White Foods : ಊಟದ ತಟ್ಟೆಯಲ್ಲಿರುವ ಈ ಐದು ವಸ್ತುಗಳು ಆರೋಗ್ಯಕ್ಕೆ ಮುಳುವಾಗಬಹುದು, ಈ ಆಹಾರಗಳನ್ನು ತಕ್ಷಣ ದೂರ ಮಾಡಿ

ವಿಶೇಷವೆಂದರೆ ಸಂಸ್ಕರಿಸಿದ ಆಹಾರದಲ್ಲಿಎಲ್ಲಾ ವಸ್ತುಗಳ ಪ್ರಮಾಣವು ತುಂಬಾ ಅಪಾಯಕಾರಿ ಮಟ್ಟದಲ್ಲಿರುತ್ತದೆ. ಇವುಗಳ ಅತಿಯಾದ ಸೇವನೆಯು ಕ್ಯಾನ್ಸರ್, ಟೈಪ್ -2 ಮಧುಮೇಹ , ಸ್ಥೂಲಕಾಯ, ಹೃದಯಾಘಾತ, ರಕ್ತದೊತ್ತಡದಂತಹ ರೋಗಗಳಿಗೆ ಕಾರಣವಾಗುತ್ತದೆ. 

Written by - Ranjitha R K | Last Updated : Oct 4, 2021, 03:54 PM IST
  • ಆರೋಗ್ಯವಾಗಿರಲು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶ ಇರುವುದು ಅಗತ್ಯ
  • ರಿಫೈನ್ಡ್ ಸಕ್ಕರೆಯನ್ನು ಎಂಪ್ಟಿ ಕ್ಯಾಲೋರಿ ಎಂದೂ ಕರೆಯುತ್ತಾರೆ.
  • ಅನ್ನವನ್ನು ಇಷ್ಟಪಟ್ಟು ತಿನ್ನುವವರು ಬಹಳ ಮಂದಿ ಇರುತ್ತಾರೆ.
White Foods : ಊಟದ ತಟ್ಟೆಯಲ್ಲಿರುವ ಈ ಐದು ವಸ್ತುಗಳು ಆರೋಗ್ಯಕ್ಕೆ ಮುಳುವಾಗಬಹುದು, ಈ ಆಹಾರಗಳನ್ನು  ತಕ್ಷಣ ದೂರ ಮಾಡಿ  title=
White Foods (file photo)

ನವದೆಹಲಿ : ಆರೋಗ್ಯವಾಗಿರಲು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶ ಇರುವುದು ಅಗತ್ಯ. ಆದರೆ ಬದಲಾದ ಜೀವನ ಶೈಲಿಯಲ್ಲಿ (lifestyle), ಆಹಾರ ಪದ್ಧತಿಯಿಂದಾಗಿ, ಪೋಷಕಾಂಶಗಳ ಪ್ರಮಾಣ ಕಡಿಮೆಯಾಗಲಾರಂಭಿಸಿದೆ. ಇನ್ಸ್ಟಂಟ್ ಆಹಾರ, ಚೈನೀಸ್, ಸಂಸ್ಕರಿಸಿದ ಆಹಾರವನ್ನು (Processed food) ಸೇವಿಸುತ್ತಲೇ ಇರುತ್ತೇವೆ. ಈ ಎಲ್ಲಾ ಆಹಾರ ಪದಾರ್ಥಗಳನ್ನು ತಯಾರಿಸಲು, ಉಪ್ಪು, ಸಕ್ಕರೆ, ಮೈದಾ, ಅಜಿನೊಮೊಟೊ, ಅಕ್ಕಿ ಮತ್ತು ಆಲೂಗಡ್ಡೆಗಳನ್ನು ಬಳಸಲಾಗುತ್ತದೆ.

