ನವದೆಹಲಿ: ಹೋಳಿ ಬಣ್ಣಗಳ ಹಬ್ಬ. ಈ ವರ್ಷ ಇದೇ ಮಾರ್ಚ್ 28ರ ಭಾನುವಾರ ಸಂಜೆ ಹೋಳಿಕಾ ದಹನ್ ನಡೆಯಲಿದೆ ಮತ್ತು ಮರುದಿನ ಮಾರ್ಚ್ 29 ರಂದು ರಂಗಿನ ಹಬ್ಬ ಹೋಳಿ ಆಚರಣೆ ನಡೆಯಲಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿವರ್ಷ ಫಾಲ್ಗುಣ ಹುಣ್ಣಿಮೆಯಂದು ಹೋಳಿಕಾ ದಹನ್ ಜರುಗುತ್ತದೆ. ಸಾಮಾನ್ಯವಾಗಿ ಹೋಳಿ ಎಂದರೆ ಎಲ್ಲರಿಗೂ ನೆನಪಾಗುವುದು ಬಣ್ಣಗಳ ಓಕುಳಿ. ಆದರೆ ಇದರ ಹೊರತಾಗಿ ಧಾರ್ಮಿಕ ದೃಷ್ಟಿಕೋನದಿಂದಲೂ ಹೋಳಿ ಹಬ್ಬವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಹೋಳಿ ದಿನದಂದು ಹನುಮನನ್ನು ಪೂಜಿಸುವ ಮೂಲಕ ನಮ್ಮ ಕಷ್ಟ ಕಾರ್ಪಣ್ಯಗಳಿಂದ ಹೊರಬರಬಹುದು ಎಂಬ ನಂಬಿಕೆಯೂ ಇದೆ.
ಹೋಳಿಯ ಹಿಂದಿನ ರಾತ್ರಿ ಹನುಮನ (Hanuman) ಪೂಜೆಗೆ ಪ್ರಶಸ್ತವಾದ ದಿನ ಎಂದು ಹೇಳಲಾಗುತ್ತದೆ. ಹೋಳಿಯ ಹಿಂದಿನ ದಿನ ಹೋಳಿಕಾ ದಹನ್ ನಡೆಸಲಾಗುತ್ತದೆ. ಅಂದಿನ ರಾತ್ರಿ ಹನುಮನ ಪೂಜೆ ಮಾಡುವುದರಿಂದ ನಮ್ಮ ಎಲ್ಲಾ ರೀತಿಯ ತೊಂದರೆಗಳಿಂದ ಹೊರಬರಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ - ಮಂಗಳವಾರ ಯಾಕೆ ಮಾರುತಿ ಪೂಜೆ ಮಾಡಬೇಕು? ಇಲ್ಲಿದೆ ಮಾಹಿತಿ
ಈ ರೀತಿ ಪೂಜಿಸಿ ಹನುಮನ ಕೃಪೆಗೆ ಪಾತ್ರರಾಗಿ:
1. ಹೋಲಿಕಾ ದಹನ್ ರಾತ್ರಿ ಸ್ನಾನ ಮಾಡಿ ನಂತರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಅಥವಾ ಮನೆಯಲ್ಲಿ ಹನುಮಾನ್ ಜಿ ಅವರ ವಿಗ್ರಹ ಅಥವಾ ಫೋಟೋ ಇಟ್ಟು ಪೂಜೆ ಮಾಡಿ.
2. ಹನುಮಾನಿಗೆ ಸಿಂಧೂರ, ಮಲ್ಲಿಗೆ ಎಣ್ಣೆ, ಹೂವಿನ ಹಾರ, ಪ್ರಸಾದವನ್ನು ಅರ್ಪಿಸಿ.
ಇದನ್ನೂ ಓದಿ - Holi Special: ನಿಮ್ಮ ಪ್ರೀತಿಪಾತ್ರರಿಗೆ ಬಣ್ಣ ಹಚ್ಚುವ ಮೊದಲು ಅದರ ಮಹತ್ವ ತಿಳಿಯಿರಿ
3. ಇದರ ನಂತರ ವಿಧಿ-ವಿಧಾನಗಳ ಪ್ರಕಾರ ಹನುಮನನ್ನು ನಿಷ್ಠೆಯಿಂದ ಪೂಜಿಸಿ.
4. ಹೋಳಿ (Holi) ರಾತ್ರಿಯಲ್ಲಿ ಹನುಮಾನ್ ಚಾಲಿಸಾ ಜಪಿಸುವುದನ್ನು ಸಹ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಪೂಜೆಯ ಬಳಿಕ ಹನುಮಾನ್ ಚಾಲಿಸಾ ಪಠಿಸಿ, ನಂತರ ಆರತಿ ಬೆಳಗಿಸಿ.
ನಿಷ್ಠೆಯಿಂದ ಈ ರೀತಿ ಹನುಮನನ್ನು ಆರಾಧಿಸಿದರೆ ನಿಮ್ಮ ಸಂಕಷ್ಟಗಳು ಪರಿಹಾರವಾಗುತ್ತವೆ ಎಂದು ಹೇಳಲಾಗುತ್ತದೆ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.