Viral Video : ನಿಂತಿದ್ದ ಆಟೋದಲ್ಲಿ ದೆವ್ವದ ಕುಚೇಷ್ಟೆ? ಚಾಲಕನಿಲ್ಲದೇ ಚಲಿಸಿದ ರಿಕ್ಷಾ ಕಂಡು ದಂಗಾದ ಜನ!

Viral Video : ರಸ್ತೆ ಅಪಘಾತ ಅಥವಾ ವಾಹನ ಡಿಕ್ಕಿಯಾದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿವೆ. ಆದರೆ ಯಾವುದೇ ಚಾಲಕ ಇಲ್ಲದೆ ವಾಹನ ಅಥವಾ ಮೋಟಾರ್ ಓಡುವುದುನ್ನು ಕಂಡರೆ ಬಹುಶಃ ಆಶ್ಚರ್ಯವಾಗಬಹುದು. 

Written by - Chetana Devarmani | Last Updated : Dec 4, 2022, 05:40 PM IST
  • ನಿಂತಿದ್ದ ಆಟೋದಲ್ಲಿ ದೆವ್ವದ ಕುಚೇಷ್ಟೆ?
  • ಚಾಲಕನಿಲ್ಲದೇ ಚಲಿಸಿದ ರಿಕ್ಷಾ ಕಂಡು ದಂಗಾದ ಜನ!
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video : ನಿಂತಿದ್ದ ಆಟೋದಲ್ಲಿ ದೆವ್ವದ ಕುಚೇಷ್ಟೆ? ಚಾಲಕನಿಲ್ಲದೇ ಚಲಿಸಿದ ರಿಕ್ಷಾ ಕಂಡು ದಂಗಾದ ಜನ!   title=
ಆಟೋ

Viral Video : ರಸ್ತೆ ಅಪಘಾತ ಅಥವಾ ವಾಹನ ಡಿಕ್ಕಿಯಾದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿವೆ. ಆದರೆ ಯಾವುದೇ ಚಾಲಕ ಇಲ್ಲದೆ ವಾಹನ ಅಥವಾ ಮೋಟಾರ್ ಓಡುವುದುನ್ನು ಕಂಡರೆ ಬಹುಶಃ ಆಶ್ಚರ್ಯವಾಗಬಹುದು. ಇಂತಹದೊಂದು ವಿಡಿಯೋ ಮುನ್ನೆಲೆಗೆ ಬಂದಿದ್ದು, ಚಾಲಕರಿಲ್ಲದೆ ಆಟೋ ರಿಕ್ಷಾವೊಂದು ರಸ್ತೆಯಲ್ಲಿ ಓಡಾಡುತ್ತಿದೆ.

ಇದನ್ನೂ ಓದಿ : Trending Video : ದೈತ್ಯ ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತು ಡ್ಯಾನ್ಸ್‌! ವಿಡಿಯೋ ವೈರಲ್

ನಿಜವಾಗಿ ಈ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ. ಇಲ್ಲಿನ ಮಾರುಕಟ್ಟೆಯೊಂದರಲ್ಲಿ ರಸ್ತೆಯಲ್ಲಿ ಕಂಡು ಬಂದ ದೃಶ್ಯ ಕಂಡು ಕೆಲವರು ಭಯಗೊಂಡಿದ್ದು, ದೆವ್ವ ಬಂದಿರಬಹುದೆಂದು ಭಾವಿಸಿದ್ದಾರೆ. ಇಲ್ಲಿ ಚಾಲಕರಿಲ್ಲದೆ ಆಟೋ ರಿಕ್ಷಾ ರಸ್ತೆಯಲ್ಲಿ ಸುತ್ತಾಡುವುದನ್ನು ಜನ ನೋಡಿದರು. ಇದನ್ನು ನೋಡಲು ಜನಸಾಗರವೇ ನೆರೆದಿತ್ತು. ಜನರು ಮೊಬೈಲ್‌ನಿಂದ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದರು.

 

 

ಇದನ್ನು ನೋಡಿದ ಜನರಿಗೆ ಚಾಲಕರಿಲ್ಲದೆ ಆಟೋ ರಿಕ್ಷಾ ಹೇಗೆ ಓಡುತ್ತಿದೆ ಎಂಬುದು ಅರ್ಥವಾಗಲಿಲ್ಲ. ಕೆಲವರು ಈ ಆಟೋ ರಿಕ್ಷಾವನ್ನು ನಿಲ್ಲಿಸಲು ಪ್ರಯತ್ನಿಸಿದರು ಆದರೆ ಅದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಮತ್ತು ಅದು ಚಲಿಸುತ್ತಲೇ ಇತ್ತು. ಕೊನೆಗೆ ಗುಂಪಿನಲ್ಲಿದ್ದ ಕೆಲವರು ಮತ್ತೆ ಮುಂದೆ ಬಂದು ಸಾಕಷ್ಟು ಪ್ರಯತ್ನದ ನಂತರ ಆಟೋ ನಿಲ್ಲಿಸಿದರು. 

ಇದನ್ನೂ ಓದಿ : Viral Video : ಮಕ್ಕಳೊಂದಿಗೆ ಟೀಚರ್ ಡ್ಯಾನ್ಸ್! ಸೊಂಟದ ವಿಷ್ಯಾ ಬ್ಯಾಡ ಓ ಶಿಷ್ಯಾ ಎಂದ ನೆಟ್ಟಿಜನ್‌!

ಚಾಲಕನಿಲ್ಲದೇ ರಸ್ತೆಯಲ್ಲಿ ಆಟೋ ಹೇಗೆ ಓಡಾಡುತ್ತಿದೆ ಎಂಬುದು ಕೊನೆಯವರೆಗೂ ಜನರಿಗೆ ಅರ್ಥವಾಗಿರಲಿಲ್ಲ. ಇಲ್ಲಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಏಕಾಏಕಿ ಈ ಆಟೋ ರಿಕ್ಷಾದ ಸ್ಟೇರಿಂಗ್ ಲಾಕ್ ಆಗಿದೆ. ಸ್ಟೇರಿಂಗ್ ಲಾಕ್ ಆದ ಕಾರಣ ಸುಮಾರು ಎರಡು ನಿಮಿಷಗಳ ಕಾಲ ಚಾಲಕನಿಲ್ಲದೇ ಆಟೋ ರಸ್ತೆಯಲ್ಲೇ ಸುತ್ತಾಡುತ್ತಿತ್ತು. ಸದ್ಯ ಇದರ ವಿಡಿಯೋ ಭಾರೀ ವೈರಲ್ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News