ವಿಶೇಷವೆಂದರೆ ಸಂಸ್ಕರಿಸಿದ ಆಹಾರದಲ್ಲಿ (Processed food)  ಈ ಎಲ್ಲಾ ವಸ್ತುಗಳ ಪ್ರಮಾಣವು ತುಂಬಾ ಅಪಾಯಕಾರಿ ಮಟ್ಟದಲ್ಲಿರುತ್ತದೆ. ಇವುಗಳ ಅತಿಯಾದ ಸೇವನೆಯು ಕ್ಯಾನ್ಸರ್, ಟೈಪ್ -2 ಮಧುಮೇಹ (Type 2 diabetes), ಸ್ಥೂಲಕಾಯ, ಹೃದಯಾಘಾತ, ರಕ್ತದೊತ್ತಡದಂತಹ ರೋಗಗಳಿಗೆ ಕಾರಣವಾಗುತ್ತದೆ. ಮಾತ್ರವಲ್ಲ, ವ್ಯಕ್ತಿಯ ಆಯುಷ್ಯವನ್ನು ಕನಿಷ್ಠ 10 ವರ್ಷಗಳಷ್ಟು ಕಡಿಮೆ ಮಾಡುತ್ತದೆ.  

ಇದನ್ನೂ ಓದಿ : Fenugreek Seeds Benefits : ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮೆಂತ್ಯ : ಈ ರೀತಿ ಸೇವಿಸಿ, ಸಾಮರ್ಥ್ಯ ಹೆಚ್ಚಿಸುತ್ತದೆ

ಸಕ್ಕರೆ:
ಬಿಳಿ ಆಹಾರಗಳ ಗುಂಪಿನಲ್ಲಿ ಸಕ್ಕರೆ (Sugar) ಅತ್ಯಂತ ಹಾನಿಕಾರಕ ಎಂಬುದರಲ್ಲಿ ಸಂದೇಹವಿಲ್ಲ. ರಿಫೈನ್ಡ್ ಸಕ್ಕರೆಯನ್ನು ಎಂಪ್ಟಿ ಕ್ಯಾಲೋರಿ ಎಂದೂ ಕರೆಯುತ್ತಾರೆ. ರಿಫೈನ್ಡ್ ಸಕ್ಕರೆ  (Refined Sugar) ಅಂದರೆ ಅದು ವಿಶೇಷ ಗುಣಮಟ್ಟದ್ದಾಗಿರುವುದಿಲ್ಲ. ಬದಲಾಗಿ, ಅದು ದೇಹ ತಲುಪಿದ ತಕ್ಷಣ, ಗ್ಲುಕೋಸ್ ಮತ್ತು ಫ್ರಕ್ಟೋಸ್ ಆಗಿ ವಿಭಜನೆಯಾಗುತ್ತದೆ. ದೈಹಿಕ ಶ್ರಮ ಪಡದ ಜನರ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಇದು ಸಂಗ್ರಹವಾಗುತ್ತದೆ. ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಮಾತ್ರವಲ್ಲ, ಯಕೃತ್ತಿನ ಸಮಸ್ಯೆಗಳು, ಇನ್ಸುಲಿನ್ ಪ್ರತಿರೋಧವನ್ನು ಹೊರತುಪಡಿಸಿ, ಹಲ್ಲಿನ ಸಮಸ್ಯೆಗಳು ಮತ್ತು ಕ್ಯಾನ್ಸರ್ ನಂತಹ (Cancer) ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. 

