Cat in Shastra: ದಾರಿಯಲ್ಲಿ ಬೆಕ್ಕು ಅಡ್ಡಬಂದರೆ ನೀವು ಅರ್ಧಕ್ಕೇ ನಿಲ್ಲುತ್ತೀರಾ? ಈ ಶಕುನಗಳ ಅರ್ಥವೇನು ಗೊತ್ತಾ?

Myth vs Science Cat crosses your path: ಬೆಕ್ಕುಗಳ ಬಗ್ಗೆ ವಿವಿಧ ರೀತಿಯ ಪುರಾಣಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿ ಚಾಲ್ತಿಯಲ್ಲಿವೆ. ಕೆಲವೆಡೆ ಬೆಕ್ಕನ್ನು ಮಂಗಳಕರ ಎಂದರೆ, ಮತ್ತೊಂದೆಡೆ ಅಶುಭವೆಂದು ಪರಿಗಣಿಸಲಾಗುತ್ತದೆ

Written by - Bhavishya Shetty | Last Updated : Jun 15, 2023, 01:40 PM IST
    • ಬೆಕ್ಕು ದಾರಿಯಲ್ಲಿ ಅಡ್ಡಬಂದರೆ ಅನೇಕ ಜನರು ಸ್ವಲ್ಪ ಸಮಯದವರೆಗೆ ನಿಲ್ಲುತ್ತಾರೆ
    • ಕಪ್ಪು ಬೆಕ್ಕು ಮತ್ತು ಬಿಳಿ ಬೆಕ್ಕು ಮಾರ್ಗವನ್ನು ದಾಟುವುದಕ್ಕೆ ವಿಭಿನ್ನ ಅರ್ಥಗಳನ್ನು ನೀಡಲಾಗಿದೆ.
    • ಬೆಕ್ಕು ಮಾರ್ಗವನ್ನು ದಾಟಿದಾಗ ನಿಲ್ಲುವುದನ್ನು ಅನೇಕರು ಮೂಢನಂಬಿಕೆ ಅಥವಾ ಭ್ರಮೆ ಎಂದು ಪರಿಗಣಿಸುತ್ತಾರೆ
Cat in Shastra: ದಾರಿಯಲ್ಲಿ ಬೆಕ್ಕು ಅಡ್ಡಬಂದರೆ ನೀವು ಅರ್ಧಕ್ಕೇ ನಿಲ್ಲುತ್ತೀರಾ? ಈ ಶಕುನಗಳ ಅರ್ಥವೇನು ಗೊತ್ತಾ?  title=
Meaning of a cat crossing the road

Myth vs Science Cat crosses your path: ಬೆಕ್ಕು ದಾರಿಯಲ್ಲಿ ಅಡ್ಡಬಂದರೆ ಅನೇಕ ಜನರು ಸ್ವಲ್ಪ ಸಮಯದವರೆಗೆ ನಿಲ್ಲುತ್ತಾರೆ ಅಥವಾ ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ. ಬೆಕ್ಕು ಅಡ್ಡ ಬಂದರೆ ಆ ದಾರಿಯಲ್ಲಿ ಹೋಗಬಾರದು, ಹೋದರೆ ಅಹಿತಕರ ಘಟನೆಗಳು ನಡೆಯುತ್ತವೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಅಧಿಕಾರ ದುರ್ಬಳಿಕೆ : ಬಿಬಿಎಂಪಿ ಅಧಿಕಾರಿಗಳ ಜೊತೆ ಕಾಂಗ್ರೆಸ್ ನ ಸುರ್ಜೆವಾಲಾ ಮೀಟಿಂಗ್!

ಅದರಲ್ಲೂ ಬೆಕ್ಕಿನ ಬಣ್ಣದ ಬಗ್ಗೆಯೂ ಕೆಲ ನಂಬಿಕೆಗಳು ಇವೆ. ಕಪ್ಪು ಬೆಕ್ಕು ಮತ್ತು ಬಿಳಿ ಬೆಕ್ಕು ಮಾರ್ಗವನ್ನು ದಾಟುವುದಕ್ಕೆ ವಿಭಿನ್ನ ಅರ್ಥಗಳನ್ನು ನೀಡಲಾಗಿದೆ. ಅಂದಹಾಗೆ, ಈ ರೀತಿಯಾಗಿ ಬೆಕ್ಕು ಮಾರ್ಗವನ್ನು ದಾಟಿದಾಗ ನಿಲ್ಲುವುದನ್ನು ಅನೇಕರು ಮೂಢನಂಬಿಕೆ ಅಥವಾ ಭ್ರಮೆ ಎಂದು ಪರಿಗಣಿಸುತ್ತಾರೆ. ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣವಿದೆ.

ಬೆಕ್ಕುಗಳ ಬಗ್ಗೆ ವಿವಿಧ ರೀತಿಯ ಪುರಾಣಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿ ಚಾಲ್ತಿಯಲ್ಲಿವೆ. ಕೆಲವೆಡೆ ಬೆಕ್ಕನ್ನು ಮಂಗಳಕರ ಎಂದರೆ, ಮತ್ತೊಂದೆಡೆ ಅಶುಭವೆಂದು ಪರಿಗಣಿಸಲಾಗುತ್ತದೆ.

