White Hair: ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಹೀಗೆ ಮಾಡಿ..!

Premature White Hair: ಇತ್ತೀಚಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತವೆ. ಆದ್ದರಿಂದ ಮೊದಲ ಬಾರಿಗೆ ತಲೆಯ ಮೇಲೆ ಬಿಳಿ ಕೂದಲು ಕಾಣಿಸಿಕೊಂಡಾಗ ಜಾಗರೂಕರಾಗಿರಿ. ಕೂಡಲೇ ಈ ಪರಿಹಾರ ಮಾಡಲು ಶುರು ಮಾಡಿ.  

Written by - Chetana Devarmani | Last Updated : Jun 9, 2023, 05:47 PM IST
  • ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುತ್ತಿದೆಯೇ?
  • ಬಿಳಿ ಕೂದಲು ಕಾಣಿಸಿಕೊಂಡಾಗ ಜಾಗರೂಕರಾಗಿರಿ
  • ಕೂಡಲೇ ಈ ಪರಿಹಾರ ಮಾಡಲು ಶುರು ಮಾಡಿ
White Hair: ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಹೀಗೆ ಮಾಡಿ..! title=
White Hair

Premature White Hair: ಕೆಟ್ಟ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದ ಕೂದಲಿನ ಆರೋಗ್ಯ ಹಾಳಾಗುತ್ತಿದೆ. ಈ ಕಾರಣದಿಂದಾಗಿ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಮತ್ತು ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ಅತಿ ಚಿಕ್ಕ ವಯಸ್ಸಿನಲ್ಲೇ ಇಂತಹ ಸಮಸ್ಯೆಗೆ ಗುರಿಯಾಗುತ್ತಾರೆ. ಕೆಲವು ಬಾರಿ ಇದು ಮುಜುಗರ ಮತ್ತು ಕಡಿಮೆ ಆತ್ಮವಿಶ್ವಾಸಕ್ಕೆ ಕಾರಣವಾಗುತ್ತದೆ. ಇದರ ಹಿಂದೆ ಆನುವಂಶಿಕ ಕಾರಣಗಳಿರಬಹುದು. ಆದರೆ ಅನೇಕ ಬಾರಿ ಅನಾರೋಗ್ಯಕರ ಆಹಾರ ಇದಕ್ಕೆ ಕಾರಣವಾಗುತ್ತೆ.

1. ಆರೋಗ್ಯಕರ ಆಹಾರವನ್ನು ಸೇವಿಸಿ: ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ನಿಮ್ಮ ದೈನಂದಿನ ಆಹಾರವು ಆರೋಗ್ಯಕರವಾಗಿಲ್ಲ ಎಂದು ಅರ್. ಶುದ್ಧ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವ ಸೇವಿಸಿ. ಕೂದಲಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಆಹಾರದ ಮೂಲಕ ಸೇವಿಸಿ. ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು‌ ಇರುವ ಆಹಾರ ಸೇವಿಸಿ. 

2. ಧೂಮಪಾನವನ್ನು ತ್ಯಜಿಸಿ: ಧೂಮಪಾನದಿಂದ ದೇಹದ ಮೇಲೆ ಆಗುವ ದುಷ್ಪರಿಣಾಮಗಳು ಅನೇಕ. ಸಾಮಾನ್ಯವಾಗಿ ಇದು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಇದರ ಜೊತೆಗೆ ಧೂಮಪಾನ ಕೂದಲಿಗೆ ಒಳ್ಳೆಯದಲ್ಲ. ಬಿಳಿ ಕೂದಲು ತಡೆಯಲು ಸಿಗರೆಟ್ ಅನ್ನು ತ್ಯಜಿಸುವುದು ಉತ್ತಮ.  

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ!

3. ಕೂದಲಿನ ಹಾನಿಯನ್ನು ತಡೆಯಿರಿ: ಪರಿಸರದಲ್ಲಿ ಮಾಲಿನ್ಯಕಾರಕಗಳಿಂದಲೂ ಬಿಳಿ ಕೂದಲು ಉಂಟಾಗುತ್ತದೆ. ವಿಶೇಷವಾಗಿ ಬಲವಾದ ಸೂರ್ಯನ ಬೆಳಕು ನಿಮ್ಮ ಕೂದಲಿನ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕ ರಾಸಾಯನಿಕ ಆಧಾರಿತ ಕೂದಲು ಉತ್ಪನ್ನಗಳು ಕೂದಲು ಹಾನಿಯನ್ನು ಉಂಟುಮಾಡುತ್ತವೆ. ಇದರಿಂದ ದೂರವಿದ್ದು ಬಿಳಿ ಕೂದಲನ್ನು ತಡೆಯಬಹುದು.

4. ಒತ್ತಡವನ್ನು ತಪ್ಪಿಸಿ: ನೀವು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲನ್ನು ತಡೆಯಲು ಒತ್ತಡವನ್ನು ತಪ್ಪಿಸಿ. ಏಕೆಂದರೆ ಒತ್ತಡವು ಬಿಳಿ ಕೂದಲು ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ನೀವು ಸಂತೋಷವಾಗಿರಲು ಪ್ರಯತ್ನಿಸುವುದು ಉತ್ತಮ .

ಇದನ್ನೂ ಓದಿ: ದುಬಾರಿ ಕ್ರೀಂ ಬೇಡ…ಮುಖದ ಹೊಳಪು ಹೆಚ್ಚಿಸಲು ಅಕ್ಕಿ ತೊಳೆದ ನೀರಿಗೆ ಈ ವಸ್ತು ಬೆರೆಸಿ ಹಚ್ಚಿದರೆ ಸಾಕು!

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News