Hydrogen Car: ಹೈಡ್ರೋಜನ್ ನಿಂದ ಓಡುವ ಕಾರುಗಳ ಕುರಿತು ಮಹತ್ವದ ಹೇಳಿಕೆ ನೀಡಿದ ಗಡ್ಕರಿ, ಒಂದು ಕೆಜಿಗೆ ಮೈಲೇಜ್ ಎಷ್ಟು ಗೊತ್ತಾ?

Hydrogen Car In India: ಭಾರತದಲ್ಲಿ ಸಾಮಾನ್ಯರಿಗೆ ಹೈಡ್ರೋಜನ್ ಕಾರುಗಳು ಯಾವಾಗ ಲಭ್ಯವಾಗಲಿವೆ ಎಂಬುದರ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮಂಗಳವಾರ ನಡೆದ ಜೀ ಆಟೋ ಅವಾರ್ಡ್ 2022 ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.  

Written by - Nitin Tabib | Last Updated : Nov 1, 2022, 11:16 PM IST
  • ಈ ಕುರಿತು ಮಾತನಾಡಿರುವ ಗಡ್ಕರಿ "ನಾವು ಪುರಸಭೆಯ ತ್ಯಾಜ್ಯದಿಂದ ಹಸಿರು ಇಂಧನವನ್ನು ತಯಾರಿಸಲು ಬಯಸುತ್ತಿದ್ದು,
  • ನಾವು ಇಂಧನವನ್ನು ಆಮದು ಮಾಡಿಕೊಳ್ಳಲು ಬಯಸುತ್ತಿಲ್ಲ, ಅಷ್ಟೇ ಅಲ್ಲ ಅದನ್ನು ರಫ್ತು ಮಾಡಲು ಕೂಡ ಬಯಸುತ್ತಿದ್ದೇವೆ.
Hydrogen Car: ಹೈಡ್ರೋಜನ್ ನಿಂದ ಓಡುವ ಕಾರುಗಳ ಕುರಿತು ಮಹತ್ವದ ಹೇಳಿಕೆ ನೀಡಿದ ಗಡ್ಕರಿ, ಒಂದು ಕೆಜಿಗೆ ಮೈಲೇಜ್ ಎಷ್ಟು ಗೊತ್ತಾ? title=
Nitin Gadkari On Hydrogen Car In India

Hydrogen Car Nitin Gadkari: ಭಾರತದಲ್ಲಿ, ಹೈಡ್ರೋಜನ್ ಇಂಧನದಿಂದ ಓಡುವ ವಾಹನಗಳನ್ನು ನೋಡುವ ಕಾಲ ಸನ್ನಿಹಿತವಾಗಿದೆ. ಭಾರತ ಸರ್ಕಾರವು ಎಲೆಕ್ಟ್ರಿಕ್ ಮತ್ತು ಜೈವಿಕ ಇಂಧನ ವಾಹನಗಳಿಗೆ ನಿರಂತರವಾಗಿ ಒತ್ತು ನೀಡುತ್ತಿದೆ. ಭಾರತದಲ್ಲಿ ಜನಸಾಮಾನ್ಯರಿಗೆ ಹೈಡ್ರೋಜನ್ ಕಾರುಗಳು ಯಾವಾಗ ಲಭ್ಯವಾಗಲಿವೆ ಎಂಬುದರ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದಾರೆ. ಮಂಗಳವಾರ ನಡೆದ ಜೀ ಆಟೋ ಅವಾರ್ಡ್ 2022 ಸಮಾರಂಭದಲ್ಲಿ ಮಾತನಾಡಿರುವ ಅವರು. ಈ ಸಂದರ್ಭದಲ್ಲಿ, ಮಾಲಿನ್ಯಕ್ಕೆ  ದ್ವಿಮುಖ ಚಿಕಿತ್ಸೆಯ ಬಗ್ಗೆಯೂ  ಕೂಡ ಹೇಳಿದ್ದಾರೆ. ಹೈಡ್ರೋಜನ್ ಕಾರುಗಳಲ್ಲಿ ಬಳಸಬಹುದಾದ ಸ್ಟಬಲ್‌ನಿಂದ ಇಂಧನವನ್ನು ತಯಾರಿಸಲಾಗುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ನಿತಿನ್ ಗಡ್ಕರಿ ಅವರು ಭಾರತದ ಮೊದಲ ಹೈಡ್ರೋಜನ್ ಕಾರಿನಲ್ಲಿ ಪರಯಾನಿಸಿದ್ದಾರೆ ಎಂಬುದು ಇಲ್ಲಿ ವಿಶೇಷ.

ವಾಸ್ತವದಲ್ಲಿ, ಹೈಡ್ರೋಜನ್ ಕಾರ್ ಉತ್ಪಾದನೆಯ ಪ್ರಕ್ರಿಯೆ ಇದೀಗ ಭಾರತದಲ್ಲಿ ಆರಂಭಗೊಂಡಿದೆ. ಪ್ರಸ್ತುತ ಭಾರತದಲ್ಲಿ ಹೈಡ್ರೋಜನ್ ಅನ್ನು ಒಟ್ಟು ಮೂರು ವಿಧದಲ್ಲಿ ತಯಾರಿಸಲಾಗುತ್ತಿದೆ. ಕಲ್ಲಿದ್ದಲಿನಿಂದ ತಯಾರಿಸಿದ ಕಪ್ಪು ಹೈಡ್ರೋಜನ್. ಪೆಟ್ರೋಲಿಯಂನಿಂದ ತಯಾರಿಸಲ್ಪಡುವ ಬ್ರೌನ್ ಮತ್ತು ಇದರ ಮೂರನೇ ವಿಧವೆಂದರೆ ಹಸಿರು ಹೈಡ್ರೋಜನ್. ಈ ಹೈಡ್ರೋಜನ್ ಅನ್ನು ಪುರಸಭೆಯ ತ್ಯಾಜ್ಯ, ಕೊಳಚೆ ನೀರು ಅಥವಾ ನೀರಿನಿಂದ ತಯಾರಿಸಬಹುದಾಗಿದೆ.