ಬಿಳಿ ಅಕ್ಕಿ:
ಹೆಚ್ಚಿನ ಭಾರತೀಯ ಮನೆಗಳಲ್ಲಿ ಅನ್ನವನ್ನು (Rice) ತಯಾರಿಸಲಾಗುತ್ತದೆ.  ಅನ್ನವನ್ನು ಇಷ್ಟಪಟ್ಟು ತಿನ್ನುವವರು ಬಹಳ ಮಂದಿ ಇರುತ್ತಾರೆ. ಅನ್ನ ಇಲ್ಲದೆ ಆಹಾರ ಪೂರ್ಣವಾಗುವುದಿಲ್ಲ ಎಂದು ಹೇಳುವವರೂ ಇದ್ದಾರೆ.  ಬಿಳಿ ಅಕ್ಕಿಯ ಸಂಸ್ಕರಣ ಪ್ರಕ್ರಿಯೆಯಲ್ಲಿ, ಸಿಪ್ಪೆ ಮತ್ತು ಸೂಕ್ಷ್ಮಾಣುಗಳನ್ನು ತೆಗೆದುಹಾಕಲಾಗುತ್ತದೆ. ಇದರಿಂದಾಗಿ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ. ಬಿಳಿ ಅಕ್ಕಿಯ ಸೇವನೆಯು ಟೈಪ್ -2 ಮಧುಮೇಹದ (Type 2 diabetes), ಹೆಚ್ಚಳಕ್ಕೆ ಸಂಬಂಧಿಸಿದೆ ಎಂದು ಅಧ್ಯಯನಗಳು ವರದಿ ಮಾಡಿವೆ. ಅನ್ನವಿಲ್ಲದೆ ಇರಲು ಸಾಧ್ಯವೇ ಇಲ್ಲ ಎನ್ನುವವರು ಕಂದು ಅಥವಾ ಕೆಂಪು ಅಕ್ಕಿಯನ್ನು (Red Rice) ಸೇವಿಸಬಹುದು.  

ಇದನ್ನೂ ಓದಿ : Hair Care Tips: ಕೂದಲು ಉದುರುವಿಕೆಗೆ ಪರಿಹಾರ ಪಡೆಯಲು ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ

ಉಪ್ಪು:
ಉಪ್ಪನ್ನು (Salt) ಸಂಪೂರ್ಣವಾಗಿ ತ್ಯಜಿಸುವಂತೆ ಯಾರೂ ಹೇಳುವುದಿಲ್ಲ. ಏಕೆಂದರೆ ಉಪ್ಪನ್ನು ಸಂಪೂರ್ಣವಾಗಿ ಸೇವಿಸದೇ ಇರುವುದು ಕೂಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಕಷ್ಟು ಸೋಡಿಯಂ ಮತ್ತು ಕ್ಲೋರೈಡ್ ಎರಡನ್ನೂ ಉಪ್ಪಿನಿಂದಲೇ ಪೂರೈಸಲಾಗುತ್ತದೆ. ಆದರೆ, ಹೆಚ್ಚು ಸೋಡಿಯಂ ಅನ್ನು ಸೇವಿಸಿದಾಗ, ಅದು ನಿಮ್ಮ ದೇಹದಲ್ಲಿನ ನೀರಿನ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ.  ಇದು ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಹೆಚ್ಚು ಉಪ್ಪನ್ನು ತಿನ್ನುವುದರಿಂದ, ದೇಹದಲ್ಲಿ ಸಂಗ್ರಹವಾಗಿರುವ ನೀರು ರಕ್ತದೊತ್ತಡವನ್ನು (Blood presure) ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಹೊಟ್ಟೆಯ ಹುಣ್ಣು ಮತ್ತು ಕ್ಯಾನ್ಸರ್‌ಗೂ ಕಾರಣವಾಗಬಹುದು. ಆದ್ದರಿಂದ, ದೈನಂದಿನ ಆಹಾರದಲ್ಲಿ 1 ಸಣ್ಣ ಚಮಚ ಉಪ್ಪನ್ನು ತೆಗೆದುಕೊಂಡರೆ ಸಾಕು.

