Important Legal rights for marriad woman : ಗಂಡ ಜಗಳವಾಡಿದಾಗ ಹೆಂಡತಿ ಅಳುತ್ತಾ ಕೂರಬೇಕಾಗಿಲ್ಲ. ಪತಿಯಿಂದ ದೂರ ಇರುತ್ತೀರಾ ಎಂದರೆ ಹೆಣ್ಣು ಮಕ್ಕಳು ತವರಿಗೆ ಹೋಗಬೇಕಾಗಿಲ್ಲ. ನಿಮಗೂ ಕಾನೂನಿನಲ್ಲಿ ರಕ್ಷಣೆಯಿದೆ. ಕಾನೂನು, ನಿಮ್ಮ ಹಕ್ಕು ತಿಳಿದರೆ ನೀವು ನ್ಯಾಯಕ್ಕೆ ಹೋರಾಡಬಹುದು. ಮಹಿಳೆ ಮೇಲೆ ದೌರ್ಜನ್ಯವಾಗುತ್ತಿದ್ದರೆ ಆಕೆ ಕಾನೂನಿನ ನೆರವು ಪಡೆದು ನ್ಯಾಯಕ್ಕಾಗಿ ಹೋರಾಡಬಹುದು. ಈ ಬಗ್ಗೆ ಮಹಿಳೆಗೆ ಕಾನೂನಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜ್ಞಾನವಿರಬೇಕು. ಕುಟುಂಬದಲ್ಲಿ ಜಗಳವಾದರೆ ಮಹಿಳೆ ಯಾವೆಲ್ಲ ಕಾನೂನಿನ ನೆರವು ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.
ಪತಿಯಿಂದ ಮನೆ ಕೇಳಬಹದು: ಗಂಡ ಮತ್ತು ಹೆಂಡತಿ ದೂರವಾದರೆ ಕಾನೂನಿನ ಪ್ರಕಾರ ಹೆಂಡತಿಗೆ ತನ್ನ ಪತಿಯಿಂದ ಪ್ರತ್ಯೇಕ ಮನೆ ಕೇಳುವ ಅಧಿಕಾರವಿದೆ. ಹಿಂದೂ ವಿವಾಹ ಕಾಯಿದೆ 1955ರ ನಿಯಮದ ಪ್ರಕಾರ, ಪತ್ನಿ ತನ್ನ ಹೆತ್ತವರ ಮನೆಯಲ್ಲಿ ಬಲವಂತವಾಗಿ ವಾಸಿಸಬೇಕಾಗಿಲ್ಲ. ಆಕೆ ಬಯಸಿದರೆ ತವರು ಮನೆಯಲ್ಲಿ ಇರಬಹುದು. ಇಲ್ಲವಾದರೆ ಗಂಡನಿಗೆ ಮನೆ ನೀಡುವಂತೆ ಬೇಡಿಕೆ ಇಡಬಹುದು.
ಇದನ್ನೂ ಓದಿ: Palmistry: ಕೈನಲ್ಲಿ ಈ ರೇಖೆ ಹೊಂದಿರುವವರಿಗೆ ಸಂಪತ್ತಿನ ಜೊತೆಗೆ ಸರ್ಕಾರಿ ನೌಕರಿ ಭಾಗ್ಯ!
ಡೌರಿ ಹಾಗೂ ಕಿರುಕುಳ ಕಾನೂನು : ವರದಕ್ಷಿಣೆ ನಿಷೇಧ ಕಾಯಿದೆ 1961ರ ಅಡಿ ವರದಕ್ಷಿಣೆ ಪಡೆಯುವುದು ಹಾಗೂ ಕೊಡುವುದನ್ನು ನಿಷೇಧಿಸಲಾಗಿದೆ. ಮದುವೆಗೆ ಮೊದಲು ಅಥವಾ ನಂತರ ವರದಕ್ಷಿಣೆಗಾಗಿ ಗಂಡ ಹಾಗೂ ಕುಟುಂಬಸ್ಥರು ಕಿರುಕುಳ ನೀಡಿದರೆ ಆಕೆಗೆ ದೂರು ನೀಡುವ ಅಧಿಕಾರವಿದೆ.ಅತ್ತೆ, ಮಾವನ ವಿರುದ್ಧವೂ ಸಹ ಆಕೆ ದೂರು ಕೊಡಬಹುದು.
