. ಅಷ್ಟೇ ಅಲ್ಲ ಒಂದೊಮ್ಮೆ ಈ ಗಿಡವನ್ನು  ನೀವು ನಿಮ್ಮ ಮನೆಯ ಸರಿಯಾದ ದಿಕ್ಕಿನಲ್ಲಿ ನೆಟ್ಟರೆ, ಮನೆಯಲ್ಲಿ ಸುಖ ಸಮೃದ್ಧಿಯ ವಾಸ ಉಂಟಾಗುತ್ತದೆ ಹಾಗೂ ಇದರ ಸುವಾಸನೆಯಂತೆಯೇ ಮನೆಯ ಸದಸ್ಯರ ಜೀವನ ಕಂಪುಬೀರಲು  ಆರಂಭಿಸುತ್ತದೆ. ವೈವಾಹಿಕ ಜೀವನದಲ್ಲಿ ಮಧುರತೆ ತರಲು ನಿಮ್ಮ ಕೊನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಸುಗಂಧರಾಜ ಹೂವಿನ ಗಿಡವನ್ನಿರಿಸಿ. 

ಇದನ್ನೂ ಓದಿ-Best Zodiac Signs For Marriage: ಈ ರಾಶಿಗಳ ಜನರು ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ, ಸಂಗಾತಿಯ ಸಂಪೂರ್ಣ ಕಾಳಜಿವಹಿಸುತ್ತಾರೆ

(Disclaimer -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News