ಮೈದಾ :  
ವೈಟ್ ಬ್ರೆಡ್, ಕೇಕ್, ಬಿಸ್ಕತ್ತು ಮತ್ತು ಪೇಸ್ಟ್ರಿಯಂತಹ ಆಹಾರಗಳನ್ನು ಮೈದಾದಿಂದಲೇ ತಯಾರಿಸಲಾಗುತ್ತದೆ. ಗೋಧಿ ಹಿಟ್ಟನ್ನು ಸಂಸ್ಕರಿಸಿದಾಗ, ಈ ಪ್ರಕ್ರಿಯೆಯು ಅವುಗಳ ಫೈಬರ್ ,  ಉತ್ತಮ ಕೊಬ್ಬುಗಳು, ಜೀವಸತ್ವಗಳು, ಖನಿಜಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳನ್ನು ತೆಗೆದುಹಾಕುತ್ತದೆ. ಒಟ್ಟಾರೆಯಾಗಿ, ಗೋಧಿಯಿಂದ ಹಿಟ್ಟು ತಯಾರಿಸುವ ಪ್ರಕ್ರಿಯೆಯಲ್ಲಿ, ಅದರಲ್ಲಿರುವ ಬಹುತೇಕ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ಸಂಸ್ಕರಿಸಿದ ಆಹಾರ ಟ್ರೈಗ್ಲಿಸರೈಡ್‌ಗಳ ಹೆಚ್ಚಳಕ್ಕೆ ಮತ್ತು ಉತ್ತಮ ಎಚ್‌ಡಿಎಲ್ ಕೊರತೆಗೆ ಕಾರಣವಾಗಬಹುದು. ಇದು ಗರ್ಭಾವಸ್ಥೆಯಲ್ಲಿ ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಉಂಟುಮಾಡುತ್ತದೆ.

ಇದನ್ನೂ ಓದಿ : ದೇಹ ತೂಕ ಇಳಿಸಿಕೊಳ್ಳಲು ಕುಡಿಯಿರಿ ಬ್ಲಾಕ್ ಕಾಫಿ, ಆಯುರ್ವೇದ ವೈದ್ಯರಿಂದ ಈ 3 ಅದ್ಭುತ ಸಲಹೆಗಳು!

ಬಿಳಿ ಆಲೂಗಡ್ಡೆ :
ಪ್ರತಿಯೊಬ್ಬರ ನೆಚ್ಚಿನ ತರಕಾರಿಗಳಲ್ಲಿ ಆಲೂಗಡ್ಡೆಗೊಂದು (Potato) ಜಾಗ ಇದ್ದೇ ಇರುತ್ತದೆ. ಇದು ತೂಕವನ್ನು ಹೆಚ್ಚಿಸುತ್ತದೆ.  ಬಿಳಿ ಆಲೂಗಡ್ಡೆಗಳು ಪಿಷ್ಟ ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿವೆ. ಸಮಸ್ಯೆಯೆಂದರೆ ಆಲೂಗಡ್ಡೆಯನ್ನು ಒಂದೋ ಎಣ್ಣೆಯಲ್ಲಿ (oil) ಕರಿಯಲಾಗಿರುತ್ತದೆ. ಅಥವಾ ಬೆಣ್ಣೆ ಮತ್ತು ಕೆನೆಯೊಂದಿಗೆ ಹಿಸುಕಲಾಗುತ್ತದೆ. ಈ ಎರಡೂ ರೀತಿಯಲ್ಲಿ ಆಲುಗಡ್ಡೆಯನ್ನು ಸೇವಿಸುವುದು ಕೂಡಾ ಅಪಾಯಕಾರಿಯಾಗಿರುತ್ತದೆ. ತಜ್ಞರ ಪ್ರಕಾರ, ಹುರಿದ ಆಲೂಗಡ್ಡೆಯನ್ನು ಅತಿಯಾಗಿ ಸೇವಿಸುವುದರಿಂದ ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯ ಕೂಡಾ ಹೆಚ್ಚಾಗಿರುತ್ತದೆ. 

ಸೀಮಿತ ಪ್ರಮಾಣದಲ್ಲಿ ಮಾತ್ರ ಈ ಬಿಳಿ ಆಹಾರವನ್ನು ಸೇವಿಸಬೇಕು. ಇಲ್ಲವಾದರೆ ಅಪಾಯ ತಪ್ಪಿದ್ದಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News