ಬೆಂಗಳೂರು : ಅಜಾತಶತ್ರು, ಮಾಜಿ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾವನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಯುತ್ತಿದೆ. ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ರವಿ ಜಾಧವ್ ನಿರ್ದೇಶಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಮತ್ತು ಹಿರಿಯ ನಾಯಕ ವಾಜಪೇಯಿ ಅವರ ಜೀವನ ಪ್ರಯಾಣದ ರೋಚಕ ಕಥೆಯಲ್ಲಿ ಅಟಲ್ ಜೀ ಯವರ ಪಾತ್ರದಲ್ಲಿ ನಟ ಪಂಕಜ್ ತ್ರಿಪಾಠಿ ಅಭಿನಯಿಸಲಿದ್ದಾರೆ.
ಹೌದು.. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್ ನಿರ್ಮಾಣವಾಗಲಿದೆ. ಸಿನಿಮಾದಲ್ಲಿ ಅಟಲ್ ಜೀ ಅವರ ಪಾತ್ರದಲ್ಲಿ ಪಂಕಜ್ ತ್ರಿಪಾಟಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಮಾತನಾಡಿರುವ ಪಂಕಜ್, ಇಂತಹ ಮಾನವೀಯ ರಾಜಕಾರಣಿಯನ್ನು ತೆರೆಯ ಮೇಲೆ ತರುತ್ತಿರುವುದು ಗೌರವದ ವಿಚಾರ. ಅವರು ಕೇವಲ ರಾಜಕಾರಣಿಯಾಗಿರಲಿಲ್ಲ ಅತ್ಯುತ್ತಮ ಬರಹಗಾರ ಮತ್ತು ಹೆಸರಾಂತ ಕವಿಯಾಗಿದ್ದರು. ಅವರ ಪಾದದ ಧೂಳಿಗೂ ಸಮಯವಿಲ್ಲದ ನನ್ನಂತಹ ನಟನಿಗೆ ಇದು ಒಂದು ವಿಶೇಷವೇ ಹೊರತು ಬೇರೇನೂ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ: ವಿಕ್ಕಿ ಕೌಶಲ್ 'ಗೋವಿಂದಾ ನಾಮ್ ಮೇರಾ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್..!
ತ್ರಿಪಾಠಿಯಂತಹ ಪ್ರತಿಭಾವಂತ ನಟರ ಜೊತೆ ಅಟಲ್ ಜೀ ಅಂತಹ ಅದ್ಭುತ ನಾಯಕನ ಜೀವನ ಚರಿತ್ರೆಯ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ನನಗೆ ಹೆಮ್ಮೆಯ ವಿಚಾರ. ಇದು ನನಗೆ ಸುವರ್ಣಾವಕಾಶವಾಗಿದೆ. ಅಟಲ್ಜೀಯವರ ಕಥೆಗಿಂತ ಉತ್ತಮವಾದ ಕಥೆಯನ್ನು ನಾನು ಕೇಳಲು ಸಾಧ್ಯವಿಲ್ಲ ಎಂದು ನಿರ್ದೇಶಕ ರವಿ ಜಾಧವ್ ಹೇಳಿದ್ದಾರೆ. ಜಾಧವ್, ಮರಾಠಿ ಚಲನಚಿತ್ರಗಳಾದ "ನಟರಂಗ" ಮತ್ತು "ಬಾಲಗಂಧರ್ವ" ಸಿನಿಮಾಗಳ ಮೂಲಕ ಹೆಸರುವಾಸಿಯಾಗಿದ್ದಾರೆ.
1947 ರಲ್ಲಿ ರಾಷ್ಟ್ರೀಯ ಸೇವಕ ಸಂಘಕ್ಕೆ (RSS) ಸೇರಿದ ವಾಜಪೇಯಿ ಅವರು ಬಿಜೆಪಿಯ ಧೀಮಂತ ವ್ಯಕ್ತಿಯಾಗಲು ಅವರ ಅಪಾರ ಶ್ರಮವಹಿಸಿದ್ದಾರೆ. ಪೂರ್ಣಾವಧಿಯ ಅಧಿಕಾರವನ್ನು ಪೂರ್ಣಗೊಳಿಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಅಟಲ್ ಜೀ ಇತಿಹಾಸ ಸೃಷ್ಟಿಸಿದ್ದಾರೆ. "ATAL" ಅನ್ನು 70MM ಟಾಕೀಸ್ ಸಹಯೋಗದಲ್ಲಿ ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್, ಸ್ಯಾಮ್ ಖಾನ್ ಮತ್ತು ಕಮಲೇಶ್ ಭಾನುಶಾಲಿ ನಿರ್ಮಿಸಿದ್ದಾರೆ ಮತ್ತು ಜೀಶನ್ ಅಹ್ಮದ್ ಮತ್ತು ಶಿವ್ ಶರ್ಮಾ ಸಹ-ನಿರ್ಮಾಣ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.