Holi Special: ನಿಮ್ಮ ಪ್ರೀತಿಪಾತ್ರರಿಗೆ ಬಣ್ಣ ಹಚ್ಚುವ ಮೊದಲು ಅದರ ಮಹತ್ವ ತಿಳಿಯಿರಿ

ಬಣ್ಣಗಳ ಹಬ್ಬ ಹೋಳಿ ಆಚರಣೆಗೂ ಮೊದಲು ಯಾವ ಬಣ್ಣವು ಯಾವುದರ ಸಂಕೇತವಾಗಿದೆ. ಅದರ ಮಹತ್ವವೇನು ಎಂದು ತಿಳಿಯೋಣ...

Written by - Yashaswini V | Last Updated : Mar 26, 2021, 02:34 PM IST
  • ಬಣ್ಣಗಳ ಪೈಕಿ, ಎಲ್ಲರ ಮೊದಲ ಆಯ್ಕೆ ಕೆಂಪು. ಈ ಬಣ್ಣವು ಶುಭದ ಸಂಕೇತವಾಗಿದೆ
  • ಹಳದಿ ಬಣ್ಣವನ್ನು ಮೊದಲಿನಿಂದಲೂ ಸ್ನೇಹ ಮತ್ತು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ
  • ಕೇಸರಿ ಬಣ್ಣವು ಹರ್ಷಚಿತ್ತತೆ ಮತ್ತು ಸಾಮಾಜಿಕ ಕಾಳಜಿಯ ಸಂಕೇತವಾಗಿದೆ
Holi Special: ನಿಮ್ಮ ಪ್ರೀತಿಪಾತ್ರರಿಗೆ ಬಣ್ಣ ಹಚ್ಚುವ ಮೊದಲು ಅದರ ಮಹತ್ವ ತಿಳಿಯಿರಿ title=
Know the importance of colors

ಬೆಂಗಳೂರು : ಹೋಳಿ ಎಂದರೆ ಬಣ್ಣಗಳ ಹಬ್ಬ. ಒಂದೊಮ್ಮೆ ನಮ್ಮ ಜೀವನದಲ್ಲಿ ಬಣ್ಣಗಳೇ ಇಲ್ಲದಿದ್ದರೆ ಹೇಗಿರುತ್ತಿತ್ತು?  ಬಹುಶಃ ನಾವು ಅಂತಹ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜೀವನ ಬಣ್ಣಮಯವಾಗಿರಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಜೀವನದಲ್ಲಿ ವಿಭಿನ್ನ ಬಣ್ಣಗಳಿದ್ದರೆ ಜೀವನವು ತುಂಬಾ ಸುಂದರವಾಗಿರುತ್ತದೆ. ಬನ್ನಿ ಬಣ್ಣಗಳ ಹಬ್ಬ ಹೋಳಿ ಆಚರಣೆಗೂ ಮೊದಲು ಯಾವ ಬಣ್ಣವು ಯಾವುದರ ಸಂಕೇತವಾಗಿದೆ. ಅದರ ಮಹತ್ವವೇನು  ಎಂದು ತಿಳಿಯೋಣ...

ಕೆಂಪು ಬಣ್ಣ: 

ಬಣ್ಣಗಳ ಪೈಕಿ, ಎಲ್ಲರ ಮೊದಲ ಆಯ್ಕೆ ಕೆಂಪು. ಈ ಬಣ್ಣವು ಶುಭದ ಸಂಕೇತವಾಗಿದೆ ಮತ್ತು ಭರವಸೆಯ ಕಿರಣವನ್ನು ಹುಟ್ಟುಹಾಕುತ್ತದೆ. ಕೆಂಪು ಬಣ್ಣವನ್ನು ಶಕ್ತಿ, ಉತ್ಸಾಹ, ಮಹತ್ವಾಕಾಂಕ್ಷೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಂಪು ಬಣ್ಣವನ್ನು ಯಾವಾಗಲೂ ಶುಭ ಕೆಲಸಗಳಲ್ಲಿ ಬಳಸಲಾಗುತ್ತದೆ. ಆದರೆ ನಿಜವಾಗಿಯೂ ಕೆಂಪು ಬಣ್ಣವು ರಕ್ಷಕನ ಪಾತ್ರವನ್ನು ವಹಿಸುತ್ತದೆ.  

ಹಳದಿ ಬಣ್ಣ: 

ಹಳದಿ ಬಣ್ಣವನ್ನು ಮೊದಲಿನಿಂದಲೂ ಸ್ನೇಹ ಮತ್ತು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಮ್ಮ ಸ್ನೇಹಿತರಿಗೆ ಬಣ್ಣ ಹಚ್ಚುವ ಬಗ್ಗೆ ನಾವು ಯೋಚಿಸಿದಾಗಲೆಲ್ಲಾ ಮೊದಲಿಗೆ ನೆನಪಾಗುವುದು ಹಳದಿ ಬಣ್ಣ. ಹೋಳಿ (Holi) ಚದುರಿದ ಸಂಬಂಧಗಳನ್ನು ಒಂದುಗೂಡಿಸುವ ಹಬ್ಬ. ಅದರ ಬಣ್ಣಗಳು ನಿಕಟ ಸಂಬಂಧಿಗಳಿಗೆ ಇನ್ನಷ್ಟು ಪ್ರೀತಿಯನ್ನು ನೀಡುತ್ತದೆ. ಹಳದಿ ಬಣ್ಣವು ಸಖಾ ಭಾವವನ್ನು ಸೂಚಿಸುತ್ತದೆ. ಹಳದಿ ಬಣ್ಣವನ್ನು ಗುಣಪಡಿಸುವುದು, ಶಾಂತಿ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಬಣ್ಣವು ಮಾನವನ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹಳದಿ ಬಣ್ಣ ದೇವತೆಗಳ ಅಚ್ಚುಮೆಚ್ಚಿನ ಬಣ್ಣ ಎಂದೂ ಸಹ ಹೇಳಲಾಗುತ್ತದೆ. 

