FIFA World Cup ವೀಕ್ಷಿಸಲೆಂದು 23 ಲಕ್ಷದ ಮನೆ ಖರೀದಿಸಿದ ಕೇರಳದ 17 ಯುವಕರು!

Kerala Boys Buy Home: ವಾಸ್ತವವಾಗಿ, ಪ್ರಪಂಚದಾದ್ಯಂತದ ವೀಕ್ಷಕರು FIFA ವಿಶ್ವಕಪ್ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಇದೇ ವಿಚಾರದಲ್ಲಿ ಕೇರಳದಲ್ಲಿ ಒಂದು ಘಟನೆ ಮುನ್ನೆಲೆಗೆ ಬಂದಿದೆ. ಸುದ್ದಿ ಮಾಧ್ಯಮ ಸಂಸ್ಥೆಯೊಂದು ಫೋಟೋ ಶೇರ್ ಮಾಡಿದ್ದು, ಅದರಲ್ಲಿರುವ ಯುವಕರು ಫುಟ್ ಬಾಲ್ ವೀಕ್ಷಿಸಲು ಎಷ್ಟು ಉತ್ಸುಕರಾಗಿದ್ದಾರೆಂದು ತೋರುತ್ತದೆ.

Written by - Bhavishya Shetty | Last Updated : Nov 21, 2022, 04:45 PM IST
    • ಫುಟ್ಬಾಲ್ ವಿಶ್ವಕಪ್ ಕತಾರ್‌ನಲ್ಲಿ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಪ್ರಾರಂಭವಾಗಿದೆ
    • ಹುಡುಗರ ಗುಂಪು ಪಂದ್ಯಗಳನ್ನು ವೀಕ್ಷಿಸಲು 23 ಲಕ್ಷ ರೂಪಾಯಿ ಖರ್ಚು ಮಾಡಿದೆ
    • 17 ಯುವಕರು 23 ಲಕ್ಷ ರೂ. ಖರ್ಚು ಮಾಡಿ ಮನೆಯೊಂದನ್ನು ಖರೀದಿಸಿದ್ದಾರೆ
FIFA World Cup ವೀಕ್ಷಿಸಲೆಂದು 23 ಲಕ್ಷದ ಮನೆ ಖರೀದಿಸಿದ ಕೇರಳದ 17 ಯುವಕರು!  title=
fifa world cup

Kerala Boys Buy Home: ಫುಟ್ಬಾಲ್ ವಿಶ್ವಕಪ್ ಆರಂಭವಾಗಿದೆ. ವಿಶ್ವದ ಅತಿದೊಡ್ಡ ಕ್ರೀಡಾ ಪಂದ್ಯಾವಳಿ ಎಂದು ಕರೆಯಲ್ಪಡುವ ಫುಟ್ಬಾಲ್ ವಿಶ್ವಕಪ್ ಕತಾರ್‌ನಲ್ಲಿ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಪ್ರಾರಂಭವಾಗಿದೆ. ಭಾರತದಲ್ಲಿಯೂ ಫುಟ್ಬಾಲ್ ವಿಶ್ವಕಪ್‌ಗೆ ಅಭಿಮಾನಿಗಳ ಕೊರತೆ ಇಲ್ಲ. ಇಂತಹ ಕ್ರೇಜ್ ಕೇರಳದಲ್ಲಿ ಕಂಡು ಬರುತ್ತಿದ್ದು, ಹುಡುಗರ ಗುಂಪು ಪಂದ್ಯಗಳನ್ನು ವೀಕ್ಷಿಸಲು 23 ಲಕ್ಷ ರೂಪಾಯಿ ಖರ್ಚು ಮಾಡಿದೆ.

ಇದನ್ನೂ ಓದಿ: Rhino In Football Ground: ಫುಟ್ಬಾಲ್ ಗ್ರೌಂಡ್‌ನಲ್ಲಿ ಘೇಂಡಾಮೃಗ! ಸಖತ್‌ ವೈರಲ್‌ ಆಗ್ತಿದೆ ವಿಡಿಯೋ

ವಾಸ್ತವವಾಗಿ, ಪ್ರಪಂಚದಾದ್ಯಂತದ ವೀಕ್ಷಕರು FIFA ವಿಶ್ವಕಪ್ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಇದೇ ವಿಚಾರದಲ್ಲಿ ಕೇರಳದಲ್ಲಿ ಒಂದು ಘಟನೆ ಮುನ್ನೆಲೆಗೆ ಬಂದಿದೆ. ಸುದ್ದಿ ಮಾಧ್ಯಮ ಸಂಸ್ಥೆಯೊಂದು ಫೋಟೋ ಶೇರ್ ಮಾಡಿದ್ದು, ಅದರಲ್ಲಿರುವ ಯುವಕರು ಫುಟ್ ಬಾಲ್ ವೀಕ್ಷಿಸಲು ಎಷ್ಟು ಉತ್ಸುಕರಾಗಿದ್ದಾರೆಂದು ತೋರುತ್ತದೆ.