ಬೆಕ್ಕನ್ನು ಅಶುಭವೆಂದು ಪರಿಗಣಿಸಲು ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಆದರೆ ಕಪ್ಪು ಬೆಕ್ಕನ್ನು ಕೆಟ್ಟ ಶಕುನವೆಂದು ಪರಿಗಣಿಸುವ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ. ಬಿಳಿ ಬೆಕ್ಕಿನ ಬಗ್ಗೆ ಶಕುನಗಳು ಮತ್ತು ಕೆಟ್ಟ ಶಕುನಗಳು ಪ್ರಚಲಿತದಲ್ಲಿವೆ. ರಸ್ತೆ ದಾಟುವಾಗ ನಿಲ್ಲುವ ವಿಷಯಕ್ಕೆ ಸಂಬಂಧಿಸಿದಂತೆ, ಈ ಸಂಪ್ರದಾಯವನ್ನು ರಾತ್ರಿಯ ಸಮಯಕ್ಕೆ ಪ್ರಾರಂಭಿಸಲಾಗಿದೆ. ನಿಜ ಹೇಳಬೇಕೆಂದರೆ ಹಿಂದಿನ ಕಾಲದಲ್ಲಿ ಕರೆಂಟು ಇರುತ್ತಿರಲಿಲ್ಲ. ಆ ಸಮಯದಲ್ಲಿ ದಾರಿಯಲ್ಲಿ ಯಾವುದಾದರೂ ಸದ್ದು ಬಂದಾಗ ಜನರು ನಿಲ್ಲುತ್ತಿದ್ದರು. ಇದರಿಂದ ಕಾಡುಪ್ರಾಣಿಗಳು ರಸ್ತೆ ದಾಟಿದರೆ ಆರಾಮವಾಗಿ ರಸ್ತೆ ದಾಟಬಹುದಿತ್ತು. ಅವುಗಳು ನಮಗೆ ಹಾನಿ ಮಾಡಬಾರದು ಮತ್ತು ನಮ್ಮಿಂದ ಅವುಗಳಿಗೆ ಹಾನಿಯಾಗಬಾರದು ಎಂಬ ಉದ್ದೇಶ ಅಲ್ಲಿತ್ತು. ಕ್ರಮೇಣ ಈ ಸಂಪ್ರದಾಯವು ಕಪ್ಪು ಬೆಕ್ಕಿಗೆ ಅಪಶಕುನ, ಮೂಢನಂಬಿಕೆಗೆ ಸಂಪರ್ಕ ಪಡೆದುಕೊಂಡಿತು.

ಬೆಕ್ಕು ಅಡ್ಡ ಬಂದಾಗ ನಿಲ್ಲಬೇಕು ಎಂಬ ಮೂಢನಂಬಿಕೆಯ ಬಗ್ಗೆ ಮಾತನಾಡುವುದಾದರೆ, ಈ ಪ್ರವೃತ್ತಿಯ ಪ್ರಾರಂಭದ ಹಿಂದೆ ವಿಶೇಷ ಕಾರಣವಿದೆ. ದಶಕಗಳ ಹಿಂದೆ ಇಲಿಗಳ ಪ್ರೇರಿತ ಆರೋಗ್ಯ ಸಮಸ್ಯೆ ಪ್ಲೇಗ್ ರೋಗವು ಹೆಚ್ಚಾಗಿ ಹರಡಿತು. ಈ ಸಾಂಕ್ರಾಮಿಕ ರೋಗದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದರು. ಬೆಕ್ಕಿನ ಮುಖ್ಯ ಆಹಾರ ಇಲಿ. ಇಂತಹ ಪರಿಸ್ಥಿತಿಯಲ್ಲಿ ಬೆಕ್ಕಿನ ಮೂಲಕ ಜನರಲ್ಲಿ ಈ ಸೋಂಕು ಹರಡುವ ಸಾಧ್ಯತೆ ಇತ್ತು. ಇದೇ ಕಾರಣದಿಂದ ಬೆಕ್ಕಿನಿಂದ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಯಿತು. ಬೆಕ್ಕು ಹೊರ ಬರುತ್ತಿದ್ದ ಜಾಗದಲ್ಲಿ ಸೋಂಕು ರೋಗಾಣುಗಳು ಹರಡುವ ಸಾಧ್ಯತೆ ಇದ್ದು, ಆ ಜಾಗಕ್ಕೆ ಜನ ಸ್ವಲ್ಪ ಹೊತ್ತು ಹೋಗುವುದನ್ನು ನಿರಾಕರಿಸಿದ್ದರು.

ಇದನ್ನೂ ಓದಿ: ಬುಧನ ಶ್ರೀರಕ್ಷೆಯಿಂದ ಈ ರಾಶಿಯವರ ಹಣೆಬರಹವೇ ಚೇಂಜ್: ಅದೃಷ್ಟ-ಧನಸಂಪತ್ತು ಜೀವನದಲ್ಲಿ ಮೇಳೈಸುವುದು!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Trending News