ಬೇಕಾಬಿಟ್ಟಿ ಒನ್ ವೇನಲ್ಲಿ ಚಾಲನೆ ಮಾಡ್ತಿದ್ದವರಿಗೆ ಶಾಕ್
ಬೆಂಗಳೂರು ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ
ಒಂದೂವರೆ ಗಂಟೆಯಲ್ಲಿ 2 ಲಕ್ಷ 64 ಸಾವಿರ ದಂಡ ವಸೂಲಿ
ಒಂದೂವರೆ ಗಂಟೆ ಅವಧಿಲ್ಲಿ ಬರೊಬ್ಬರಿ 525 ಕೇಸ್ ದಾಖಲು
ದ್ವಿಚಕ್ರ ವಾಹನ ಸವಾರರ ಮೇಲೆಯೇ ಬರೊಬ್ಬರಿ 423 ಕೇಸ್
ವಾಹನ ಸವಾರರೇ ಗಮನಿಸಿ ಇಂದಿನಿಂದ ಪೀಣ್ಯ ಫ್ಲೈ ಓವರ್ ಬಂದ್ - ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆ ಶುಕ್ರವಾರದವರೆಗೂ ಮೇಲ್ಸೇತುವೆ ನಿರ್ಬಂಧ - ಸಂಚಾರಿ ಪೊಲೀಸರಿಂದ ಪರ್ಯಾಯ ಮಾರ್ಗ ಬಳಸಲು ಸೂಚನೆ
ಮತ್ತೆ ರಿಯಾಯಿತಿಗೆ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ 2 ದಿನದಲ್ಲಿ ಸಂಗ್ರಹವಾಯ್ತು 50 ಲಕ್ಷ ರೂ. ದಂಡ..! 2 ದಿನದಲ್ಲಿ 15,980 ಕೇಸ್ಗಳು ಕ್ಲಿಯರ್..! ಒಟ್ಟು 50,71,850 ರೂ. ದಂಡ ಸಂಗ್ರಹ..!
ರಾಜ್ಯದಲ್ಲಿ ಇಂದು ಬೆಳಗ್ಗಿನಿಂದಲೇ ಮುಂಗಾರು ಚುರುಕುಗೊಂಡಿದೆ. ಬೆಂಗಳೂರಿನ ಹಲವೆಡೆ ಬಾರಿ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಹಾಗೆ ಮಳೆಯ ಕಾರಣ ಇಂದು ಬಿಬಿಎಂಪಿ ಜೆಸಿಬಿ ಘರ್ಜನೆಯನ್ನ ನಿಲ್ಲಿಸಿದೆ.
CM, DCM Oath Taking: ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮಕ್ಕಾಗಿ ಕಂಠೀರವ ಸ್ಟೇಡಿಯಂನಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಇನ್ನೊಂದೆಡೆ ಸ್ಟೇಡಿಯಂ ಸುತ್ತಾ ಮುತ್ತಾ ಸಂಚಾರ ದಟ್ಟಣೆ ಸಾಧ್ಯತೆ ಇರುವುದರಿಂದ ಕಂಠೀರವ ಸ್ಟೇಡಿಯಂ ಗೆ ಕನೆಕ್ಟ್ ಆಗೋ ರಸ್ತೆ ಮಾರ್ಗ ಬದಲಾವಣೆ ಮಾಡಿ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.
