Rasna founder passes away: "ಐ ಲವ್ ಯು ರಸ್ನಾ" ಬ್ರ್ಯಾಂಡ್‌ ಆಗಿದ್ದು ಹೇಗೆ?

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಸ್ನಾದ ಸಂಸ್ಥಾಪಕ ಅಧ್ಯಕ್ಷ ಅರೀಜ್ ಪಿರೋಜ್‌ ಶಾ ಖಂಬಟ್ಟಾ ಅಹಮದಾಬಾದ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕಂಪನಿ ಸೋಮವಾರ ತಿಳಿಸಿದೆ.

Written by - Puttaraj K Alur | Last Updated : Nov 22, 2022, 02:09 PM IST
  • ಜನಪ್ರಿಯ ಪಾನೀಯ ‘ರಸ್ನಾ’ದ ಸಂಸ್ಥಾಪಕ ಅಧ್ಯಕ್ಷ ಅರೀಜ್ ಪಿರೋಜ್‌ ಶಾ ಖಂಬಟ್ಟಾ ನಿಧನ
  • ಅಹಮದಾಬಾದ್‌ನಲ್ಲಿ ಹೃದಯಾಘಾತದಿಂದ ನಿಧನರಾದ ಅವರಿಗೆ 85 ವರ್ಷ ವಯಸ್ಸಾಗಿತ್ತು
  • ಮಕ್ಕಳಿಂದ ಹಿಡಿದು ವಯೋವೃದ್ಧರೂ ಇಷ್ಟಪಡುತ್ತಿದ್ದ ‘ರಸ್ನಾ’ ಬ್ರ್ಯಾಂಡ್ ಕಟ್ಟಿದ್ದ ಉದ್ಯಾಮಿ
Rasna founder passes away: "ಐ ಲವ್ ಯು ರಸ್ನಾ" ಬ್ರ್ಯಾಂಡ್‌ ಆಗಿದ್ದು ಹೇಗೆ? title=
‘ರಸ್ನಾ’ದ ಸಂಸ್ಥಾಪಕ ಅಧ್ಯಕ್ಷ ನಿಧನ

ನವದೆಹಲಿ: ಜನಪ್ರಿಯ ಪಾನೀಯ ‘ರಸ್ನಾ’ದ ಸಂಸ್ಥಾಪಕ ಅಧ್ಯಕ್ಷ ಅರೀಜ್ ಪಿರೋಜ್‌ ಶಾ ಖಂಬಟ್ಟಾ ಹೃದಯಾಘಾತದಿಂದ ಅಹಮದಾಬಾದ್‌ನಲ್ಲಿ ನಿಧನರಾದರು ಎಂದು ವರದಿಯಾಗಿದೆ.  

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 85 ವರ್ಷದ ಕೈಗಾರಿಕೋದ್ಯಮಿ ನ.19ರಂದು ಕೊನೆಯುಸಿರೆಳೆದರು ಎಂದು ಸ್ವತಃ ಅವರ ಕಂಪನಿಯೇ ಮಾಹಿತಿ ನೀಡಿದೆ. ಅರೀಜ್ ಅವರು ಪತ್ನಿ ಪರ್ಸಿಸ್ ಮತ್ತು ಮಕ್ಕಳಾದ ಪಿರುಜ್, ಡೆಲ್ನಾ ಮತ್ತು ರುಜಾನ್ , ಸೊಸೆ ಬಿನೈಶಾ ಮತ್ತು ಮೊಮ್ಮಕ್ಕಳಾದ ಅರ್ಜೀನ್, ಅರ್ಜಾದ್, ಅವನ್, ಅರೀಜ್, ಫಿರೋಜಾ ಮತ್ತು ಅರ್ನಾವಾಜ್ ಅವರನ್ನು ಅಗಲಿದ್ದಾರೆ.

ಇದನ್ನೂ ಓದಿ: Ration Card: ರೇಷನ್ ಕಾರ್ಡ್ ಹೊಂದಿರುವವರಿಗೆ ಕಹಿ ಸುದ್ದಿ: ಇನ್ಮುಂದೆ ಆ ಎಲ್ಲಾ ಕಾರ್ಡ್ ಗಳು ರದ್ದು!