ಇದನ್ನೂ ಓದಿ - Holi 2021 Skin Care Tips: ಈ ರೀತಿ ಬಣ್ಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಿ

ಕೇಸರಿ ಬಣ್ಣ: 

ಕೇಸರಿ ಬಣ್ಣವು (Colour) ರೋಗ್ಯಕರ ದೇಹ ಮತ್ತು ಮನಸ್ಸನ್ನು ಸಂಕೇತಿಸುತ್ತದೆ. ಇದು ಆಧ್ಯಾತ್ಮಿಕತೆಯ ಸಂಕೇತವಾಗಿದೆ. ಇದು ಧಾರ್ಮಿಕ ಜ್ಞಾನ, ಸಂಯಮ ಮತ್ತು ವೈರಾಗ್ಯವನ್ನು ಸೂಚಿಸುವ ಬಣ್ಣವಾಗಿದೆ. ಇದು ಶುಭ ಸಂಕಲ್ಪದ ಸಂಕೇತವಾಗಿದೆ. ಕೇಸರಿ ಬಣ್ಣವನ್ನು ತ್ಯಾಗದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣವು ರಾಷ್ಟ್ರದ ಬಗ್ಗೆ ಧೈರ್ಯ ಮತ್ತು ನಿಸ್ವಾರ್ಥ ಭಾವನೆಗಳನ್ನು ತೋರಿಸುತ್ತದೆ. 

ಕೇಸರಿ ಬಣ್ಣವು ಹರ್ಷಚಿತ್ತತೆ ಮತ್ತು ಸಾಮಾಜಿಕ ಕಾಳಜಿಯ ಸಂಕೇತವಾಗಿದೆ. ಈ ಬಣ್ಣವು ಮಾನಸಿಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಸಾಮಾಜಿಕ ಸಂಬಂಧಗಳನ್ನು ಸಹ ಬಲಪಡಿಸುತ್ತದೆ. ಕೇಸರಿ ಬೆಂಕಿಯ ಶುದ್ಧ ರೂಪ, ಗೀತೆಯ ಪ್ರಕಾರ, ಬೆಂಕಿ ಎಲ್ಲರನ್ನೂ ಪರಿಶುದ್ಧಗೊಳಿಸುತ್ತದೆ. ಈ ಬಣ್ಣವನ್ನು ಬಳಸುವುದರಿಂದ, ಒಬ್ಬ ವ್ಯಕ್ತಿಯು ಜ್ಞಾನ ಮತ್ತು ಚಿಂತನಶೀಲನಾಗುತ್ತಾನೆ.  

ಇದನ್ನೂ ಓದಿ - Holi 2021: ಹೋಳಿ ದಹನದಲ್ಲಿ ಈ ಮರಗಳನ್ನು ಬಳಸುವುದು ಅಶುಭವೆಂದು ತಿಳಿದಿದೆಯೇ

ಹಸಿರು ಬಣ್ಣ: 

ಹಸಿರು ಬಣ್ಣವು ತಂಪಾದತೆ, ತಾಜಾತನ ಮತ್ತು ಸಕಾರಾತ್ಮಕತೆಯನ್ನು ಸಂಕೇತಿಸುತ್ತದೆ. ಹಸಿರು ಬಣ್ಣವು ಸೊಂಪಾದ ಹಸಿರು ಬಯಲು ಪ್ರದೇಶಗಳು, ಪರ್ವತಗಳು ಮತ್ತು ನದಿಯ ಸಂಕೇತವಾಗಿರುತ್ತದೆ. ಹಸಿರು ಅತ್ಯಂತ ಮುದವಾದ ಬಣ್ಣ. ಅದು ಮನಸ್ಸಿಗೆ ಶಾಂತಿ ನೀಡುತ್ತದೆ. ಹಸಿರು ಆತ್ಮವಿಶ್ವಾಸ, ಸಂತೋಷ ಮತ್ತು ತಂಪನ್ನು ನೀಡುತ್ತದೆ. ಈ ಬಣ್ಣವು ಶ್ರೀಮಂತಿಕೆ ಮತ್ತು ಚಲನಶೀಲತೆಯನ್ನು ಸೂಚಿಸುತ್ತದೆ.  

ನೀಲಿ ಬಣ್ಣ: 

ನೀಲಿ ಬಣ್ಣವನ್ನು ಜೀವನದಲ್ಲಿ ಮೃದುತ್ವ ಮತ್ತು ಪ್ರೀತಿಯೊಂದಿಗೆ ಶೌರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೋವಿಜ್ಞಾನದ ಪ್ರಕಾರ, ನೀಲಿ ಬಣ್ಣವು ಶಕ್ತಿಯ ಸಂಕೇತವಾಗಿದೆ, ನೀಲಿ ಬಣ್ಣದಲ್ಲಿ ವೀರ ಭಾವನೆ. ಘನತೆ ಮತ್ತು ಅಹಂ ಇಲ್ಲದ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಈ ಬಣ್ಣವೂ ಮುಖ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News