CM-DCM swearing Ceremony: ಮೇ 20ರಂದು ಮೊದಲ ದಿನ ಗಣಿತ ಮತ್ತು ಜೀವಶಾಸ್ತ್ರದ ಪರೀಕ್ಷೆ ಇದ್ದು, ಬೆಳಗ್ಗೆ 10.30ಕ್ಕೆ ಸಿಟಿಇ ಪರೀಕ್ಷೆಗಳು ಆರಂಭವಾಗಲಿವೆ. ಇದೇ ದಿನ ಮಧ್ಯಾಹ್ನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ಬೆಳಗ್ಗೆಯಿಂದಲೇ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಪಕ್ಷದ ಕಾರ್ಯಕರ್ತರು, ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ನಗರದ ಬಹುತೇಕ ಎಲ್ಲ ಭಾಗಗಳ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ವಾಹನಗಳ ದಂಡವಸೂಲಿ ಮಾಡುವುದು ಬೆಂಗಳೂರು ಸಂಚಾರಿ ಪೊಲೀಸರಿಗೆ ಒಂದು ದೊಡ್ಡ ಸವಾಲಾಗಿದೆ. ಹೀಗಾಗಿ ಬೇರೆ ಜಿಲ್ಲೆಯಿಂದ ಬರುವ ವಾಹನಗಳ ಮೇಲೆ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವ ಟ್ರಾಫಿಕ್ ಪೋಲಿಸ್ ಪಡೆ, ಟೋಲ್ಗೇಟ್ನಲ್ಲಿಯೇ ಕೇಸ್ ಕ್ಲಿಯರ್ ಮಾಡಲು ಭರ್ಜರಿ ಪ್ಲಾನ್ ರೂಪಿಸಿದೆ.
ಪ್ರಯಾಣಿಕರಿಂದ ಆಟೋ ಚಾಲಕರ ಬೇಕಾಬಿಟ್ಟಿ ಸುಲಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹಾಗೂ BMRCL ಯೋಜನೆ ರೂಪಿಸಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣದ ಎದುರು ಪ್ರೀಪೇಯ್ಡ್ ಆಟೋ ನಿಲ್ದಾಣವನ್ನು ಆರಂಭಿಸಲು ಪ್ಲಾನ್ ಮಾಡಲಾಗುತ್ತಿದೆ.
ಗೂಡ್ಸ್ ವಾಹನಗಳನ್ನ ಬೆಳಗಿನ ಅವಧಿಯಲ್ಲಿ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿದ್ದು ಈ ಹಿಂದೆ 25 ನಿಮಿಷಗಳ ಪ್ರಯಾಣವನ್ನ ಏಳೆಂಟು ನಿಮಿಷಗಳಿಗೆ ಇಳಿಸಲಾಗಿದೆ ಎಂದು ಸಂಚಾರಿ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಸಲೀಂ ತಿಳಿಸಿದ್ದಾರೆ.
ಸೆ.26 ರಿಂದ 28ರವರೆಗೆ ಗಣ್ಯ ವ್ಯಕ್ತಿಗಳು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಕಂಟ್ರೋಲ್ಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಕಬ್ಬನ್ ಪಾರ್ಕ್, ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಏಕಮುಖ ರಸ್ತೆಗಳನ್ನು ದ್ವಿಮುಖ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗಿದೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಎರಡು ದಿನಗಳು ನಡೆದ "Manthan" ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಚಿವ ಗಡ್ಕರಿ, ರಾಜ್ಯ ಸರ್ಕಾರ ಜತೆ ನಡೆಸಿದ "Bengaluru de-congestion" ಸಭೆ ಕುರಿತು ವಿವರಣೆ ನೀಡಿದರು.
ರಸ್ತೆ ಕಾಮಗಾರಿ ಮುಗಿದ್ರೂ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ. ನಗರದ ಮಲ್ಲೇಶ್ವರಂ ಸಂಪಿಗೆ ರಸ್ತೆ ಕಾಮಗಾರಿ ಮುಗಿದ್ರೂ ಕಡಿಮೆಯಾಗಿಲ್ಲ ಟ್ರಾಫಿಕ್ ಪರದಾಟ. ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ಕೊಟ್ಟಿರುವ ಬಿಬಿಎಂಪಿ ಬಸ್, ಲಾರಿಗಳಿಗೆ ನೈಂಟಿ ರೂಟ್ ಮೂಲಕವೇ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಚಿಕ್ಕ ರಸ್ತೆಯಲ್ಲಿ ಹೆವಿ ವಾಹನಗಳ ಸಂಚಾರದಿಂದ ಹೆಚ್ಚಾದ ಟ್ರಾಫಿಕ್ ಕಿರಿಕಿರಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.