Mobile Tower Stolen: ಟೆಲಿಕಾಂ ಕಂಪನಿಯ ಅಧಿಕಾರಿಗಳಂತೆ ನಟಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಟವರ್ನ್ನೇ ಕದ್ದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ. ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದ ಟವರ್ ಪರಿಶೀಲಿಸಲೆಂದು ಕಂಪನಿಯ ಅಧಿಕಾರಿಗಳು ಶನಿವಾರ (ನವೆಂಬರ್ 26) ಟವರ್ ಇದ್ದ ಸ್ಥಳಕ್ಕೆ ಆಗಮಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವ ಟವರ್ ಅಳವಡಿಸಿರುವ ಜಮೀನಿನ ಮಾಲೀಕರು, ಸುಮಾರು 15-16 ವರ್ಷಗಳ ಹಿಂದೆ ಈ ಜಾಗದಲ್ಲಿ ಟವರ್ ಅಳವಡಿಸಲಾಗಿತ್ತು. ಇತ್ತೀಚಿಗೆ ತಾವು ಟೆಲಿಕಾಂ ಕಂಪನಿಯ ಅಧಿಕಾರಿಗಳು ಎಂದು ಹೇಳಿಕೊಂಡು ಬಂದಿದ್ದ ಖದೀಮರು ಟವರ್ ಅಳವಡಿಸಲು ಮಾಡಿಕೊಂಡಿದ್ದ ಒಪ್ಪಂದ ಮುಗಿದಿದೆ ಎಂದು ಹೇಳಿ ಅದನ್ನು ಕದ್ದೊಯ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- ಹಿಟ್ ಅಂಡ್ ರನ್ ಮಾಡಿ ಎಸ್ಕೇಪ್ ಆಗಿದ್ದ ಅಪರಾಧಿ ಪೊಲೀಸ್ ಬಲೆಗೆ
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಲಕ್ಷಾಂತರ ರೂಪಾಯಿ ಮೌಲ್ಯದ ಟವರ್ ಅನ್ನು ಕೆಡವಲು ಖದೀಮರು ಎರಡು-ಮೂರು ದಿನ ಸಮಯ ತೆಗೆದುಕೊಂಡಿದ್ದು ಬಳಿಕ ಆ ಟವರ್ ಅನ್ನು ಟ್ರಕ್ನಲ್ಲಿ ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಪ್ರೇಯಸಿ ಜೊತೆ ಐಷಾರಾಮಿ ಜೀವನ ನಡೆಸೋಕೆ ಎಟಿಎಂ ದೋಚಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ
ಮಾಧ್ಯಮ ವರದಿಗಳ ಪ್ರಕಾರ, ಪಾಟ್ನಾದ ಗರ್ದ್ನಿಬಾಗ್ ಪೊಲೀಸ್ ಠಾಣೆಯ ಯಾರ್ಪುರ್ ರಜಪೂತಾನ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಘಟನೆ ಕುರಿತಂತೆ ಗಾರ್ಡ್ನಿಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಟವರ್ ಅನ್ನು ಕೆಡವಲು ಉಪಕರಣಗಳು ಮತ್ತು ಗ್ಯಾಸ್ ಕಟರ್ಗಳೊಂದಿಗೆ ಶಸ್ತ್ರಸಜ್ಜಿತವಾದ ಸುಮಾರು 25 ಕಳ್ಳರ ತಂಡವು ಸ್ಥಳಕ್ಕೆ ಆಗಮಿಸಿತ್ತು ಎಂದು ದೂರುದಾರರು ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ ಈ ಖತರ್ನಾಕ್ ಕಳ್ಳರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಟವರ್ ಕದ್ದ ಖತರ್ನಾಕ್ ಕಳ್ಳರು
ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಟವರ್ನ್ನೇ ಕದ್ದ ಕಳ್ಳರು
ಮೊಬೈಲ್ ಟವರ್ನ್ನೇ ಕದ್ದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ
ಸುಮಾರು 15-16 ವರ್ಷಗಳ ಅಳವಡಿಸಲಾಗಿದ್ದ ಟವರ್ ಕದ್ದ ಖದೀಮರು