ದಶಕಗಳ ಹಿಂದೆ ಅರೀಜ್ ಅವರ ತಂದೆ ಫಿರೋಜಾ ಖಂಬಟ್ಟಾ ಸಣ್ಣದಾಗಿ ವ್ಯಾಪಾರ ಪ್ರಾರಂಭಿಸಿದ್ದರು. ಆದರೆ ಈ ವ್ಯಾಪಾರವನ್ನು ಉನ್ನತಮಟ್ಟಕ್ಕೆ ಏರಿಸಿದ ಕೀರ್ತಿ ಆರೀಜ್ ಅವರದ್ದು. ಸುಮಾರು 60ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವ ಹೊಂದಿರುವ ವಿಶ್ವದ ಅತಿದೊಡ್ಡ ಕೇಂದ್ರೀಕೃತ ರಸ್ನಾ ಪಾನೀಯ ತಯಾರಕರಾಗಿ ಅವರು ದಾಖಲೆ ನಿರ್ಮಿಸಿದ್ದಾರೆ. 1970ರ ದಶಕದಲ್ಲಿ ಹೆಚ್ಚಿನ ವೆಚ್ಚದಲ್ಲಿ ಮಾರಾಟವಾಗುವ ತಂಪು ಪಾನೀಯ ಉತ್ಪನ್ನಗಳಿಗೆ ಪರ್ಯಾಯವಾಗಿ ಕೈಗೆಟುಕುವ ದರದಲ್ಲಿ ರಸ್ನಾದ ತಂಪು ಪಾನೀಯ ಪ್ಯಾಕ್‌ಗಳನ್ನು ರೂಪಿಸಿದರು. ಇದು ದೇಶದಲ್ಲಿ 1.8 ಮಿಲಿಯನ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟವಾದ ದಾಖಲೆ ಹೊಂದಿದೆ.

ಈಗ ವಿಶ್ವದ ಅತಿದೊಡ್ಡ ಪಾನೀಯ ತಯಾರಿಕ ಕಂಪನಿಯಾಗಿ ಗುರುತಿಸಿಕೊಂಡಿರುವ ರಸ್ನಾ ಜನರ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. 80 ಮತ್ತು 90ರ ದಶಕದಲ್ಲಿ ಬ್ರ್ಯಾಂಡ್‌ನ ‘ಐ ಲವ್ ಯು ರಸ್ನಾ’ ಅಭಿಯಾನವು ಇನ್ನೂ ಸಹ ಜನರ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿದೆ. 5 ರೂ. ಬೆಲೆಯ ರಸ್ನಾ ಪ್ಯಾಕ್‍ನಲ್ಲಿ 32 ಗ್ಲಾಸ್ ಜ್ಯೂಸ್ ತಯಾರಿಸಬಹುದಿತ್ತು. ಪ್ರತಿ ಗ್ಲಾಸ್‍ ಜ್ಯೂಸ್‍ಗೆ ಕೇವಲ 15 ಪೈಸೆ ವೆಚ್ಚವಾಗುತ್ತಿತ್ತು.

ಇದನ್ನೂ ಓದಿ: FIFA World Cup ವೀಕ್ಷಿಸಲೆಂದು 23 ಲಕ್ಷದ ಮನೆ ಖರೀದಿಸಿದ ಕೇರಳದ 17 ಯುವಕರು!

ಮನೆಗೆ ಯಾರಾದರೂ ಅತಿಥಿಗಳು ಬಂದರೆ ಸತ್ಕರಿಸಲು ರಸ್ನಾ ಜ್ಯೂಸ್‍ ನೀಡಲಾಗುತ್ತಿತ್ತು. ರಸ್ನಾ ದೇಶದಲ್ಲಿ 9 ಉತ್ಪಾದನಾ ಘಟಕಗಳನ್ನು ಹೊಂದಿದೆ. ಭಾರತದಾದ್ಯಂತ 26 ಡಿಪೋಗಳೊಂದಿಗೆ ಬಲವಾದ ವಿತರಣಾ ಜಾಲವನ್ನು ಹೊಂದಿದೆ. 200 ಸೂಪರ್ ಸ್ಟಾಕಿಸ್ಟ್‌ಗಳು, 5,000 ಸ್ಟಾಕಿಸ್ಟ್‌ಗಳು ಮತ್ತು 900 ಸೇಲ್ಸ್‌ಫೋರ್ಸ್ 1.6 ಮಿಲಿಯನ್ ಔಟ್‌ಲೆಟ್‌ಗಳನ್ನು ಒಳಗೊಂಡಿದೆ. ಗುಣಮಟ್ಟದಲ್ಲಿ ರಾಜಿಯಾಗದ ರಸ್ನಾ ಕಂಪನಿಗೆ ಅನೇಕ ಪ್ರಶಸ್ತಿಗಳು ದೊರೆತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News