ಗೂಡ್ಸ್ ವಾಹನ ಸಂಚಾರ ನಿರ್ಬಂಧ : ಹೆಬ್ಬಾಳದಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್

ಗೂಡ್ಸ್ ವಾಹನಗಳನ್ನ ಬೆಳಗಿನ ಅವಧಿಯಲ್ಲಿ  ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿದ್ದು ಈ ಹಿಂದೆ 25 ನಿಮಿಷಗಳ ಪ್ರಯಾಣವನ್ನ ಏಳೆಂಟು ನಿಮಿಷಗಳಿಗೆ ಇಳಿಸಲಾಗಿದೆ ಎಂದು ಸಂಚಾರಿ ವಿಭಾಗದ ವಿಶೇಷ ಆಯುಕ್ತ ಡಾ.ಎಂ‌.ಸಲೀಂ ತಿಳಿಸಿದ್ದಾರೆ‌‌.

Written by - VISHWANATH HARIHARA | Edited by - Krishna N K | Last Updated : Nov 25, 2022, 06:31 PM IST
  • ಗೂಡ್ಸ್ ವಾಹನಗಳನ್ನ ಬೆಳಗಿನ ಅವಧಿಯಲ್ಲಿ ಸಂಚಾರ ನಿಷೇಧ
  • ಹೆಬ್ಬಾಳದಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್
  • ಸಂಚಾರಿ ವಿಭಾಗದ ವಿಶೇಷ ಆಯುಕ್ತ ಡಾ.ಎಂ‌.ಸಲೀಂ ಅವರಿಂದ ಮಾಹಿತಿ
ಗೂಡ್ಸ್ ವಾಹನ ಸಂಚಾರ ನಿರ್ಬಂಧ : ಹೆಬ್ಬಾಳದಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್ title=

ಬೆಂಗಳೂರು : ಗೂಡ್ಸ್ ವಾಹನಗಳನ್ನ ಬೆಳಗಿನ ಅವಧಿಯಲ್ಲಿ  ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿದ್ದು ಈ ಹಿಂದೆ 25 ನಿಮಿಷಗಳ ಪ್ರಯಾಣವನ್ನ ಏಳೆಂಟು ನಿಮಿಷಗಳಿಗೆ ಇಳಿಸಲಾಗಿದೆ ಎಂದು ಸಂಚಾರಿ ವಿಭಾಗದ ವಿಶೇಷ ಆಯುಕ್ತ ಡಾ.ಎಂ‌.ಸಲೀಂ ತಿಳಿಸಿದ್ದಾರೆ‌‌.

ವಾಹನ ಸಂಚಾರ ದಟ್ಟಣೆಯಿಂದಾಗಿ ಪ್ರತಿನಿತ್ಯ ಲಕ್ಷಾಂತರ ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದ ಹೈರಾಣಗಿದ್ದರು‌ ‌ಹೀಗಾಗಿ ಸಾದಹಳ್ಳಿ ಟೋಲ್ ನಿಂದ ಹೆಬ್ಬಾಳದವರೆಗೆ ಗೂಡ್ಸ್ ವಾಹನಗಳನ್ನು ಪ್ರತಿನಿತ್ಯ ,8.30ರಿಂದ 10.30ರವರೆಗೆ ನಿಷೇಧ ಮಾಡಿದ್ದ ಪರಿಣಾಮ ಶೇಕಡಾ 25ರಷ್ಟು ಸಂಚಾರ ದಟ್ಟಣೆ ತಗ್ಗಿದೆ‌‌. ಈ ಹಿಂದೆ ಹೆವಿ ವೈಕಲ್ ಗಳ ಸಂಚಾರದಿಂದ ಹೆಬ್ಬಾಳ ಜಂಕ್ಷನ್ ದಾಟಲು ಸುಮಾರು 25 ನಿಮಿಷ ಬೇಕಾಗುತಿತ್ತು. ಇದೀಗ ಏಳೆಂಟು ನಿಮಿಷಗಳಿಗೆ ತರಲಾಗಿದೆ. ವಾಹನ ದಟ್ಟಣೆ ಅನುಗುಣವಾಗಿ ರಸ್ತೆ ಮೂಲಸೌಕರ್ಯ ಕಲ್ಪಿಸಿದರೆ ಸಂಚಾರ ಸಮಸ್ಯೆ ನಿವಾರಿಸಬಹುದು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಮದ್ಯದ ನಶೆಯಲ್ಲಿ ವಿದ್ಯಾರ್ಥಿಗಳನ್ನು ಮನಸೋ ಇಚ್ಛೆ ಥಳಿಸಿದ ಭೂಪ

ಹೆಬ್ಬಾಳ ರೀತಿಯಲ್ಲಿ ನಗರದಲ್ಲಿ ಹಲವು ಜಂಕ್ಷನ್ ಗಳಲ್ಲಿ ಟ್ರಾಫಿಕ್‌ ದಟ್ಟಣೆ ಬಗ್ಗೆ ಅಧ್ಯಯನ ನಡೆಸಲಾಗುವುದು. ಕೆಲವು ಕಡೆ  ಟ್ರಾಫಿಕ್ ಮ್ಯಾನೇಜ್‌ಮೆಂಟ್ ಕಡೆಯಿಂದ ಲೋಪವಾದರೆ ಇನ್ನೂ ಕೆಲವಡೆ ತಾಂತ್ರಿಕ ಸಮಸ್ಯೆಯಿದೆ. ಗೊರಗುಂಟೆಪಾಳ್ಯದಲ್ಲಿ ಟ್ರಾಫಿಕ್ ಸಮಸ್ಯೆಯೆಗೆ ಪ್ರತಿಕ್ರಿಯಿಸಿ ಅಲ್ಲಿ ಬೇರೆ ರೀತಿಯಲ್ಲಿ ಕಾರ್ಯರೂಪ ತರಲು ಅಧ್ಯಯನ ನಡೆಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಈ ಬಗ್ಗೆ ಸುತ್ತೋಲೆ ಹೊರಡಿಸುತ್ತೇವೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News