ಈ ಕುರಿತು ಮಾತನಾಡಿರುವ ಗಡ್ಕರಿ "ನಾವು ಪುರಸಭೆಯ ತ್ಯಾಜ್ಯದಿಂದ ಹಸಿರು ಇಂಧನವನ್ನು ತಯಾರಿಸಲು ಬಯಸುತ್ತಿದ್ದು, ನಾವು ಇಂಧನವನ್ನು ಆಮದು ಮಾಡಿಕೊಳ್ಳಲು ಬಯಸುತ್ತಿಲ್ಲ, ಅಷ್ಟೇ ಅಲ್ಲ ಅದನ್ನು ರಫ್ತು ಮಾಡಲು ಕೂಡ ಬಯಸುತ್ತಿದ್ದೇವೆ. ನಾವು ಕೃಷಿ ತ್ಯಾಜ್ಯದಿಂದ ಶಕ್ತಿಯನ್ನು ತಯಾರಿಸಬಹುದು. ಇದಕ್ಕಾಗಿ ನಮಗೆ ಎಲೆಕ್ಟ್ರೋಲೈಸರ್ ಗಳ ಅಗತ್ಯವಿದ್ದು, ಭಾರತ ವಿಶ್ವದಲ್ಲಿಯೇ ಇದನ್ನು ಅತಿ ಹೆಚ್ಚು ತಯಾರಿಸುತ್ತದೆ. ಅದಕ್ಕೆ 1.25 ರಿಂದ 1.5 ಕೋಟಿಗಳ ವೆಚ್ಚ ತಗುಲುತ್ತದೆ. ಆಮ್ಲಜನಕವನ್ನು ಬೇರ್ಪಡಿಸುವುದು ಮತ್ತು ಹೈಡ್ರೋಜನ್ ಅನ್ನು ತಯಾರಿಸುವುದು ಇದರ ಕೆಲಸವಾಗಿದೆ. ಇದಕ್ಕಾಗಿ ನಮಗೆ ಈಗ ಎಥೆನಾಲ್ ಇಂಧನ ಆಧಾರಿತ ಜನರೇಟರ್ ಅಗತ್ಯವಿದೆ ಮತ್ತು ಕಿರ್ಲೋಸ್ಕರ್ ಕಂಪನಿ ಅದನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ-Bank Latest Update: ಖಾತೆ ತೆರೆಯುವ ಹಾಗೂ ಸಿಮ್ ಪಡೆಯುವ ನಿಯಮಗಳಲ್ಲಿ ಬದಲಾವಣೆ!

ನಿತಿನ್ ಗಡ್ಕರಿ  ಅವರ ಪತ್ನಿಯೂ ಕೂಡ ಒಂದು ಕಾಲದಲ್ಲಿ ತಾವು ನೀರಿನಿಂದ ಇಂಧನ ತಯಾರಿಸಿದ ಕಾರಿನಲ್ಲಿ ಪಯಣಿಸಬಹುದು ಎಂಬುದನ್ನು ನಂಬಿದ್ದರು ಎಂದು ಹೇಳಿದ್ದಾರೆ. ಹೀಗಾಗಿ ಈಗ ಇದರಲ್ಲೇ ಪ್ರಯಾಣಿಸಬೇಕು ಎಂದು ಕೊಂಡಿದ್ದಾರೆ ಎಂದಿದ್ದಾರೆ. ರಸ್ತೆ ಸಾರಿಗೆ ಸಚಿವ ಗಡ್ಕರಿ ಪ್ರಕಾರ, ಭಾರತದಲ್ಲಿ ಒಂದೂವರೆ ಎರಡು ವರ್ಷಗಳಲ್ಲಿ ಜನರು ಹೈಡ್ರೋಜನ್ ಕಾರುಗಳನ್ನು ಓಡಿಸಲು ಸಾಧ್ಯವಾಗಲಿದ್ದು. ಪ್ರತಿ ಕೆಜಿ ಹೈಡ್ರೋಜನ್ ಗೆ 80 ರೂಪಾಯಿ ಸಿಗುವಂತೆ ಮಾಡುವುದು ಅವರ ಪ್ರಯತ್ನವಾಗಿದೆ. 1 ಕೆಜಿ ಹೈಡ್ರೋಜನ್‌ನಲ್ಲಿ ಕಾರು 400 ಕಿಮೀ ಓಡಬಲ್ಲದು ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೊಂದು ಬಿಗ್ ಶಾಕ್, ಸುದ್ದಿ ಓದಿ

ಇದೀಗ ಭಾರತದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬಳಕೆ ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ ಹಲವು ವಾಹನಗಳು ಕಳೆದ ಒಂದರಿಂದ ಒಂದೂವರೆ ವರ್ಷಗಳಿಂದ ವೇಟಿಂಗ್ ನಲ್ಲಿದ್ದು, ಶೀಘ್ರದಲ್ಲೇ ಭಾರತವು ವಾಹನ ಮಾಲಿನ್ಯದಿಂದ ಹೊರಬರುವ ನಿರೀಕ್ಷೆಯಿದೆ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News