ಕೇರಳದ ಕೊಚ್ಚಿಯ ಮುಂಡಕ್ಕಮುಗಲ್ ಗ್ರಾಮದ 17 ಯುವಕರು 23 ಲಕ್ಷ ರೂ. ಖರ್ಚು ಮಾಡಿ ಮನೆಯೊಂದನ್ನು ಖರೀದಿಸಿದ್ದು, ಅದು ಕೇವಲ ಫಿಫಾ ವಲ್ಡ್ ಕಪ್ ವೀಕ್ಷಿಸಲು ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ ಈ ಮನೆಯಲ್ಲಿ 32 ತಂಡಗಳ ಧ್ವಜಗಳನ್ನೂ ಅಳವಡಿಸಲಾಗಿದೆ. ಇದರೊಂದಿಗೆ ಮೆಸ್ಸಿ, ರೊನಾಲ್ಡೊ ಅವರಂತಹ ಆಟಗಾರರ ದೊಡ್ಡ ಪೋಸ್ಟರ್ ಗಳನ್ನೂ ಹಾಕಲಾಗಿದೆ. ಇದಾದ ಬಳಿಕ ಈ ಮನೆಯಲ್ಲಿ ಎಲ್ಲರೂ ಒಟ್ಟಾಗಿ ಪಂದ್ಯ ವೀಕ್ಷಿಸಲು ದೊಡ್ಡ ಪರದೆಯನ್ನು ಅಳವಡಿಸಲಾಗಿದೆ. ಈ ಮನೆಯನ್ನು ಖರೀದಿಸಿದವರೊಬ್ಬರು ಈ ಮನೆಯ ಬಗ್ಗೆ ತಿಳಿಸಿದ್ದಾರೆ,

ಇದನ್ನೂ ಓದಿ:  Ration Card: ರೇಷನ್ ಕಾರ್ಡ್ ಹೊಂದಿರುವವರಿಗೆ ಕಹಿ ಸುದ್ದಿ: ಇನ್ಮುಂದೆ ಆ ಎಲ್ಲಾ ಕಾರ್ಡ್ ಗಳು ರದ್ದು!

ಫುಟ್ಬಾಲ್ ಜಗತ್ತನ್ನು ನೋಡುವ ಈ ಸಂಪ್ರದಾಯವನ್ನು ನಮ್ಮ ಜನರು ಹಲವು ವರ್ಷಗಳಿಂದ ಮಾಡುತ್ತಿದ್ದಾರೆ, ಆದರೆ ಈ ಬಾರಿ ನಾವು ವಿಭಿನ್ನವಾಗಿ ಪ್ರಯತ್ನಿಸಿದ್ದೇವೆ. ಈ ಮನೆಯನ್ನು ಖರೀದಿಸಿದ್ದೇವೆ ಎಂದು ಅವರು ಹೇಳಿದರು. ನಾವು 17 ಮಂದಿ ಸೇರಿ 23 ಲಕ್ಷ ರೂ.ಗೆ ಮನೆ ಖರೀದಿಸಿದ್ದೇವೆ. ಯಾರು ಬೇಕಾದರೂ ಇಲ್ಲಿಗೆ ಬಂದು ಪಂದ್ಯ ವೀಕ್ಷಿಸಬಹುದು ಎಂದು ಹೇಳಿದರು. ಯಾರಿಗೂ ಯಾವುದೇ ನಿರ್ಬಂಧವಿಲ್ಲ ಮತ್ತು ಈ ಸಂಪ್ರದಾಯವು ಭವಿಷ್ಯದಲ್ಲಿಯೂ ಮುಂದುವರಿಯಬೇಕೆಂದು ನಾವು ಬಯಸುತ್ತೇವೆ ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News