ಗಂಡನ ಮನೆಯಲ್ಲಿ ವಾಸಿಸುವ ಹಕ್ಕು : ಕೌಟುಂಬಿಕ ದೌರ್ಜನ್ಯ ಹಿಂದಿನಿಂದಲೂ ಇದೆ. ನಾನಾ ಕಾರಣಕ್ಕೆ ಗಂಡ ಅಥವಾ ಆತನ ಕುಟುಂಬದವರು ಮಹಿಳೆಯನ್ನು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ ಸಾಕಷ್ಟು ಪ್ರಕರಣಗಳಿವೆ. ಆದರೆ ಗಂಡ, ಅಥವಾ ಅತ್ತೆ ಮನೆಯವರು ಮಹಿಳೆಯನ್ನು ಮನೆಯಿಂದ ಹೊರ ಹಾಕುವ ಅಥವಾ ತವರಿಗೆ ಕಳುಹಿಸುವ ಅಧಿಕಾರ ಇರುವುದಿಲ್ಲ. ಮನೆ ಗಂಡನ ಹೆಸರಲ್ಲಿ ಇರಲಿ ಅಥವಾ ಇಲ್ಲದಿರಲಿ. ಗಂಡ ಮೃತಪಟ್ಟಿದ್ದರು ಸಹ ಪತ್ನಿ ಅದೇ ಮನೆಯಲ್ಲಿ ವಾಸಿಸಬಹುದು. ಇನ್ನೂ ಸ್ವಂತ ಅಥವಾ ಬಾಡಿಗೆ ಮನೆಯಾಗಿದ್ದರೂ ಸಹ ಮಹಿಳೆಯನ್ನು ಮನೆಯಿಂದ ಹೊರ ಕಳುಹಿಸಲು ಸಾಧ್ಯವಿಲ್ಲ.
ಇದನ್ನೂ ಓದಿ: Dream Science: ಕನಸಿನಲ್ಲಿ ಇವುಗಳನ್ನು ನೋಡುವುದು ಶುಭ ಸಂಕೇತ
ಸ್ತ್ರೀಧನದ ಹಕ್ಕು : ಹೆಣ್ಣು ಮಕ್ಕಳು ಮದುವೆಯಲ್ಲಿ , ಗರ್ಭಾವಸ್ಥೆ, ಮದುವೆಯ ಮೊದಲು, ಮದುವೆಯ ನಂತರ ಪಡೆಯುವ ಎಲ್ಲಾ ಉಡುಗೊರೆ, ಹಣ ಹಾಗೂ ಆಭರಣಗಳು ಮೇಲೆ ಕಾನೂನಿನ ಪ್ರಕಾರ ಆಕೆಗೆ ಮಾತ್ರ ಹಕ್ಕಿರುತ್ತದೆ. ಯಾವ ರೂಪದಲ್ಲಿದ್ದರೂ ಸಹ ಆಕೆಗೆ ಮಾತ್ರ ಹಕ್ಕಿರುತ್ತದೆ. ಗಂಡ ಹಾಗೂ ಅತ್ತೆ ಮನೆಯವರು ನೀಡುವ ಉಡುಗೊರೆ ಮೇಲೆ ಸಹ ಪತ್ನಿಗೆ ಹಕ್ಕಿರುತ್ತದೆ.
ಹಿಂಸೆಯ ವಿರುದ್ಧ ಹೋರಾಡುವ ಹಕ್ಕು: ಕೌಟುಂಬಿಕ ಹಿಂಸಾಚಾರ ಕಾಯಿದೆ 2005ರ ಅಡಿ ಮಹಿಳೆ ಯಾವುದೇ ಸಂದರ್ಭದಲ್ಲೂ ಸಹ ತನ್ನ ಮೇಲೆ ದೌರ್ಜನ್ಯವಾದರೆ ದೂರು ಸಲ್ಲಿಸಬಹುದು .ಲೈಂಗಿಕ,ಭಾವನಾತ್ಮಕ,ದೈಹಿಕ ಹಿಂಸೆ ನೀಡಿದರೆ ಕಾನೂನು ಹೋರಾಟ ನಡೆಸಬಹುದು. ಇನ್ನೂ ಆರ್ಥಿಕ, ಆಸ್ತಿ, ಹಣ ಹಾಗೂ ಆಭರಣವನ್ನು ಬಲವಂತವಾಗಿ ಪಡೆದುಕೊಂಡರೆ ಇದರ ವಿರುದ್ಧವೂ ದೂರು ಸಲ್ಲಿಸಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.