Virat ಜೊತೆ ಬ್ಯಾಟಿಂಗ್ ಮಾಡಲು SuryaKumarಗೆ 'ಸಮಸ್ಯೆ'! ಎಲ್ಲರ ಮುಂದೆ SKY ಹೇಳಿದ್ದೇನು?

Suryakumar Yadav on Virat Kohli:  ಮೌಂಟ್ ಮೌಂಗನುಯಿಯ ಬೇ-ಓವಲ್ ಮೈದಾನದಲ್ಲಿ ನಡೆದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಆಗ ಭಾರತದ ಸ್ಕೋರ್ ಒಂದು ವಿಕೆಟ್ ಗೆ 36 ರನ್ ಆಗಿತ್ತು. ಸೂರ್ಯ ಮೈದಾನದ ಎಲ್ಲಾ ಕಡೆ ಶಾಟ್ ಬಾರಿಸಿ ಟೀಂ ಇಂಡಿಯಾ ಸ್ಕೋರ್ ಅನ್ನು 6 ವಿಕೆಟ್ ಗೆ 191ಕ್ಕೆ ಕೊಂಡೊಯ್ದರು.

Written by - Bhavishya Shetty | Last Updated : Nov 21, 2022, 07:38 AM IST
    • ಸೂರ್ಯ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು
    • ಪಂದ್ಯದ ಬಳಿಕ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ
    • ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು
Virat ಜೊತೆ ಬ್ಯಾಟಿಂಗ್ ಮಾಡಲು SuryaKumarಗೆ 'ಸಮಸ್ಯೆ'! ಎಲ್ಲರ ಮುಂದೆ SKY ಹೇಳಿದ್ದೇನು? title=
virat kohli

Suryakumar Yadav on Virat Kohli: ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯ ಎರಡನೇ T20 ಪಂದ್ಯದಲ್ಲಿ (IND vs NZ 2nd T20) ಶತಕ ಗಳಿಸಿದರು. ವಿಶೇಷವೆಂದರೆ ಕೊನೆಯಲ್ಲಿ ರನ್ ಗಳಿಸಿದಷ್ಟು ವೇಗವಾಗಿ ಇನಿಂಗ್ಸ್ ಆರಂಭಿಸಲಿಲ್ಲ. ಈ ವೇಳೆ ಸೂರ್ಯ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಪಂದ್ಯದ ಬಳಿಕ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡಿದ್ದಾರೆ. ಈ ಸರಣಿಯಿಂದ ವಿರಾಟ್‌ಗೆ ವಿಶ್ರಾಂತಿ ನೀಡಲಾಗಿದೆ.

ಇದನ್ನೂ ಓದಿ: Hardik Pandya : ಸೂರ್ಯಕುಮಾರ್ ಯಾದವ್'ನನ್ನು ಹಾಡಿಹೊಗಳಿದ ಕ್ಯಾಪ್ಟನ್ ಪಾಂಡ್ಯ

ಮೌಂಟ್ ಮೌಂಗನುಯಿಯ ಬೇ-ಓವಲ್ ಮೈದಾನದಲ್ಲಿ ನಡೆದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಆಗ ಭಾರತದ ಸ್ಕೋರ್ ಒಂದು ವಿಕೆಟ್ ಗೆ 36 ರನ್ ಆಗಿತ್ತು. ಸೂರ್ಯ ಮೈದಾನದ ಎಲ್ಲಾ ಕಡೆ ಶಾಟ್ ಬಾರಿಸಿ ಟೀಂ ಇಂಡಿಯಾ ಸ್ಕೋರ್ ಅನ್ನು 6 ವಿಕೆಟ್ ಗೆ 191ಕ್ಕೆ ಕೊಂಡೊಯ್ದರು. ಸೂರ್ಯಕುಮಾರ್ 51 ಎಸೆತಗಳಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳ ಅಜೇಯ ಇನ್ನಿಂಗ್ಸ್‌ನಲ್ಲಿ 111 ರನ್ ಗಳಿಸಿದರು. ಪ್ಲೇಯರ್ ಆಫ್ ದಿ ಮ್ಯಾಚ್ ಆಗಿಯೂ ಗುರುತಿಸಿಕೊಂಡರು. ಅವರು ತಮ್ಮ ಮೊದಲ 50 ರನ್‌ಗಳಿಗೆ 32 ಎಸೆತಗಳನ್ನು ಆಡಿದ್ದು, ಮುಂದಿನ 50 ರನ್ ಗಳಿಸಲು ಕೇವಲ 17 ಎಸೆತಗಳನ್ನು ಎದುರಿಸಿದರು.

ಇನ್ನು ಮುಂಬೈನ ನಿವಾಸಿ ಸೂರ್ಯಕುಮಾರ್ ಅವರು ವಿಜಯದ ನಂತರ ವಿರಾಟ್ ಅವರ ಫಿಟ್ನೆಸ್ ಅನ್ನು ಶ್ಲಾಘಿಸಿದ್ದಾರೆ. ಅವರು, 'ಇತ್ತೀಚೆಗೆ ನಾವು ಒಟ್ಟಿಗೆ ಕೆಲವು ಪಂದ್ಯಗಳನ್ನು ಆಡಿದ್ದೇವೆ. ನಾವಿಬ್ಬರೂ ಉತ್ತಮ ಜೊತೆಯಾಟವನ್ನು ಹೊಂದಿದ್ದೇವೆ. ಅವರೊಂದಿಗೆ ಬ್ಯಾಟಿಂಗ್ ಮಾಡುವುದನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆ. ಆದರೆ ಅವರ ಜೊತೆ ಬ್ಯಾಟಿಂಗ್ ಮಾಡುವಾಗ ತಿಳಿದುಕೊಳ್ಳಬೇಕಾದ ಒಂದು ವಿಷಯವಿದೆ. ಏಕೆಂದರೆ ಅವರು ತುಂಬಾ ಫಿಟ್ ಆಗಿದ್ದಾರೆ. ವಾಸ್ತವವಾಗಿ, ವಿಕೆಟ್‌ಗಳ ನಡುವಿನ ಓಟದ ವಿಷಯದಲ್ಲಿ ವಿರಾಟ್‌ರನ್ನು ಹೊಂದಿಸುವುದು ತುಂಬಾ ಕಷ್ಟ” ಎಂದರು.

ಇದನ್ನೂ ಓದಿ: ಸೂರ್ಯನಿಗೆ ಸೂರ್ಯನೇ ಸಾಟಿ: ಮತ್ತೊಂದು ಶತಕ ಬಾರಿಸಿ ದಾಖಲೆ...! 

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿದೆ. ಬೇ-ಓವಲ್ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್‌ಗೆ 191 ರನ್ ಗಳಿಸಿತು. ನಂತರ ಆತಿಥೇಯರು 18.5 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ದೀಪಕ್ ಹೂಡಾ ಸಾಕಷ್ಟು ಪ್ರಭಾವ ಬೀರಿದ್ದಾರೆ. 2.5 ಓವರ್ ಗಳಲ್ಲಿ 10 ರನ್ ನೀಡಿ 4 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಯುಜ್ವೇಂದ್ರ ಚಹಾಲ್ 2-2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು. ಈ ಪಂದ್ಯವನ್ನು ಭಾರತ 65 ರನ್‌ಗಳಿಂದ ಗೆದ್ದುಕೊಂಡಿತು. ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯ ನವೆಂಬರ್ 22 ರಂದು ನೇಪಿಯರ್‌ನಲ್ಲಿ ನಡೆಯಲಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News