ಶುಕ್ರ ಗ್ರಹ ಡಿಸೆಂಬರ್ನಲ್ಲಿ ಎರಡು ಬಾರಿ ತನ್ನ ರಾಶಿಯನ್ನು ಬದಲಾಯಿಸಲಿದೆ. ಒಮ್ಮೆ ಶುಕ್ರನು ಮಕರ ರಾಶಿಯಲ್ಲಿ ಗೋಚರಿಸಿದರೆ ಮತ್ತೊಮ್ಮೆ ಧನು ರಾಶಿಯಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಯಾವುದೇ ಒಂದು ಗ್ರಹದ ಸ್ಥಾನದಲ್ಲಾಗುವ ಬದಲಾವಣೆ ದ್ವಾದಶ ರಾಶಿಗಳ ಮೇಲೂ ಬೀರುತ್ತದೆ. ಡಿಸೆಂಬರ್ನಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಈ ಪೈಕಿ ಶುಕ್ರ ಗ್ರಹ ಕೂಡಾ ಒಂದು. ಶುಕ್ರ ಗ್ರಹ ಡಿಸೆಂಬರ್ನಲ್ಲಿ ಎರಡು ಬಾರಿ ತನ್ನ ರಾಶಿಯನ್ನು ಬದಲಾಯಿಸಲಿದೆ. ಒಮ್ಮೆ ಶುಕ್ರನು ಮಕರ ರಾಶಿಯಲ್ಲಿ ಗೋಚರಿಸಿದರೆ ಮತ್ತೊಮ್ಮೆ ಧನು ರಾಶಿಯಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಧನು ರಾಶಿ ಡಿಸೆಂಬರ್ನಲ್ಲಿ ಶುಕ್ರನ ಸಂಚಾರವು ಈ ರಾಶಿಚಕ್ರದ ಜನರಿಗೆ ಅದೃಷ್ಟವನ್ನು ನೀಡುತ್ತದೆ. ಶುಕ್ರ ಗ್ರಹ ಡಿಸೆಂಬರ್ನಲ್ಲಿ ಎರಡು ಬಾರಿ ಗೋಚರಿಸಲಿದೆ. ಧನು ರಾಶಿಯಲ್ಲಿ ಶುಕ್ರನ ಗೋಚರ ಧನು ರಾಶಿಯವರಿಗೆ ವಿಶೇಷ ಲಾಭವನ್ನು ನೀಡುತ್ತದೆ. ಹಣದ ಆಗಮನಕ್ಕೆ ನಾನಾ ಮಾರ್ಗಗಳು ತೆರೆದುಕೊಳ್ಳುತ್ತವೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು.
ಕುಂಭ ರಾಶಿ ಈ ರಾಶಿಯವರಿಗೆ ಈ ಸಮಯವು ಮಂಗಳಕರ ಮತ್ತು ಫಲದಾಯಕವಾಗಿರುತ್ತದೆ. ಈ ರಾಶಿಚಕ್ರದ 11 ನೇ ಮನೆಯಲ್ಲಿ ಶುಕ್ರನ ಸಂಕ್ರಮಣ ನಡೆಯಲಿದೆ. ಇದನ್ನು ಆದಾಯ ಮತ್ತು ಲಾಭದ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ಹಣ ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ. ಆದಾಯದಲ್ಲಿ ಅಪಾರ ಪ್ರಮಾಣದ ಹೆಚ್ಚಳವಾಗಲಿದೆ. ಏನೇ ಕೆಲಸ ಮಾಡಿದರೂ ಅದೃಷ್ಟ ಕೈ ಹಿಡಿಯಲಿದೆ.
ವೃಶ್ಚಿಕ ರಾಶಿ ಡಿಸೆಂಬರ್ನಲ್ಲಿ ಶುಕ್ರನ ಸಂಕ್ರಮವು ಈ ರಾಶಿಯ ಜನರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿ ಸಾಬೀತಾಗಲಿದೆ. ಈ ರಾಶಿಚಕ್ರದ ಎರಡನೇ ಮನೆಯಲ್ಲಿ ಶುಕ್ರ ಗ್ರಹವು ಸಾಗಲಿದೆ. ಅದನ್ನು ಸಂಪತ್ತು ಮತ್ತು ಮಾತಿನ ಮನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ, ಹಠಾತ್ ಧನ ಲಾಭವಾಗುವ ಸಾಧ್ಯತೆ ಇದೆ. ಆದಾಯದ ಮೂಲದಲ್ಲಿ ಹೆಚ್ಚಳವಾಗಬಹುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ.
ಸಿಂಹ ರಾಶಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಕ್ರ ಸಂಕ್ರಮಣವು ಈ ರಾಶಿಯ ಜನರಿಗೆ ಅದೃಷ್ಟ ಹೊತ್ತು ತರಲಿದೆ. ಮಕ್ಕಳ ಸ್ಥಾನ, ಉನ್ನತ ಶಿಕ್ಷಣ ಮತ್ತು ಪ್ರೇಮ ಸಂಬಂಧ ಎಂದು ಪರಿಗಣಿಸಲಾದ ಸಿಂಹ ರಾಶಿಯ ಐದನೇ ಮನೆಯಲ್ಲಿ ಶುಕ್ರನು ಸಾಗಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯವನ್ನು ಕಾಣಬಹುದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಯಶಸ್ಸು ಸಿಗಲಿದೆ.