Video Viral: ಗೂಳಿಗಳ ನಡುವೆ ಅಪಾಯಕಾರಿ ಕಾದಾಟ! ಅಡ್ಡ ಸಿಕ್ಕಿದ್ದೆಲ್ಲಾ ಧ್ವಂಸ

Animal Fight Video: ಗೂಳಿಗಳು ಪರಸ್ಪರ ಹೊಡೆದಾಡಿಕೊಂಡ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. ಈ ಗೂಳಿಗಳ ಹೊಡೆದಾಟ ನೋಡಲು ತುಂಬಾ ಭಯಾನಕವಾಗಿದೆ. ಕಾದಾಟ ಭರದಲ್ಲಿ ಮಧ್ಯೆ ಬಂದ ವಸ್ತುಗಳನ್ನೆಲ್ಲ ಅವು ಧ್ವಂಸಗೊಳಿಸುತ್ತಿವೆ. 

Written by - Chetana Devarmani | Last Updated : Nov 14, 2022, 04:59 PM IST
  • ಗೂಳಿಗಳ ನಡುವೆ ಅಪಾಯಕಾರಿ ಕಾದಾಟ
  • ಕಾದಾಟ ಭರದಲ್ಲಿ ಮಧ್ಯೆ ಬಂದ ವಸ್ತುಗಳೆಲ್ಲ ಧ್ವಂಸ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Video Viral: ಗೂಳಿಗಳ ನಡುವೆ ಅಪಾಯಕಾರಿ ಕಾದಾಟ! ಅಡ್ಡ ಸಿಕ್ಕಿದ್ದೆಲ್ಲಾ ಧ್ವಂಸ  title=
ವಿಡಿಯೋ ವೈರಲ್‌

Animal Fight Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ನಡುವಿನ ಕಾದಾಟದ ಅಪಾಯಕಾರಿ ವಿಡಿಯೋಗಳು ಆಗಾಗೆ ವೈರಲ್‌ ಆಗುತ್ತವೆ. ಇವುಗಳಲ್ಲಿ ಹಾವು ಮುಂಗುಸಿ ಮತ್ತು ಸಿಂಹ ಕಾಡೆಮ್ಮೆಗಳ ಕಾಳಗ ನೋಡುಗರ ಗಮನಸೆಳೆಯುತ್ತವೆ. ಇದೀಗ ನಗರವೊಂದರಲ್ಲಿ ನಡೆದ ಎರಡು ಗೂಳಿಗಳ ನಡುವಿನ ಕಾಳ ವೈರಲ್‌ ಆಗಿದೆ. ರಸ್ತೆಯಲ್ಲಿ ಎರಡು ಗೂಳಿಗಳು ಕಾದಾಡುವುದನ್ನು ನೋಡಬಹುದು. ಇದೀಗ ಅಂತಹ ಶಾಕಿಂಗ್ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ. ನೋಡಿದ ಯಾರನ್ನಾದರೂ ಇದು ಬೆಚ್ಚಿಬೀಳಿಸುವಂತಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಬಾರಿ ವೀಕ್ಷಿಸಲಾಗಿದೆ.

ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಮಾರಾಮಾರಿ! ಮುಂದಾಗಿದ್ದನ್ನು ನೋಡಿದ್ರೆ ಎದ್ದುಬಿದ್ದು ನಗ್ತೀರಾ

ವಿಡಿಯೋದಲ್ಲಿ ಎರಡು ಗೂಳಿಗಳು ವಸತಿ ಪ್ರದೇಶದಲ್ಲಿ ಏಕಾಏಕಿ ಎದುರಾಗಿವೆ. ಈ ವೇಳೆ ಎರಡೂ ಬದ್ಧ ವೈರಿಗಳಂತೆ ಕಾದಾಟಕ್ಕೆ ಇಳಿದಿವೆ. ಸಮಾನ ಶಕ್ತಿ ಹೊಂದಿರುವ ಕಾರಣ ಯಾವ ಒಂದು ಗೂಳಿಯೂ ಹಿಮ್ಮೆಟ್ಟಲು ಸಿದ್ಧವಿರಲಿಲ್ಲ. ವಾಸ್ತವವಾಗಿ ಎರಡೂ ಗೂಳಿಗಳು ಕೆಲವೇ ಸೆಕೆಂಡುಗಳಲ್ಲಿ ಪರಸ್ಪರ ಹೊಡೆದಾಟ ಆರಂಭಿಸುತ್ತವೆ. ಆದರೆ ಇವುಗಳ ಅಪಾಯಕಾರಿ ಕಾಳಗದಿಂದ ಸುತ್ತಮುತ್ತಲಿನ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಎರಡೂ ಹೋರಿಗಳು ಜಗಳವಾಡುತ್ತಲೇ ಮನೆಯೊಂದರ ಹತ್ತಿರ ಹೋಗಿ ಎಲ್ಲವನ್ನೂ ನಾಶಪಡಿಸಿದವು. ಇದನ್ನು ನಾವು ವಿಡಿಯೋದಲ್ಲಿ ಕಾಣಬಹುದು.

 

 

ಈ ಘಟನೆ ನಡೆದಿರುವುದು ಎಲ್ಲಿ ಎಂಬುದು ಮಾತ್ರ ಇದುವರೆಗೂ ತಿಳಿದುಬಂದಿಲ್ಲ. ಆದರೆ ನಡು ರಸ್ತೆಯಲ್ಲಿ ನಡೆದ ಗೂಳಿಗಳ ಕಾಳಗ ನೋಡಲು ಮಾತ್ರ ಭಯಾನಕವಾಗಿದೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ animals_powers ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ : ಕುತ್ತಿಗೆಗೆ ಸುತ್ತಿಕೊಂಡು ಜೀವಂತವಾಗಿ ನುಂಗಲು ಆರಂಭಿಸಿದ ಹೆಬ್ಬಾವು! ಮುಂದೇನಾಯ್ತು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News