Samantha Ruth Prabhu : ನಟಿ ಸಮಂತಾ ರುತ್ ಪ್ರಭು ಅವರು ಒಂದು ಕೈಯಿಂದ ವ್ಯಾಯಾಮ ಮಾಡುತ್ತಿರುವ ವರ್ಕೌಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ತಮ್ಮ ಫಿಟ್‌ನೆಸ್ ತರಬೇತುದಾರನ ಜೊತರಯೂ ಒಂದು ಫೋಟೋವನ್ನು ಸಮಂತಾ ಶೇರ್ ಮಾಡಿದ್ದಾರೆ. ಕಳೆದ ತಿಂಗಳು, ಸಮಂತಾ ಮೈಯೋಸಿಟಿಸ್ ಕಾಯಿಲೆಯ ಬಗ್ಗೆ ಬಹಿರಂಗಪಡಿಸಿದ್ದರು. ಇದಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸಮಂತಾ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತುಂಬಾ ಭಾವುಕರಾಗಿದ್ದರು. ಈದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ರಶ್ಮಿಕಾ ಬೆಂಬಲಕ್ಕೆ ನಿಂತ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ
ಎರಡು ಫೋಟೋಗಳ ಜೊತೆಗೆ ಒಂದು ವಿಡಿಯೋವನ್ನು ಸಮಂತಾ ಹಂಚಿಕೊಂಡಿದ್ದಾರೆ. "ನನ್ನ ನೆಚ್ಚಿನ ಜಿಲೇಬಿ ಪಡೆಯಲು ನಾನು ಸಾಕಷ್ಟು ಶ್ರಮಿಸಬೇಕು ಎಂದು ಎಂದಿಗೂ ಯೋಚಿಸಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ. 'ಯಶೋದಾ' ಸಿನಿಮಾ ಸಕ್ಸಸ್‌ನಲ್ಲಿರುವ ಸಮಂತಾ ಈ ಪೋಸ್ಟ್ ಹಾಕಿದ್ದಾರೆ. ಮಯೋಸೈಟಿಸ್ ಎನ್ನುವ ದೀರ್ಘಕಾಲದ ಸ್ನಾಯು ರೋಗದಿಂದ ಬಳಲುತ್ತಿದ್ದರೂ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಪ್ರಚಾರ ಕೂಡ ಮಾಡಿದ್ದರು ಈ ಟಾಲಿವುಡ್ ಬ್ಯೂಟಿ. ಈ ಮೆಡಿಕಲ್ ಸ್ಕ್ಯಾಮ್ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗುತ್ತಿದ್ದಾರೆ.
ಸಮಂತಾ ಸಾಕಷ್ಟು ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರೆ. ನನ್ನ ನೆಚ್ಚಿನ ಜಿಲೇಬಿ ಪಡೆಯಲು ನಾನು ಸಾಕಷ್ಟು ಶ್ರಮಿಸಬೇಕು ಎಂದು ಎಂದಿಗೂ ಯೋಚಿಸಿರಲಿಲ್ಲ. ಆದರೆ 'ಯಶೋದಾ' ಚಿತ್ರದ ಸಕ್ಸಸ್ ಜೊತೆಗೆ ಅದರಲ್ಲಿರುವ ಆಕ್ಷನ್ ಸೀಕ್ವೆನ್ಸ್ ನೋಡಿ ನನಗೆ ಜಿಲೇಬಿ ತಂದುಕೊಟ್ಟಿದ್ದಾನೆ" ಎಂದು ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಜಿಮ್ ಕೋಚ್ ಜುನೇದ್ ಶೈಕ್ ಸಮಂತಾ ಅವರಿಗೆ ಜಿಲೇಬಿ ತಿನ್ನಲು ಬಿಡುತ್ತಿರಲಿಲ್ಲವಂತೆ. ಆದರೆ 'ಯಶೋದಾ' ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿ ಅವನೇ ಸಮಂತಾ ಅವರಿಗೆ ಜಿಲೇಬಿ ತಂದು ಕೊಟ್ಟಿದ್ದಾನೆ. ಇದರಿಂದ ತುಂಬಾ ಖುಷಿಯಾಗಿದೆ ಎಂದು ಸಮಂತಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ
ಇದನ್ನೂ ಓದಿ : ಶೀಘ್ರದಲ್ಲೇ ಕೆಜಿಎಫ್ 2 ದಾಖಲೆ ಅಳಿಸಲಿದೆ ಕಾಂತಾರ ಸಿನಿಮಾ!
ವರುಣ್ ಧವನ್ ಈ ಪೋಸ್ಟ್‌ಗೆ ಹಾರ್ಟ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. "ನೀವು ನಿರಂತರ ಸ್ಫೂರ್ತಿ" ಎಂದು ನಟಿ ಸಂಯುಕ್ತ ಹೆಗಡೆ ಬರೆದಿದ್ದಾರೆ. ಕೃತಿ ಕರಬಂದಾ ಸಹ ಹೃದಯದ ಎಮೋಜಿಯೊಂದಿಗೆ "ಸ್ಯಾಮ್" ಎಂದು ಬರೆದಿದ್ದಾರೆ. ಹೀಗೆ ಅನೇಕ ಸಿನಿರಂಗದವರು ಸೇರಿದಂತೆ ಅಭಿಮಾನಿಗಳು ಸಮಂತಾ ಅವರ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.